ತಿಥಿ ಸಿನಿಮಾ ಎಂದ ಕೂಡಲೇ ನೆನಪಾಗೋದು ಗಡ್ಡಪ್ಪ. ಹೌದೂ ಅಷ್ಟರಮಟ್ಟಿಗೆ ಗಡ್ಡಪ್ಪ ಹೆಸರನ್ನೂ ಮಾಡಿದ್ದರು. ತಿಥಿ ಸಿನಿಮಾವನ್ನು ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದರು . ಈ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಷ್ಟೇ ಅಲ್ಲದೇ 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ ‘ ತಿಥಿ ‘ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು. ಆ ವಯಸ್ಸಿನಲ್ಲೂ ಗಡ್ಡಪ್ಪನ ನಟನೆಗೆ ಪ್ರೇಕ್ಷಕ ಫಿದಾ ಆಗಿದ್ದಂತೂ ಸುಳ್ಳಲ್ಲ

ಮನುಷ್ಯನಿಗೆ ಯೋಗ ಮತ್ತು ಯೋಗ್ಯತೆ ಬರುವುದು ದೇವರ ಇಚ್ಛೇ. ಕೆಲವೊಬ್ಬರಿಗೆ ತುಂಬಾ ಸಣ್ಣ ವಯಸ್ಸಿಗೇ ಪ್ರಸಿದ್ಧರಾಗುವ ಯೋಗ ಬಂದರೆ ಇನ್ನೂ ಕೆಲವರಿಗೆ ತಮ್ಮ ಇಳಿ ವಯಸ್ಸಿನಲ್ಲಿ ಪ್ರಸಿದ್ಧರಾಗುತ್ತಾರೆ. ಆದರೆ ಅಲ್ಲಿಯವರೆಗೆ ಕಾಯುವ ಸಹನೆ ತಾಳ್ಮೆ ನಾವು ಬೆಳೆಸಿಕೊಳ್ಳಬೇಕು.

ತಿಥಿ ಸಿನಿಮಾ ಖ್ಯಾತಿಯ ಜೋಡಿ ಗಡ್ಡೆಪ್ಪ ಅಲಿಯಾಸ್ ಚೆನ್ನೆಗೌಡ ಮತ್ತು ಸೆಂಚುರಿ ಗೌಡ ಅಲಿಯಾಸ್ ಸಿಂಗಾರೇ ಗೌಡ ಇವರಿಬ್ಬರಿಗೂ ಸಹ ಯೋಗ ಕೂಡಿ ಬಂದದ್ದು ಇಳಿ ವಯಸ್ಸಿನಲ್ಲಿ. ಇವರು ತಮ್ಮ ಅಭಿನಯದ ಮೂಲಕ ಇಡೀ ಕರ್ನಾಟಕ ಮತ್ತು ಭಾರತ ಚಿತ್ರರಂಗ ಮಾತ್ರವಲ್ಲ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಅಭಿನಯಿಸಿದ ಸಿನೆಮಾ ಪಾತ್ರಧಾರಿಗಳು ಇವರು. ಇವರುಗಳು ಜನಜನಿತರಾಗಿರುವುದೇ ಅವರ ಸಿನಿಮಾ ಪಾತ್ರದ ಹೆಸರಾದ ಸೆಂಚುರಿ ಗೌಡ ಮತ್ತು ಗಡ್ಡಪ್ಪ ಎಂದು.

ಗಡ್ಡಪ್ಪ ಅಲಿಯಾಸ್ ಚನ್ನೆಗೌಡರ ನಿಜ ಜೀವನದ ಕುರಿತು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ಸಿನಿಮಾ ಆಕ್ಟರ್ ಎಂದರೆ ಅವ್ರು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರಿಗೆ ಯಾವ ಕೊರತೆಯೂ ಇಲ್ಲ. ಈ ವಯಸ್ಸಿನಲ್ಲಿ ಇವರು ಸುಂದರ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ನಾವು ಜನ ಸಾಮಾನ್ಯರು ಅಂದುಕೊಳ್ಳುತ್ತೇವೆ. ಆದರೆ ಅವರ ಜೀವನ ನಾವಂದು ಕೊಂಡಂತೆ ಸುಂದರವಾಗಿಲ್ಲ. ಹಾಗಿದ್ದರೆ ಅವರ ಜೀವನ ಹೇಗಿದೆ? ಈಗ ಅವರು ಏನು ಮಾಡ್ತಾ ಇದ್ದಾರೆ? ಸಿನೆಮಾ ರಂಗ ಗಡ್ಡಪ್ಪ ಅವರನ್ನು ಚೆನ್ನಾಗಿ ಬಳಸಿಕೊಂಡು ಕೈ ಬಿಡತಾ? ಇದೆಲ್ಲದರ ಕುರಿತು ಈ ಬರಹದಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ.

