ಪ್ರತಿಯೊಬ್ಬ ತಂದೆಗೆ ತನ್ನ ಮಗಳೆಂದರೆ ಬಹು ಪ್ರೀತಿ ಇರುತ್ತದೆ. ಮಕ್ಕಳು ದೊಡ್ಡವರಾದಂತೆ ಅವರ ಜವಾಬ್ದಾರಿ ತೆಗೆದುಕೊಳ್ಳುವುದರ ಜೊತೆಗೆ ಅವರನ್ನು ಜೋಪಾನ ಮಾಡುತ್ತಾರೆ. ಮಗಳು ವಯಸ್ಸಿಗೆ ಬಂದ ನಂತರ ಮದುವೆ ಮಾಡುವ ಕನಸು ಕಟ್ಟಿಕೊಳ್ಳುತ್ತಾರೆ. ಹಾಂಕಾಂಗ್ ನ ಒಬ್ಬ ತಂದೆ ತನ್ನ ಮಗಳ ಮದುವೆ ಮಾಡಲು ಹುಡುಗನಿಗೆ ಹಣವನ್ನು ಕೊಡುವ ಘೋಷಣೆ ಮಾಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಒಬ್ಬ ತಂದೆ ತಾನು ಬದುಕಿರುವವರೆಗೂ ಕೂಡ ತನ್ನ ಮಗಳಿಗೆ ಯಾವುದೆ ರೀತಿಯಾದಂತಹ ತೊoದರೆಯಾಗದಂತೆ ನೋಡಿಕೊಳ್ಳುತ್ತಾನೆ. ಹಾಗಾಗಿ ಪ್ರತಿಯೊಬ್ಬ ತಂದೆಯು ಕೂಡ ತನ್ನ ಮಕ್ಕಳಿಗೆ ಏನೂ ಮಾಡಲೂ ಕೂಡ ಹಿಂಜರಿಯುವುದಿಲ್ಲ ಅಂತಹದೆ ಒಂದು ಘಟನೆಯ ಬಗ್ಗೆ ತಿಳಿಯಬಹುದು. ಒಬ್ಬ ತಂದೆ ತನ್ನ ಮಗಳನ್ನು ಮದುವೆಯಾಗುತ್ತೇನೆ ಅಂದ ಹುಡುಗನಿಗೆ ಸಾವಿರದ ಇನ್ನೂರು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಆದರೂ ಕೂಡ ಅವರ ಮಗಳನ್ನು ಮದುವೆಯಾಗಲು ಯಾರು ಕೂಡ ಮುಂದೆ ಬರುತ್ತಿಲ್ಲ.

ಸಿಸಿಲ್ ಚಾವ್ ಎಂಬಾತ ಹಾಂಕಾಂಗ್ ನ ದೊಡ್ಡ ಶ್ರೀಮಂತ ರಿಯಲ್ ಎಸ್ಟೇಟ್ ಕಂಪನಿಯನ್ನು ಹೊಂದಿರುವ ಈತನಿಗೆ ನೂರಾರು ಕೋಟಿ ಆಸ್ತಿ ಇದೆ. ಹಾಂಕಾಂಗ್ ನ ಹತ್ತು ಶ್ರೀಮಂತರ ಪಟ್ಟಿಯಲ್ಲಿ ಈತನ ಹೆಸರು ಕೂಡ ಇದೆ ಈತನಿಗೆ ಒಬ್ಬ ಮುದ್ದಾದ ಮಗಳು ಕೂಡ ಇದ್ದಾಳೆ. ಈಕೆಯ ಹೆಸರು ಗಿಗಿ ಚಾವ್. ಸಿಸಿಲ್ ಚಾವ್ ತನ್ನ ಮಗಳಿಗೆ ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಪ್ರಪಂಚವೆ ಹುಬ್ಬೇರಿಸುವಂತೆ ಮದುವೆ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದನು. ಆದರೆ ಒಂದು ದಿನ ಸಿಸಿವ್ ಚಾವ್ ಗೆ ಒಂದು ಶಾಕಿoಗ್ ಸಂಗತಿ ಕಾದಿತ್ತು.

