ಚಿತ್ರರಂಗದಲ್ಲಿ ಇರಬಹುದು ಇಲ್ಲವೆ ಧಾರಾವಾಹಿಗಳಲ್ಲಿ ಇರಬಹುದು ಆಯ್ಕೆಯಾಗುವುದು ತುಂಬಾ ಕಷ್ಟ. ತುಂಬಾ ಕಷ್ಟಗಳು ಎದುರಿಸಬೇಕಾಗುತ್ತದೆ. ಚಿತ್ರರಂಗದಲ್ಲಿ ಅವಕಾಶ ಪಡೆಯಲು, ಉಳಿದುಕೊಳ್ಳಲು ಕಷ್ಟ ಎದುರಿಸುವುದು ಸಾಮಾನ್ಯ ಉತ್ತಮ ಕೆಲಸ ನೀಡುವುದು ಬಹಳ ಮುಖ್ಯ. ಅದರಲ್ಲಿಯೂ ಉತ್ತರ ಕನ್ನಡದವರಿಗೆ ಅವಕಾಶ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಹುಡುಗಿ ತಮ್ಮ ವೃತ್ತಿ ಜೀವನ ದಾರಾವಾಹಿಗಳಿಂದ ಪ್ರಾರಂಭಿಸಿ, ಈಗ ತೆಲುಗು ಭಾಷೆಯ ದಾರಾವಾಹಿಯಲ್ಲಿಯೂ ಮಿಂಚುತ್ತಿದ್ದಾರೆ. ಅವರ ಬಗ್ಗೆ ಮಾಹಿತಿ ತಿಳಿಯೋಣ.

ಇವರ ಹೆಸರು ದೀಪಾ ಹಿರೇಮಠ. ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ಇವರು. ಧಾರವಾಡ ಜಿಲ್ಲೆಯ ದೀಪಾ ಅವರು ಓದಿದ್ದೆಲ್ಲವೂ ಧಾರವಾಡದಲ್ಲಿ. ಸ್ಕೂಲ್ ಪ್ರೆಸೆಂಟೆಶನ್ ಗರ್ಲ್ಸ್ ಸ್ಕೂಲ್ ಧಾರವಾಡ. ಸೈನ್ಸ್ ಮಾಡಿದ್ದರು ಡಿಗ್ರಿಯಲ್ಲಿ. ಈಗ ಎಲ್.ಎಲ್.ಬಿ ಹುಲ್ಕೋಟಿ ಲಾ ಕಾಲೇಜ್ ಗದಗದಲ್ಲಿ ಕಲಿಯುತ್ತಿದ್ದಾರೆ. ಅಪ್ಪ ಕೆಎಂಎಫ್ ನಲ್ಲಿ ಕೆಲಸ ಮಾಡುತ್ತಾರೆ. ಅಮ್ಮ ಗೃಹಿಣಿ. ಅಣ್ಣ ಕೂಡ ಲಾ ಕಲಿಯುತ್ತಿದ್ದಾರೆ. ಕೂಡು ಕುಟುಂಬದ ಹುಡುಗಿ ಇವರು. ಇವರು ಇಂಡಸ್ಟ್ರಿಗೆ ಬರಲು ಮುಖ್ಯ ಕಾರಣ ಅಪ್ಪು ಸರ್. ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ಇವರು. ಪುನೀತ್ ರಾಜ್‍ಕುಮಾರ್ ಅವರ ಜೊತೆ ಅಭಿನಯಿಸಬೇಕೆಂಬ ಆಸೆಯೆ ಇಂಡಸ್ಟ್ರಿಗೆ ಬರಲು ಕಾರಣ. ವೆಟರ್ನರಿ ಮಾಡಬೇಕೆಂದು ಆಸೆ ಇದ್ದರೂ ನಟಿಯಾಗಬೇಕೆಂದು ಲಾ ಆಯ್ದುಕೊಂಡರು. ಸುನೀಲ್ ಪುರಾಣಿಕ್ ಅವರ ಮೂಲಕ ಉದಯ ಟಿವಿಯ ಮಹಾಸತಿ ಎಂಬ ಧಾರಾವಾಹಿಯಲ್ಲಿ ತಂಗಿಯ ಪಾತ್ರ ಮಾಡಿದರು. ಸುನಿಲ್ ಪುರಾಣಿಕ ಅವರ ಕಾರಣದಿಂದ ಇಂಡಸ್ಟ್ರಿಗೆ ಬರಲು ಇಷ್ಟು ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ದೀನೆಶ್ ಬಾಬು ಸರ್ ಅವರ ನಿರ್ದೇಶನದ ಚಿತ್ರದಲ್ಲಿ ಸೆಕೆಂಡ್ ಲೀಡ್ ನಲ್ಲಿ ದೀಪಾ ನಟಿಸಿದ್ದರು. ನಂತರ ಜೀ ಕನ್ನಡದಲ್ಲಿ ಸುದೀಪ್ ಸರ್ ಪ್ರೊಡಕ್ಷನ್ಸ್ ನಿಂದ ಬಂದ ಧಾರಾವಾಹಿ ವಾರಸ್ದಾರದಲ್ಲಿ ಅಕ್ಕನ ಪಾತ್ರ ಮಾಡಿದ್ದರು ದೀಪಾ.

