ಪ್ರಜ್ವಲ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರ ವರ್ಕೌಟ್ ವಿಡಿಯೋ

0 2

ಡೈನಾಮಿಕ್ ಹೀರೋ ದೇವರಾಜ್ ಅವರ ಮೊದಲ ಮಗ ಪ್ರಜ್ವಲ್ ದೇವರಾಜ್ ಕೂಡಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಎರಡುಸಾವಿರದ ಏಳರಲ್ಲಿ ಬಿಡುಗಡೆಯಾದ ಸಿಕ್ಸರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ನಂತರ ಗೆಳೆಯ, ಮುರುಳಿ ಮೀಟ್ಸ್ ಮೀರಾ, ಮೆರವಣಿಗೆ ಹೀಗೆ ಮುಂತಾದ ಚಿತ್ರಗಗಳಲ್ಲಿ ನಾಯಕನಾಗಿ ನಟಿಸಿ ಡೈನಾಮಿಕ್ ಪ್ರಿನ್ಸ್ ಎಂದೇ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅಷ್ಟೇ ವಿವಾಹ ಆಗಿರುವ ಪ್ರಜ್ವಲ್ ದೇವರಾಜ್ ಅವರು ತಮ್ಮ ಬಾಲ್ಯದ ಸ್ನೇಹಿತೆ ರಾಗಿಣಿ ಚಂದ್ರನ್ ಎಂಬವರ ಜೊತೆ ಇತ್ತೀಚೆಗೆ ಅಷ್ಟೇ ವಿವಾಹ ಆಗಿದ್ದಾರೆ.

ಇತ್ತೀಚೆಗಿನ ಲಾಕ್ ಡೌನ್ ಸಮಯದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಮನೆಯಲ್ಲಿ ತಮ್ಮ ಬೇಸರ ಕಳೆಯಲು ಇಬ್ಬರೂ ಡ್ಯಾನ್ಸ್ ಮಾಡಿದ ವಿಡಿಯೋ ಒಂದು ಬಹಳವೇ ವೈರಲ್ ಆಗಿತ್ತು. ಈಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರ್ಪಡೆ ಆಗಲಿದೆ. ಪ್ರಜ್ವಲ್ ಅವರ ಪತ್ನಿ ರಾಗಿಣಿ ಚಂದ್ರ ಅವರು ಇತ್ತೀಚೆಗೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದು ಕೂಡಾ ಸಾಕಷ್ಟು ವೈರಲ್ ಆಗಿದ್ದು ಮನೆಯಲ್ಲಿಯೂ ಕೂಡಾ ಜಿಮ್ ಗೆ ಹೋಗದೆ ವರ್ಕೌಟ್ ಮಾಡಬಹುದು ಎಂದು ನಿರೂಪಿಸಿದ್ದಾರೆ.

Leave A Reply

Your email address will not be published.