ನೇರವಾಗಿ ತಂದೆಯ ಬಳಿಗೆ ಬಂದಂತಹ ಮಗಳು ನಾನು ಒಬ್ಬ ಸಲಿoಗಕಾಮಿ ನನಗೆ ಬೇಕಾದಂತಹ ಸಂಗಾತಿಯನ್ನು ನಾನೆ ಹುಡುಕಿಕೊಳ್ಳುತ್ತೇನೆ. ನೀವು ಯಾವುದೆ ರೀತಿಯಾದಂತಹ ಹುಡುಗನನ್ನು ನನಗೆ ಹುಡುಕಬೇಡಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದಂತಹ ಸಿಸಿವ್ ಚಾವ್ ಗೆ ಒಂದು ಕ್ಷಣ ಟೆನ್ಷನ್ ಆಗುತ್ತದೆ. ತಂದೆಗೆ ಈ ವಿಚಾರವನ್ನು ಹೇಳಿದ ಮೇಲೆಯೂ ನನ್ನ ಮಗಳನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ ಅಂತವರಿಗೆ ನಾನೂರು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆಯನ್ನು ನೀಡುತ್ತಾರೆ.

ಸಿಸಿವ್ ಚಾವ್ ಇಂತಹದೊಂದು ಹೇಳಿಕೆಯನ್ನು ನೀಡಿದರೂ ಕೂಡ ಯಾರು ಕೂಡ ಆಕೆಯನ್ನು ಮದುವೆಯಾಗಲು ಮುಂದೆ ಬರುವುದಿಲ್ಲ. ನಂತರ ಆತ ಮತ್ತೊಮ್ಮೆ 1,200 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಣೆಯನ್ನು ಮಾಡುತ್ತಾರೆ. ಯಾರಾದರೂ ಒಬ್ಬ ಹುಡುಗ ತನ್ನ ಮಗಳನ್ನು ಮದುವೆಯಾದರೆ ಆಕೆಯ ಮನಸ್ಥಿತಿ ಬದಲಾವಣೆಯಾಗಬಹುದು ಆಗ ಆಕೆ ಮೊದಲಿನಂತೆ ಹುಡುಗಿಯಂತೆ ವರ್ತಿಸಬಹುದು ಎಂಬುದು ತಂದೆಯ ಅಭಿಪ್ರಾಯವಾಗಿರುತ್ತದೆ. ಆದರೆ ಆ ತಂದೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮಗಳನ್ನು ಮದುವೆಯಾಗಲು ಯಾರೂ ಕೂಡ ಮುಂದೆ ಬರುವುದಿಲ್ಲ.

ತದನಂತರ ಗಿಗಿ ಚಾವ್ ತನ್ನ ತಂದೆಗೆ ಒಂದು ಪತ್ರವನ್ನು ಬರೆದು ಅಪ್ಪ ನೀವು ನನ್ನನ್ನು ಒಬ್ಬ ಸಲಿoಗಕಾಮಿ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ದಯವಿಟ್ಟು ಮನಸ್ಸು ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾಳೆ. ಮಗಳು ಈ ರೀತಿ ಭಾವನಾತ್ಮಕವಾದ ಪತ್ರವನ್ನು ತಂದೆಗೆ ಬರೆದರೂ ಕೂಡ ಸಿಸಿಲ್ ಚಾವ್ ಅವರು ತನ್ನ ಮಗಳಿಗೆ ಹುಡುಗನನ್ನು ಹುಡುಕುವಂತಹ ಪ್ರಯತ್ನವನ್ನು ಕೂಡ ಕೈ ಬಿಡುವುದಿಲ್ಲ.

ಈಗಲೂ ಕೂಡ ತಂದೆ ಆ ಪ್ರಯತ್ನದಲ್ಲಿ ಇರುವುದು ನಿಜಕ್ಕೂ ಕೂಡ ಆಶ್ಚರ್ಯದ ಸಂಗತಿಯಾಗಿದೆ. ಒಬ್ಬ ತಂದೆಯಾಗಿ ಸಿಸಿಲ್ ಚಾವ್ ಅವರು ತೆಗೆದುಕೊಂಡಿರುವ ಈ ನಿರ್ಧಾರ ಎಷ್ಟು ಸರಿ ಎಷ್ಟು ತಪ್ಪು ಎಂಬುದು ನಿಮ್ಮ ಅಭಿಪ್ರಾಯಕ್ಕೆ ಬಿಟ್ಟಿದ್ದು. ಸದ್ಯ ಈ ವಿಷಯ ಇಡೀ ವಿಶ್ವದಲ್ಲಿ ಸಕತ್ ಸುದ್ದಿಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಚರ್ಚೆಗೆ ಕಾರಣವಾಗಿದೆ. ಒಬ್ಬ ತಂದೆಯಾಗಿ ಸಿಸಿಲ್ ಚಾವ್ ತನ್ನ ಮಗಳ ಸಮಸ್ಯೆಯನ್ನು ಒಪ್ಪಲಾಗದೆ ಅವಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಅದಕ್ಕೆ ಹೇಳುವುದು ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *