ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಕಂಡು ಬರಬಹುದಾದ ಒಂದು ಸಮಸ್ಯೆ ಎಂದರೆ ಅದು ಜಿರಲೆಗಳ ಸಮಸ್ಯೆ ಯಾಕಂದ್ರೆ ಜಿರಲೆಗಳು ಮನೆಯಲ್ಲಿರುವ ಜನಗಳಿಗೆ ಬಹಳ ಕಿರಿಕಿರಿ ಉಂಟುಮಾಡುವುದರಲ್ಲಿ ಪ್ರಮುಖವಾಗಿವೆ. ಇವುಗಳಿಂದ ಯಾವುದೇ ಉಪಯೋಗಗಳಿಲ್ಲ ಹಳೆಯದಾದ ಪುಸ್ತಕಗಳನ್ನು ತಿಂದು ಹಾಳು ಮಾಡುವುದಲ್ಲದೇ ನಾವು ಮಾಡಿಟ್ಟಿರುವ ಆಹಾರ ಪದಾರ್ಥಗಳ ಒಳಗೆ ಬಿದ್ದು ತಿನ್ನುವವರಿಗೆ ಅಸಹ್ಯವನ್ನುಂಟುಮಾಡುತ್ತವೆ ಕೆಲವರಂತೂ ಹಾವುಗಳಿಗೆ ಹೆದರದಿದ್ದರೂ ಜಿರಲೆಗಳನ್ನು ಕಂಡರೆ ಮಾತ್ರ ಬಹಳ ಹೆದರುತ್ತಾರೆ.
ಜಿರಲೆಗಳನ್ನು ನಿಯಂತ್ರಿಸುವುದು ಜನರಿಗೆ ಬಹಳ ಕಷ್ಟಕರ ವಿಷಯವಾಗಿಬಿಟ್ಟಿದೆ ಮತ್ತು ಅಸಹ್ಯವೂ ಆಗಿಬಿಟ್ಟಿದೆ ಜಿರಲೆಗಳನ್ನು ಓಡಿಸಲೆಂದೇ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಪ್ರೇ ಗಳು ಲಭ್ಯವಿವೆ ಅವುಗಳನ್ನು ಸಹ ಕೆಲವರು ಬಳಸುತ್ತಾರೆ ಇನ್ನೂ ಹೆಚ್ಚು ಜಿರಲೆಗಳನ್ನು ಓಡಿಸಬೇಕಾದರಂತೂ ಒಂದು ಡಬ್ಬ ಸ್ಪ್ರೇ ಸಾಕಾಗುವುದಿಲ್ಲ ಎರದರಿಂದ ಮೂರು ಸ್ಪ್ರೇ ಗಳು ಬೇಕಾಗುತ್ತವೆ ಅಲ್ಲದೇ ಅಷ್ಟು ಸ್ಪ್ರೇ ಗಳನ್ನು ಒಂದೇ ಬಾರಿ ಮನೆಯ ಮೂಲೆ ಮೂಲೆಗಳಿಗೆ ಸ್ಪ್ರೇ ಮಾಡುವುದರಿಂದ ಜಿರಲೆಗಳನ್ನು ಒಡೆದು ಓಡಿಸಬಹುದು ಹೀಗೆ ಮಾಡುವುದರಿಂದ ಜಿರಲೆಗಳ ಜೊತೆಗೆ ಮನೆಯ ಜನರು ಸಹ ತಲೆ ತಿರುಗುವ ಅನುಭವವಾಗುವುದಂತೂ ಖಂಡಿತವಾಗಿಯೂ ಸತ್ಯ ಹಾಗಾದ್ರೆ ಈ ಕೆಟ್ಟ ಜಿರಲೆಗಳಿಂದ ಮುಕ್ತಿ ಹೊಂದಲು ಬೇರೆಯ ಉಪಾಯ ಯಾವುದು ಇಲ್ಲವೇ ಎನ್ನುವವರಿಗೆ ನೈಸರ್ಗಿಕವಾದ ಒಂದು ಉಪಾಯವನ್ನು ನಾವಿಂದು ತಿಳಿಸುತ್ತೇವೆ ಬನ್ನಿ.
ಮೊದಲಿಗೆ ಎರಡರಿಂದ ಮೂರು ಬಿಲ್ಲೆ ಕರ್ಪೂರಗಳನ್ನು ತೆಗುಕೊಂಡು ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ನಂತರ ಅದೇ ರೀತಿ ಎರಡು ಗಂಧದ ಕಡ್ಡಿಗಳನ್ನು ತೆಗೆದುಕೊಂಡು ಅದರಲ್ಲಿರುವ ಕಡ್ಡಿಯನ್ನು ತೆಗೆದು ಬರಿಯ ಗಂದದ ಕಡ್ಡಿಯ ಗಂಧದ ಭಾಗವನ್ನು ಪುಡಿ ಮಾಡಿಕೊಂಡು ಕರ್ಪೂರದ ಪುಡಿಯ ಜೊತೆಗೆ ಇದನ್ನೂ ಸಹ ಬೆರೆಸಿಕೊಳ್ಳಬೇಕು ಹೀಗೆ ಚೆನ್ನಾಗಿ ಬೆರೆಸಿಕೊಂಡ ಕರ್ಪೂರದ ಮತ್ತು ಗಂಧದಕಡ್ಡಿಯ ಪುಡಿಯನ್ನು ಅರ್ಧ ಗ್ಲಾಸ್ ನೀರಿನಲ್ಲಿ ಬೇರೆಸಬೇಕು, ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿದ ಕರ್ಪೂರ ಹಾಗೂ ಗಂಧದ ಕಡ್ಡಿಯ ಮಿಶ್ರಣವನ್ನು ನಂತರದಲ್ಲಿ ಒಂದು ಸ್ಪ್ರೇ ಬಾಟಲಿನ ಒಳಗೆ ಸೋರಿಸಿಕೊಳ್ಳಬೇಕು ಹೀಗೆ ತಯಾರಿಸಿಕೊಂಡ ದ್ರಾವಣವು ಬಹಳ ಸುಗಂಧ ಪೂರಿತವಾಗಿರುತ್ತದೆ.
ಇದು ಮನುಷ್ಯರಿಗೆ ಮಾತ್ರ ಸುಗಂಧ ಅಷ್ಟೇ ಈ ದ್ರಾವಣವು ಜಿರಲೆಗಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ ಆದ್ದರಿಂದ ಈ ದ್ರಾವಣವನ್ನು ಸ್ಪ್ರೇ ಬಾಟಲ್ ನ ಮೂಲಕ ಜಿರಲೆಗಳು ಹೆಚ್ಚಾಗಿ ಇರುವ ಜಾಗಗಳಿಗೆ ಸ್ಪ್ರೇ ಮಾಡಬೇಕು ಮತ್ತು ಸ್ಪ್ರೇ ಮಾಡುಲು ಆಗದಂತಹ ಜಾಗಗಳಿಗೆ ಒಂದು ಬೌಲ್ ನಲ್ಲಿ ಸ್ವಲ್ಪ ಈ ದ್ರಾವಣವನ್ನು ಹಾಕಿ ಇಟ್ಟರೆ ಸಾಕು ಹೀಗೆ ಮಾಡುವುದರಿಂದ ನೈಸರ್ಗಿಕವಾಗಿ ನಮಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದಂತೆ ಜಿರಲೆಗಳನ್ನು ಮನೆಯಿಂದ ಓಡಿಸಬಹುದಾಗಿದೆ ಮತ್ತು ಜಿರಲೆಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದಾಗಿದೆ.