ಕನ್ನಡ ಚಿತ್ರರಂಗ ಅಪಾರ ಕಲಾವಿದರನ್ನು ಹೊಂದಿದೆ. ಹಿರಿಯ ನಟಿ ಲೀಲಾವತಿಯವರು ನಾಯಕಿಯಾಗಿ, ತಾಯಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಜೀವನದ ಸುಖ-ದುಃಖಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಲೀಲಾವತಿಯವರಿಗೆ ಸಿನಿಮಾದಲ್ಲಿ ನಾಯಕಿಯಾಗಿ ಪಾತ್ರ ಮಾಡುವ ಅವಕಾಶ ಸಿಗುತ್ತದೆ. ಮರುದಿನದ ಶೂಟಿಂಗಿಗೆ ಹಿಂದಿನ ದಿನ ರಾತ್ರಿ ನಿದ್ದೆ ಮಾಡದೆ ಕಾಯುತ್ತಾರೆ ಆದರೆ ಈ ಪಾತ್ರದಿಂದ ನಿಮ್ಮನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಮರುದಿನ ತಿಳಿದಾಗ ತುಂಬಾ ನೋವಾಯಿತು. ಅದು ನನಗೆ ತುಂಬಾ ದುಃಖದ ದಿನ ಎಂದು ಲೀಲಾವತಿಯವರು ಹೇಳಿದರು. ಇಂತಹ ಸಂದರ್ಭ ಅದೆಷ್ಟೋ ಜನ ಕಲಾವಿದರಿಗೆ ಬರುತ್ತದೆ ತಾಳ್ಮೆಯಿಂದ ಕಾದರೆ ನಂತರ ಒಳ್ಳೆಯ ಅವಕಾಶಗಳು ಸಿಗುತ್ತದೆ. ಲೀಲಾವತಿ ಅವರು ನಟಿಸಿದ ಸಂತ ತುಕಾರಾಮ ಹಾಗೂ ಭಕ್ತಕುಂಬಾರ ಸಿನಿಮಾ ಅವರಿಗೆ ಇಷ್ಟವಾದ ಸಿನಿಮಾ. ಬಹಳ ಕಷ್ಟದ ಸಮಯವನ್ನು ನೋಡಿದ ಲೀಲಾವತಿಯವರು ಹೊಟ್ಟೆಪಾಡಿಗಾಗಿ ಸಿನಿಮಾದಲ್ಲಿ ನಟಿಸುತ್ತಿದ್ದರು ಯಾವುದೇ ಪಾತ್ರ ಬರಲಿ ಅದಕ್ಕೆ ಸೈ ಎಂದು ನಟನೆ ಮಾಡುತ್ತಿದ್ದರು. ಲೀಲಾವತಿಯವರು ಪ್ರಾಣಿ ಪ್ರಿಯರಾಗಿದ್ದು ಬಹಳಷ್ಟು ಪ್ರಾಣಿಗಳನ್ನು ಸಾಕಿ ಸಲುಹಿದ್ದಾರೆ. ಪಲ್ಲಿ ಅನ್ನು ಸಹ ಇವರು ಸಾಕಿದ್ದಾರೆ, ಅಷ್ಟೇ ಅಲ್ಲದೆ ಇರುವೆಗಳಿಗೆ ಊಟ ಹಾಕುತ್ತಾರೆ. ಇವರ ಪ್ರಾಣಿ ಪ್ರೇಮವನ್ನು ಮೆಚ್ಚಲೇಬೇಕು. ಅವರಿಗೆ ಕೃಷಿ ಮಾಡುವುದೆಂದರೆ ಇಷ್ಟವಾದ ಕೆಲಸ. ಇತ್ತೀಚೆಗೆ ರವಿ ಬೆಳಗೆರೆಯವರು ನಿಧನರಾಗಿದ್ದು ಲೀಲಾವತಿಯವರು ರವಿಬೆಳಗೆರೆಯವರು ಇಷ್ಟು ಬೇಗ ಸಾಯಬಾರದಿತ್ತು, ಮತ್ತಷ್ಟು ಜನರಿಗೆ ಅವರು ಒಳ್ಳೆಯದನ್ನು ಮಾಡುವುದಿತ್ತು ಎಂದು ರವಿ ಬೆಳಗೆರೆ ಬಗ್ಗೆ ಹೇಳಿದರು. ಲೀಲಾವತಿ ಅವರ ಮಗ ಪತ್ರಕರ್ತರು ಕೇಳುತ್ತಿರುತ್ತಾರೆ ಅಪ್ಪನ ಹೆಸರನ್ನು ನನಗೆ ಯಾಕೆ ಹೇಳುತ್ತಿಲ್ಲ ಎಂದು ಕೇಳುತ್ತಾನೆ ಅಲ್ಲದೇ ನಾನು ಮರ್ಯಾದಸ್ತ ಅಪ್ಪನಿಗೆ ಹುಟ್ಟಿದ್ದೇನೆ ಎಂದು ಹೇಳುತ್ತಾನೆ. ಒಮ್ಮೆ ಆಸ್ಪತ್ರೆಯಲ್ಲಿ ತಾಯಿ ಆಪರೇಷನ್ ಗೆ ಮಗನು ಸಿಗ್ನೇಚರ್ ಮಾಡುತ್ತಾನೆ ಮಗನ ಆಪರೇಷನ್ ಗೆ ತಾಯಿ ಸಿಗ್ನೇಚರ್ ಮಾಡುತ್ತಾಳೆ. ಮಗನು ಆಗ ತಾಯಿಯ ಹತ್ತಿರ ಈಗಲೂ ಅಪ್ಪನ ಬಗ್ಗೆ ಹೇಳದೆ ಇದ್ದರೆ, ನಾನು ಸತ್ತ ಮೇಲೆ ಹೇಳುವೆಯಾ ಎಂದು ಕೇಳುತ್ತಾನೆ ಇದರಿಂದ ಲೀಲಾವತಿಯವರು ದುಃಖ ಪಡುತ್ತಾರೆ. ಮಗನ ಇಂತಹ ಮಾತುಗಳನ್ನು ಕೇಳಿದ ನಂತರ ಲೀಲಾವತಿಯವರು ಮಗನಿಗೆ ವಿಷಯ ತಿಳಿಸುವ ನಿರ್ಧಾರ ಮಾಡುತ್ತಾರೆ. ವಿಡಿಯೋ ಕೃಪೆ: ಮಿರರ್ ಕನ್ನಡ
