ಕನ್ನಡ ಚಿತ್ರರಂಗದ 1980 ರ ದಶಕದ ಟಾಪ್ ನಟಿಯಾದ ಭವ್ಯ ಅವರ ಸಿನಿಮಾ ಹಾಗೂ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
1980 ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದ ಹೆಗ್ಗಳಿಕೆ ನಟಿ ಭವ್ಯ ಅವರಿಗೆ ಸಲ್ಲುತ್ತದೆ. ಇವರು ನಟಿಸಿದ ಎಲ್ಲ ಚಿತ್ರಗಳು ಸೂಪರ ಹಿಟ್ ಆಗಿದ್ದವು. ಕಡಿಮೆ ಸಮಯದಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೈಲೆಂಟ್ ಹಾಗೂ ಜಂಭದ ಹುಡುಗಿ ಆಗಿ ನಟಿಸಿದ್ದಾರೆ. ಗ್ಲಾಮರ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಹೆಚ್ಚು ಕಾಣಿಸಿಕೊಂಡಿದ್ದು ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರೊಂದಿಗಿನ ಸಿನಿಮಾಗಳಲ್ಲಿ. ಜನನಾಯಕ, ನೀ ಬರೆದ ಕಾದಂಬರಿ, ಮತ್ತೆ ಹಾಡಿತು ಕೋಗಿಲೆ ಮುಂತಾದ ಹಿಟ್ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಶಂಕರನಾಗ ಅವರೊಂದಿಗಿನ ಎಸ್.ಪಿ ಸಾಂಗ್ಲಿಯಾನ ಚಿತ್ರದಲ್ಲಿನ ಇವರ ನಟನೆಯನ್ನು ಇಂದಿಗೂ ಯಾರು ಮರೆತಿಲ್ಲ.
ಇವರ ಪತಿಯ ಹೆಸರು ಮುಖೇಶ್ ಪಾಟೀಲ. ಇವರು ಮುಂಬೈನಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಇವರಿಗೆ ಒಬ್ಬ ಮಗಳಿದ್ದು ಇವರನ್ನು ಸಿನಿಮಾ ಕ್ಷೇತ್ರದಿಂದ ದೂರವಿಟ್ಟಿದ್ದಾರೆ. ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಕಳುಹಿಸಿದ್ದಾರೆ. ಇವರು ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಎನ್ನುವ ಆ್ಯಕ್ಟಿಂಗ್ ಕ್ಲಾಸ್ ನಡೆಸುತ್ತಿದ್ದಾರೆ ಇದರಲ್ಲಿ ಪ್ರಿನ್ಸಿಪಾಲ್ ಕೂಡ ಆಗಿದ್ದಾರೆ. ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ತೆರೆಯ ಮೇಲೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಭವ್ಯ ಅವರು ಇಂದಿಗೂ ಜನರ ನೆನಪಿನಲ್ಲಿ ಉಳಿದಿದ್ದಾರೆ.