ಸಿನಿಮಾದಲ್ಲಿನ ನಟನೆಯಿಂದಾಗಿ ಅಸಾಮಾನ್ಯ ಖ್ಯಾತಿ ಪಡೆದವರು ಇವರು. ಮಂಡ್ಯ ಜಿಲ್ಲೆಯ ಒಂದು ಪುಟ್ಟ ಗ್ರಾಮದವರು ಇವರು. ಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಬಳಿಕ ಇವರ ಬದುಕು ಬದಲಾಗಲಿಲ್ಲ. ತಿಥಿ ಸಿನಿಮಾದಿಂದ ಜನರು ಗುರುತಿಸಿ ಪ್ರೀತಿ ಅಭಿಮಾನದಿಂದ ಮಾತನಾಡುವುದರ ಹೊರತಾಗಿ ಅವರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಅವರು ನಟಿಸಿದ ಚಿತ್ರಗಳು ತಿಥಿ, ಏನ್ ನಿನ್ ಪ್ರಾಬ್ಲಂ, ತರ್ಲೆ ವಿಲೇಜ್, ಗಡ್ಡಪ್ಪ ಸರ್ಕಲ್ ಮುಂತಾದವು.

ತಿಥಿ ಖ್ಯಾತಿಯ ಗಡ್ಡಪ್ಪ ಭಾರಿ ಸಂಭಾವನೆ ತಗೋತಾರಂತೆ ಎಂದೆಲ್ಲಾ ಕೇಳಿದ್ದೇವೆ. ಆದರೆ ಅವರು ಈ ಸಿನೆಮಾ ಮೂಲಕ ಜನಜನಿತವಾದರೆ ಹೊರತು ಲಕ್ಷ ಲಕ್ಷ ಸಂಪಾದನೆ ಮಾಡಿಲ್ಲ. ಅವರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ.ಅವರೀಗಿಗಾ 80 ವರ್ಷ. ಪತ್ನಿ ಮೃತಪಟ್ಟಿದ್ದಾಳೆ. 4 ಹೆಣ್ಣು ಮಕ್ಕಳಿಗೂ ಮದುವೆ ಆಗಿದೆ. ಇರುವ ಒಂದೂವರೆ ಎಕರೆ ಹೊಲದಲ್ಲಿ ರಾಗಿ, ಹುರುಳಿ ಬೆಳೆಯುತ್ತಿದ್ದರು ಆದರೆ ಈಗ ಮಳೆ ಇಲ್ಲದೆ ಅದು ಪಾಳು ಬಿದ್ದಿದೆ. ಅವರಿಗೂ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಮೊದಲು ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಒಬ್ಬರಿಂದಲೇ ಹೋಟೆಲ್ ನಡೆಸೋಕೆ ಸಾಧ್ಯ ಆಗ್ದೆ 10-12 ವರ್ಷ ಮಾಡಿ ನಿಲ್ಲಿಸಿದರು. ಆಮೇಲೆ ಹೇಗೋ ಜೀವನ ನಡೆಸಿದರು. ಈಗ ಸಿನೆಮಾ ಜನರು ನನ್ನನ್ನು ಕಲಾವಿದ ಎಂದು ಗುರುತಿಸಿ ಗೌರವ, ಪ್ರೀತಿ, ಅಭಿಮಾನ ತೋರಿಸುತ್ತಿದ್ದಾರೆ. ಒಟ್ಟಾರೆ ಈ ಸಿನಿಮಾ ನಟನೆಯಿಂದ ಅವರು ಜನಪ್ರಿಯರಾದರೇ ಹೊರತು ಅವರ ಆರ್ಥಿಕ ಸ್ಥಿತಿ ಸುಧಾರಣೆ ಆಗಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!