ಬೆಳ್ಳಿ ತೆರೆಗೆ ಬಿರುಗಾಳಿಯಂತೆ ಎಂಟ್ರಿ ಕೊಟ್ಟ ಜೇಮ್ಸ್, ಬಿಡುಗಡೆಗೂ ಮುನ್ನವೇ ವಿಶ್ವದಾಖಲೆ

0 1

ಇಂದು ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ.ಈ ಸಂಭ್ರಮವನ್ನು ಹಬ್ಬದಂತೆ ಅಚರಿಸಲು ಅಭಿಮಾನಿಗಳು , ಚಂದನವನ ಸಜ್ಜಾಗಿದೆ .ಪುನೀತ್ ಇಲ್ಲದ ಹೊತ್ತಿನಲ್ಲಿ ಪವರ್ ಸ್ಟಾರ್ ಮೊದಲ ಬರ್ತಡೇ ಬಂದಿದೆ . ಅಂದೇ ಜೇಮ್ಸ್ ಚಿತ್ರ ಸಹ ತೆರೆ ಕಾಣಲಿದೆ . ಅಪ್ಪು ಇಲ್ಲದ ನೋವಿನಲ್ಲೂ ಅಭಿಮಾನಿಗಳು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ .

ಪುನೀತ್ ರಾಜ್‌ಕುಮಾರ್ ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ , ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಜೇಮ್ಸ್ ಇಂದು ತೆರೆಗೆ ಅಪ್ಪಳಿಸುತ್ತಿದೆ ಅಪ್ಪು ಅವರ ಅಕಾಲಿಕ ನಿಧನದ ಬಳಿಕ ನಿರ್ಮಾಣವಾಗಿದ್ದ ಅನಿಶ್ಚಿತ ಪರಿಸ್ಥಿತಿಯನ್ನು ದೊಡ್ಮನೆ ಬೆಂಬಲದೊಂದಿಗೆ ಹಳಿಗೆ ಮರಳಿಸಿದ ನಿರ್ದೇಶಕ ಚೇತನ್ ಕುಮಾರ್.

ಜೇಮ್ಸ್ ಜೇಮ್ಸ್ ಜೇಮ್ಸ್ ಕನ್ನಡಿಗರ ಎದೆಯಲ್ಲಿ ಈಗ ಜೇಮ್ಸ್ ಬಿಟ್ಟರೆ ಬೇರೆ ಯಾವ ಪದವೂ ಗುನುಗುತ್ತಿಲ್ಲ ಪವರ್ ಸ್ಟಾರ್ ಡಾ ಪುನೀತ್ ರಾಜಕುಮಾರ್ ಅಭಿನಯದ ಕೊನೆ ಚಿತ್ರಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ ಅದರಲ್ಲೂ ವಿದೇಶದಲ್ಲಿರುವ ಕನ್ನಡಿಗರು ಜೇಮ್ಸ್ ಸಂಭ್ರಮವನ್ನ ದೊಡ್ಡ ಮಟ್ಟದಲ್ಲಿ ಆಚರಿಸಲು ಸಜ್ಜಾಗಿದ್ದು ರಾಜಕುಮಾರನ ಅಭಿನಯವನ್ನು ಕಣ್ಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಪವರ್ ಸ್ಟಾರ್ ಹೀಗೆ ಹೆಸರಲ್ಲೇ ಪವರ್ ಇಟ್ಕೊಂಡು, ಮನಸಲ್ಲಿ ಅಗಾಧ ಸಮಾಜ ಸೇವೆಯ ಮನೋಭಾವ ಹೊಂದಿದ್ದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಇಂದು ನಮ್ಮೊಂದಿಗಿಲ್ಲ ಆದರೆ ಅವರು ಬಿಟ್ಟು ಹೋದ ಕೊನೆಯ ಚಿತ್ರ ಜೇಮ್ಸ್ ಬೆಳ್ಳಿ ತೆರೆಗೆ ಬಿರುಗಾಳಿಯಂತೆ ಎಂಟ್ರಿ ಕೊಡುತ್ತಿದೆ ರಿಲೀಸ್‌ಗೂ ಮೊದಲೇ ಜೇಮ್ಸ್ ಮಾಡಿರುವ ಸೌಂಡ್ ನೋಡಿದ್ರೆ ಜೇಮ್ಸ್ ಬಿಡುಗಡೆ ದಿನ ಇಂದು ದೇಶದಲ್ಲಿ ದೀಪಾವಳಿ ಹಬ್ಬ ಮಾಡೋದು ಗ್ಯಾರಂಟಿ.