ಪತ್ರಕರ್ತರ ಹತ್ತಿರ ಕೆಲವು ವಿಷಯಗಳನ್ನು ಹೇಳುತ್ತಾರೆ ಆಗ ರವಿಬೆಳಗೆರೆಯವರು ರಾಜ ಲೀಲಾ ವಿನೋದ್ ಎಂದು ಬರೆಸುತ್ತಾರೆ. ರವಿ ಬೆಳಗೆರೆ ಅವರು ಎಂದು ಮರೆಯದ ಹಾಡು ಕಾರ್ಯಕ್ರಮದಲ್ಲಿ ಲೀಲಾವತಿಯವರನ್ನು ವೇದಿಕೆಗೆ ಕರೆಸಿ ಬೇಸರದಿಂದ ಆ ವಸ್ತು ನಂದು ಈ ವಸ್ತು ನಂದು ಎಂದು ಹೇಳುತ್ತಾರೆ ಈ ಎರಡು ವಸ್ತು (ಜೀವ) ನನ್ನದು ಎಂದು ಹೇಳಿದ್ದರೆ ಅವರು ಎಲ್ಲಿಗೋ ಹೋಗುತ್ತಿದ್ದರು ಎಂದು ಹೇಳಿದರು. ಲೀಲಾವತಿಯವರು ಸತ್ಯವನ್ನು ಯಾರ ಮುಂದೆಯೂ ಹೇಳದೇ ಇರಲು ಕಾರಣ ಅವರನ್ನು ಮದುವೆಯಾದ ಒಬ್ಬಳು ಹೆಣ್ಣಿನ ಬದುಕು ಹಾಳಾಗಬಾರದೆಂಬ ಕಾರಣಕ್ಕೆ ದುಃಖವನ್ನು ಅಡಗಿಸಿಟ್ಟುಕೊಂಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಲೀಲಾವತಿಯವರ ಬಗ್ಗೆ ಕಮೆಂಟ್ ಮಾಡುತ್ತಾರೆ ಇದಕ್ಕೆ ಲೀಲಾವತಿ ಅವರು ಸತ್ಯ ಎಂದಿಗೂ ಸಾಯುವುದಿಲ್ಲ, ಆತ್ಮಕ್ಕೆ ಗೊತ್ತಿದೆ ನಾನೇನೆಂದು ಅವರು ಹೇಳಿದರು. ಲೀಲಾವತಿಯವರು ವಿನೋದ್ ರಾಜ್ ಅವರ ಬಗ್ಗೆ ತನ್ನ ಮಗನನ್ನು ಪ್ರೀತಿಯಿಂದ ಬೆಳೆಸಬೇಕು, ಅವನ ಬೇಡಿಕೆಗಳನ್ನು ಈಡೇರಿಸಬೇಕು, ಅವನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವಂಥವಳು ನಾನಾಗಬೇಕು ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿದರು. ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗ ವಿಷಯದಲ್ಲಷ್ಟೇ ಅಲ್ಲದೆ ಎಲ್ಲಾ ವಿಷಯದಲ್ಲೂ ಒಳ್ಳೆಯವರು ಎಂದು ಲೀಲಾವತಿಯವರು ಹೇಳಿಕೊಂಡರು. ಮುಂದಿನ ಜನ್ಮವೊಂದಿದ್ದರೆ ಮನುಷ್ಯನಾಗಿ ಹುಟ್ಟಿದರೆ ಎಲ್ಲರನ್ನು ಕರೆದು ಸಂತೋಷದಿಂದ ಅವರಿಗೆ ಊಟ ಬಡಿಸಬೇಕು ಎನ್ನುವುದು ಲೀಲಾವತಿಯವರ ಆಸೆ. ಪ್ರಾಣಿಗಳ ಮೇಲಿಟ್ಟಿರುವ ದಯೆಯನ್ನು ಹೀಗೆ ಕಾಪಾಡಿಕೊಂಡು ಹೋಗುವಂತೆ ದೇವರು ಶಕ್ತಿ ಕೊಡಲಿ ಎಂದು ಅವರು ಹೇಳಿಕೊಂಡರು. ಅವರ ಆಸೆಯಂತೆ ಅವರು ಹೆಚ್ಚು ಪ್ರಾಣಿಗಳನ್ನು ಸಾಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.