ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ

0 1

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕಾಂತಾರ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರತಿಯೊಂದು ರಾಜ್ಯದಲ್ಲಿ ಕೂಡ ಹೌಸ್ ಫುಲ್ ಪ್ರದರ್ಶನವನ್ನು ಯಶಸ್ವಿಯಾಗಿ ಕಾಣುತ್ತಿದೆ. ಇನ್ನು ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಶೋರ್ ಅವರ ಪಾತ್ರದ ಗುಣಗಾನವು ಕೂಡ ಜನರಲ್ಲಿ ನಡೆಯುತ್ತಿದೆ.

ಯಾವುದೇ ಪಾತ್ರವನ್ನು ನೀಡಿದರು ಕೂಡ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲಂತಹ ನಟ ಎಂದರೆ ಅದು ನಟ ಕಿಶೋರ್. ಕಿಶೋರ್ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುತೇಕ ಎಲ್ಲಾ ಪ್ರಮುಖ ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇನ್ನು ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕೂಡ ವ್ಯಾಪಕವಾಗಿ ಜನಮನ್ನಣೆಗೆ ಒಳಗಾಗಿದ್ದಾರೆ.

ಇಷ್ಟೆಲ್ಲ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವಂತಹ ನಟ ಆಗಿದ್ದರೂ ಕೂಡ ನಟ ಕಿಶೋರ್ ಅವರ ಜೀವನ ಎನ್ನುವುದು ನಿಜಕ್ಕೂ ಕೂಡ ಸರಳವಾದದ್ದು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದಾಕ್ಷಣ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಪಾರ್ಟ್ಮೆಂಟಿನಲ್ಲಿ ಅಥವಾ ಬೆಂಗಳೂರಿನ ಅಥವಾ ಮುಂಬೈ ಸೇರಿದಂತೆ ಇನ್ನಿತರ ಐಷಾರಾಮಿ ನಗರಗಳಲ್ಲಿ ಬೇರೆ ಸೆಲೆಬ್ರಿಟಿಗಳ ಹಾಗೆ ಇರುತ್ತಾರೆ ಎಂಬುದಾಗಿ ಭಾವಿಸುತ್ತಾರೆ ಆದರೆ ಕಿಶೋರ್ ಅವರ ಹಾಗೆ ಅಲ್ಲ.

ಹೌದು ಮಿತ್ರರೇ ಕಿಶೋರ್ ಅವರು ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿಯಲ್ಲಿ ಹಳ್ಳಿಯ ಜನರಂತೆ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು ಅವರು ಮತ್ತು ಅವರ ಪತ್ನಿ ಸೇರಿದಂತೆ ಅವರ ಇಬ್ಬರು ಮಕ್ಕಳು ಕೂಡ ಇರುವಂತಹ ಸಿಂಪಲ್ ಮನೆಯನ್ನು ಕೂಡ ನೀವು ಈ ವಿಡಿಯೋದಲ್ಲಿ ನೋಡಬಹುದು.

ಸ್ವಲ್ಪ ಹಣ ಬಂದರೂ ಕೂಡ ತಮ್ಮ ಆಡಂಬರದ ಜೀವನದ ಗತ್ತನ್ನು ತೋರಿಸುವ ಜನರ ನಡುವೆ ಕೋಟ್ಯಾಂತರ ರೂಪಾಯಿ ಹಣವನ್ನು ಸಂಭವನ ರೂಪದಲ್ಲಿ ಪಡೆದುಕೊಳ್ಳುವ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಕಲಾವಿದ ಆಗಿದ್ದರೂ ಕೂಡ ಇಂತಹ ಸರಳ ಜೀವನವನ್ನು ನಡೆಸುತ್ತಿರುವ ಕಿಶೋರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. Video Credit For Chandanavana

Leave A Reply

Your email address will not be published.