ನಂತರ ಮೊದಲ ಬಾರಿಗೆ ಉದಯ ಟಿವಿಯಲ್ಲಿ ರವಿ ಗರಣಿಯವರ ಬ್ರಹ್ಮಾಸ್ತ್ರ ಧಾರಾವಾಹಿಯಲ್ಲಿ ಹಿರೋಯಿನ್ ಆಗಿ ಅಭಿನಯ ಮಾಡಿದ್ದಾರೆ. ಈಗ ಅವರು ಕ್ರಿಟಿಕಲ್ ಕೀರ್ತನೆಗಳು ಎಂಬ ಸಿನೆಮಾವನ್ನು ಕೆಮಿಸ್ಟ್ರಿ ಅಫ್ ಕರಿಯಪ್ಪ ಚಿತ್ರ ತಂಡದವರ ಜೊತೆ ಸೇರಿ ಮಾಡುತ್ತಿದ್ದಾರೆ. ಇದು ಐಪಿಎಲ್ ಬೆಟ್ಟಿಂಗ್ ಸಂಭಂಧಿಸಿದ ಕಥೆಯಾಗಿದೆ. ಎಲ್ಲರೂ ಚಿತ್ರ ಮಂದಿರದಲ್ಲಿ ಹೋಗಿ ನೋಡಬೇಕಾಗಿ ವಿನಂತಿಸಿದ್ದಾರೆ. ಜನವರಿಯಲ್ಲಿ ಬಿಡುಗಡೆಯಾಗಬಹುದು. ಕನ್ನಡದಲ್ಲಿ ಈಗ ಯಾವುದೆ ಧಾರಾವಾಹಿಗಳನ್ನು ಮಾಡುತ್ತಿಲ್ಲ ಸಿನೆಮಾದಲ್ಲಿ ನಟಿಸುವ ಸಲುವಾಗಿ ಸ್ವಲ್ಪ ಮಟ್ಟಿಗೆ ಸಮಯಾವಕಾಶ ತೆಗೆದುಕೊಂಡಿದ್ದಾರೆ. ಆದರೆ ತೆಲಗು ಭಾಷೆಯ ನಾಗಾರ್ಜುನ ಸರ್ ಅವರ ಅನ್ನಪೂರ್ಣ ಪ್ರೊಡಕ್ಷನ್ಸ್ ನಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಧಾರಾವಾಹಿ ಹೆಸರು ಪ್ರೇಮ್ ನಗರ್ ಎಂದು. ತಂದೆ ಪಾತ್ರದಲ್ಲಿ ಹಿರಿಯ ನಟ ಭರಣಿಯವರು ಹಾಗೂ ತಾಯಿಯ ಪಾತ್ರವನ್ನು ಪ್ರಮೋಧಿನಿ ಎನ್ನುವವರು ಮಾಡುತ್ತಿದ್ದಾರೆ. ತೆಲಗು ಚಿತ್ರರಂಗದಲ್ಲಿ ತುಂಬಾ ಜನರು ಕನ್ನದವರೆ ಇದ್ದಾರೆ ಎಂದು ದೀಪಾ ಹೇಳುತ್ತಾರೆ. ಅಲ್ಲಿ ಕನ್ನಡದಲ್ಲಿಯೆ ಮಾತನಾಡುತ್ತಾರಂತೆ ದೀಪಾ.