ಎಲ್ಲಿ ನೋಡಿದರೂ ಕೂಡ ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಸಿನಿಮಾದ ಸುದ್ದಿ.
ಕನ್ನಡ ಸಿನಿಮಾ ಒಂದು , ಹಿಂದೆಂದಿಗಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದ್ದೆ .. ಜೇಮ್ಸ್ ಸಿನಿಮಾ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗುತ್ತಿಲ್ಲ ಇಡೀ ವಿಶ್ವದಾದ್ಯಂತದ ಬಿಡುಗಡೆ ಆಗಲಿದೆ . ಮೊದಲ ದಿನ ಜೇಮ್ಸ್ ಸಿನಿಮಾ ಬಿಡುಗಡೆ ವಿಚಾರದಲ್ಲಿ ವಿಶ್ವ ದಾಖಲೆ ಬರೆಯಲಿದೆ . ನಿರ್ಮಾಪಕ ಕಿಶೋರ್ ಅವರು ಅತಿಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾವನ್ನ ರೀಲಿಸ್ ಮಾಡಲು ಸಜ್ಜಾಗಿದ್ದಾರೆ ಮಾರ್ಚ್ 17 ರಂದು ರೀಲಿಸ್ ಆಗುತ್ತಿರುವ ಜೇಮ್ಸ್ ಬರೋಬ್ಬರಿ 4000 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ

ಇದು ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಡುಗಡೆ ವಿಚಾರದಲ್ಲಿ ದೊಡ್ಡ ದಾಖಲೆ ಅಂತಾನೇ ಹೇಳಬಹುದು ಈಗಾಗಲೇ ಯುರೋಪ್ ನಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರ ಮಂದಿರಗಳ ಪಟ್ಟಿ ಕೂಡ ಬಿಡುಗಡೆ ಆಗಿದೆ ಕರ್ನಾಟಕದಲ್ಲೂ ಮೊದಲ ಹಂತದ ಥಿಯೇಟರ್ ಲಿಸ್ಟ್ ಕೂಡ ಬಿಡುಗಡೆ ಆಗಿದೆ .. ಸದ್ಯ ಕರ್ನಾಟಕದಲ್ಲಿ 400 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆ ಅಗಲಿದೆ ..

ಕೆನಡಾ , ಯೂರೋಪ್, ಯುಎಸ್ಎ, ಆಸ್ಟ್ರೇಲಿಯಾ ಸೇರಿ ಹೊರ ದೇಶಗಳ 72 ನಗರಗಳಲ್ಲಿ ಜೇಮ್ಸ್ ತೆರೆಗೆ ಬರುತ್ತಿದೆ ಯುಎಸ್‌ನಲ್ಲಿ 270 ಸ್ಕ್ರೀನ್ ಆಸ್ಟ್ರೇಲಿಯಾದಲ್ಲಿ 150 ಸ್ಕ್ರೀನ್ ಸೇರಿ ಹೊರ ದೇಶಗಳಲ್ಲಿ ಒಟ್ಟು 1000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿದೆ ವಿಶೇಷ ಎಂದರೆ ಆಸ್ಟ್ರೇಲಿಯಾ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ.

ಒಂದು ವಾರ ಈ ಎಲ್ಲಾ ಚಿತ್ರ ಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ . ಪ್ರತಿ ಚಿತ್ರಮಂದಿರಗಳ ಮುಂದೆಯೂ ಅಪ್ಪು ಅಭಿಮಾನಿಗಳು ಜೇಮ್ಸ್ ಸಿನಿಮಾದ ಜಾತ್ರೆಯನ್ನ ಮಾಡಲಿದ್ದಾರೆ ಹೌದ ಅಪ್ಪು ಅಭಿಮಾನಿಗಳು ಬೆಂಗಳೂರಿನ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಜೇಮ್ಸ್ ಸಿನಿಮಾವನ್ನ ಸಂಭ್ರಮಿಸಲು ಸಜ್ಜಾಗಿದ್ದಾರೆ ಬೆಳಗಿನ ಜಾವ ದಿಂದಲೇ ಜೇಮ್ಸ್ ಸಿನಿಮಾ ಸ್ಪೆಷಲ್ ಶೋಗಳು ಆರಂಭ ಆಗಲಿದೆ . ವಿಶೇಷ ಎನು ಅಂದ್ರೆ ಚಿತ್ರಮಂದಿರದಲ್ಲಿ A ನೇ ಸಾಲಿನಲ್ಲಿ 17 ನೇ ಸೀಟ್ ನಂಬರ್ ಅನ್ನ ಅಪ್ಪು ಗಾಗಿ ಮೀಸಲಿಡಲಾಗಿದೆ ಪುನೀತ್ ರಾಜ್‌ಕುಮಾರ್ ಅವರು 17 ನೇ ಸೀಟ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಕುಳಿತು ತಮ್ಮ ಸಿನಿಮಾವನ್ನ ನೋಡುತ್ತಾರೆ ಎಂದು ನಂಬಿದ್ದಾರೆ ಈ ಒಂದು ಕಾರಣಕ್ಕೆ ಒಂದು ಸೀಟ್ ಅನ್ನ ಅಪ್ಪುಗಾಗಿ ಮೀಸಲಿಡಲಿದ್ದಾರೆ.

Leave A Reply

Your email address will not be published.