ಅಭಿಜಿತ್ ಈ ಹೆಸರನ್ನ ಕೇಳದವರಿಲ್ಲ,ಇವರ ನಟನೆಗೆ ಭೇಷ್ ಅಂದವರಿಲ್ಲ.ಇವರ ಬಾಲ್ಯದ ಹೆಸರು ರಾಮಸ್ವಾಮಿ. 1963 ಜುಲೈ 30 ರಂದು ಚಿತ್ರದುರ್ಗದ ಚಳ್ಳಿಕೆರೆಯಲ್ಲಿ ಜನಿಸಿದರು.ಶಾಲಾದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು ಬೆಳೆದ ಮೇಲೆ ಊರು ತೊರೆದು ಬೆಂಗಳೂರಿಗೆ ಉದ್ಯೋಗ ಅರಸಿ ಬಂದರು. ಹಲವು ನಿರ್ದೇಶಕರ ಬಳಿ ಅವಕಾಶಕ್ಕಾಗಿ ಸುತ್ತಾಡಿದ ಮೇಲೆ `ಸಂಸಾರದ ಗುಟ್ಟು ಶಾಂತಿ ನಿವಾಸ’ ಜನ ನಾಯಕ’ ಮುಂತಾದ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿದರು.

ಅಭಿಜಿತ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕ. 80 ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು ನಾಯಕನಾಗಿ, ಖಳನಾಯಕನಾಗಿ ಮತ್ತು ಪೋಷಕ ನಟನಾಗಿ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ.

1990 ರಲ್ಲಿ ತೆರೆಕಂಡ ಕಾಲೇಜ್ ಹೀರೋ ಮತ್ತು ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದರು. 1993 ರಲ್ಲಿ ತೆರೆಕಂಡ ರಂಜಿತಾ' ಚಿತ್ರದಿಂದ ನಾಯಕನಾಗಿ ನಟಿಸಲಾರಂಭಿಸಿದರುಕೂಡ ತಾವು ನಡೆದ ಬಂದ ಹಾದಿಯನ್ನು ಮರೆಯದೆ ನಾಯಕನಾಗಿ ಯಶಸ್ವಿ ಆದ ಮೇಲೆ ಕೂಡ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಸಹೋದರನಾಗಿ ನಟಿಸಿದ ಪಾತ್ರ ಜನಮನ್ನಣೆ ಪಡೆಯುವುದರಲ್ಲಿ ಯಶಸ್ವಿಯಾದರು . 2005 ರಲ್ಲಿ ಸಮರ ಸಿಂಹ ನಾಯಕ ಎಂಬ ಚಿತ್ರವನ್ನು ನಿರ್ಮಾಣ ಕೂಡ ಮಾಡಿದರು. ಆದರೆ ಆ ಚಿತ್ರ ಅಷ್ಟೇನೂ ಯಶಸ್ವಿಯಾಗದೆ ನಿರಾಸೆ ಮೂಡಿಸಿತ್ತು. ನಂತರ 2009 ರಲ್ಲಿ ರಾಮಕುಮಾರ್ ನಾಯಕನಾಗಿ ನಟಿಸಿದಜೋಡಿ ನಂ 1′ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿದರು.

ಟೆಲಿವಿಷನ್ ಪರದೆಯ ಮೇಲೆ ತನ್ನದೇ ಆದ ಪ್ರಸಿದ್ದತ್ತೆ ಪಡೆದಿದ್ದ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಆಗಿನ ಕಾಲದಲ್ಲೇ ಜನರ ಮನಸ್ಸು ಗೆದ್ದಿದ್ದ ಅಕ್ಷರಮಾಲೆ ಎಂಬ ಗಾಯನ ಸ್ಫರ್ಧೆಯ ನಿರೂಪಕರಾಗಿ ಹನ್ನೆರೆಡು ವರ್ಷಗಳ ಕಾಲ ಕಾರ್ಯಕ್ರಮ ನೆಡೆಸಿ ಕೊಟ್ಟರು. ಇವರ ಜೊತೆಗೆ ಸಹ ನಿರೂಪಕರಾಗಿ ಸಂಗೀತಾ ರವಿಶಂಕರ್ ಅವರು ಜೊತೆಯಾಗಿ ನಿರೂಪಿಸುತ್ತಿದ್ದರು.

ಟೆಲಿವಿಷನ್ ನ ಮತ್ತೊಂದು ವಾಹಿನಿಯಾದ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯ ಮೂಲಕ ಮತ್ತೆ ನಮ್ಮೆಲ್ಲರನ್ನು ರಂಜಿಸಲು ಬಂದಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅವರು ತಮ್ಮ ಮೂವತೈದನೆ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಚ್ಚಿಕೊಂಡಿದ್ದು ಮತ್ತಷ್ಟು ಖುಷಿಯ ಸಂಗತಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!