ಊರು ಬಿಟ್ಟು ಬೇರೆ ಕಡೆ ಹೋಗಿ ಒಬ್ಬರೆ ಕೆಲಸ ಮಾಡುವುದು ತುಂಬಾ ಕಷ್ಟ. ಮನೆಯಲ್ಲಿ ಮೊದಲು ಬೇಡವೆಂದರೂ ಈಗ ಎಲ್ಲರೂ ಬೆಂಬಲಿಸುತ್ತಾರೆ. ಬೆಂಗಳೂರಿನವರಿಗೆ ಆದರೆ ಎಲ್ಲ ಭಾಷೆಗಳ ಬಗ್ಗೆ ಅರಿವಿರುತ್ತದೆ. ಆದರೆ ಉತ್ತರ ಕನ್ನಡದವರು ಪಕ್ಕ ಕನ್ನಡಿಗರು. ಕನ್ನಡ ಬಿಟ್ಟು ಬೇರೆ ಭಾಷೆ ಅಷ್ಟಾಗಿ ಬಳಸುವುದಿಲ್ಲ ಹಾಗಾಗಿ ಸ್ವಲ್ಪ ಕಷ್ಟ ಆಯಿತು ಎನ್ನುತ್ತಾರೆ ದೀಪಾ. ಅದೃಷ್ಟ ಇರಬಹುದೇನೊ ಇಂಡಸ್ಟ್ರಿಗೆ ಬರಲು ಕೆಲವೊಬ್ಬರು ತುಂಬಾ ಕಷ್ಟ ಅನುಭವಿಸುತ್ತಾರೆ ನಾನು ಅಷ್ಟು ಕಷ್ಟ ಪಟ್ಟಿಲ್ಲಾ ಎನ್ನುತ್ತಾರೆ. ಆದರೆ ಕಷ್ಟಪಟ್ಟು ಕೆಲಸ ಮಾಡಿದ್ದೆನೆ ಎನ್ನುತ್ತಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಇಂಡಸ್ಟ್ರಿಯೂ ಕೂಡ. ಕಷ್ಟ ಪಟ್ಟರೆ ಮಾತ್ರ ಗೆಲುವು ಸಿಗುತ್ತದೆ. ಆರು ಗಂಟೆಗೆ ಶೂಟಿಂಗ್ ಕಾರು ಬಂದಿರುತ್ತದೆ. ಐದು ಗಂಟೆಗೆ ಎದ್ದು ರೆಡಿಯಾಗಬೇಕಿರುತ್ತದೆ ಮತ್ತೆ ಬರುವುದು ರಾತ್ರಿಯಾಗಿರುತ್ತದೆ. ಲೋಕೆಷನ್ ಗಳು ದೂರವಿರುತ್ತಿತ್ತು. ಭರತನಾಟ್ಯ ಕಲಿತಿದ್ದರಿಂದ ನಟನೆ ಅಷ್ಟೇನೂ ಕಷ್ಟ ಅನ್ನಿಸಲಿಲ್ಲ ಆದರೆ ಕ್ಯಾಮರಾ ಕಂಡಾಗ ಭಯವಾಗಿತ್ತು.

ಮೊದ ಮೊದಲು ಢಾರವಾಡ ಭಾಷೆಯು ಡೈಲಾಗ್ಸ್ ಗಳ ಮದ್ಯ ಬಂದು ಟೇಕ್ ಜಾಸ್ತಿ ತೆಗೆದುಕೊಳ್ಳುವ ಹಾಗೆ ಆಗುತ್ತಿತ್ತು ಈಗ ಕಲಿತಿದ್ದೆನೆ. ದೀಪಾ ಹೇಳುತ್ತಾರೆ ಅವರು ಧಾರವಾಡದ ಕೆಸಿಡಿಯ ಗೋಬಿ ತುಂಬಾ ಮಿಸ್ ಮಾಡಿಕೊಳ್ಳುತ್ತೆನೆ ಎಂದು. ಅವರು ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ತಿನ್ನುವುದಿಲ್ಲವಂತೆ ಧಾರವಾಡದಲ್ಲಿ ಮಾತ್ರ ತಿನ್ನುತ್ತಾರೆ. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ ಮಾತಿಗೆ ದೀಪಾ ಕೆಲವರು ಮಾಡುವ ತಪ್ಪಿಗೆ ಎಲ್ಲರಿಗೂ ಕೆಟ್ಟ ಹೆಸರು. ನಾವು ಹೆಜ್ಜೆ ಇಡುವ ಮುಖ್ಯವಾಗುತ್ತದೆ. ಮೊದಲು ನಮಗೆ ಇಂತಹ ವ್ಯಕ್ತಿ ಎಂದು ಗೊತ್ತಾದಾಗ ನಾವೆ ಹಿಂದೆ ಬರುವುದು ಉತ್ತಮ. ಸರಿಯಾದ ಹೆಜ್ಜೆ ಆರಿಸಿ ನಡೆಯಬೇಕು ನನಗೆ ಅದರ ಅನುಭವ ಆಗಿಲ್ಲ ಎನ್ನುತ್ತಾರೆ ದೀಪಾ ಹಿರೇಮಠ. ಆಡಿಷನ್ ನೀಡುವಾಗ ತಯಾರಿ ಮುಖ್ಯ ಅದನ್ನು ಸರಿಯಾಗಿ ಮಾಡಿದರೆ ಇಂಡಸ್ಟ್ರಿ ಬರುವುದು ಕಷ್ಟ ಆಗುವುದಿಲ್ಲ ಎನ್ನುತ್ತಾರೆ. ಮೊದಲು ಬಂದಾಗ ಶೂಟಿಂಗ್ ಬಗೆಗೆ ಗೊತ್ತಿಲ್ಲ ಆ ಸಮಯದಲ್ಲಿ ಶೂಟಿಂಗ್ ಆಗುತ್ತಿದ್ದಾಗ ಮಧ್ಯದಿಂದ ಪಾಸಾಗಿ ಬೇರೆ ಕಡೆ ಹೋಗಿದ್ದಕ್ಕೆ ರವಿ ಸರ್ ಒಳ್ಳೆ ಧಾರವಾಡ ಎಮ್ಮೆ ತರ ಹೋಗ್ತಾ ಇದ್ದಿಯಲ್ಲ ಅಂದಿದ್ದರು ಅದಕ್ಕಾಗಿ ಅತ್ತಿದ್ದು ಇದೆ. ಅವರೆ ಸಮಾಧಾನ ಮಾಡಿದ್ದರು. ಕನ್ನಡದಲ್ಲಿ ಒಳ್ಳೆಯ ನಟಿ ಆಗುವ ಆಸೆ ಇದೆ. ದೀಪಾ ಹಿರೇಮಠ ಅವರು ತಮ್ಮ ಸಿನಿ ಪಯಣವನ್ನು ನ್ಯೂಸ್ ಫಸ್ಟ್ ಅವರ ಜೊತೆ ಹಂಚಿಕೊಂಡಿದ್ದಾರೆ.

ಯಾವುದೆ ಕೆಲಸವಾದರೂ ಕಷ್ಟ ಪಡದೆ ಸಿಗುವುದಿಲ್ಲ. ಸಿಕ್ಕಿದ ಮೇಲ ಕಷ್ಟ ಪಡದೆ ಇದ್ದರೆ ಉಳಿಯುವುದು ಇಲ್ಲ. ಹಾಗಾಗಿ ಕಷ್ಟ ಬಂತೆದು ಬಿಡದೆ ಎದುರಿಸಿದರೆ ಗೆಲುವು ನಮ್ಮದಾಗುತ್ತದೆ. ದೀಪಾ ಅವರು ಸಹ ಕಷ್ಟ ಎದುರಿಸಿ ಹೆಸರು ಮಾಡುತ್ತಿದ್ದಾರೆ ಅವರಿಗೆ ಆಲ್ ದಿ ಬೆಸ್ಟ್.

Leave a Reply

Your email address will not be published. Required fields are marked *