ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಸಿಹಿಸುದ್ದಿ

0 6

ನೀವು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ನಿಮಗೆ ಇಲ್ಲಿ ಸಿಹಿ ಸುದ್ದಿ ಇದೆ.ಕರ್ನಾಟಕ ಸರ್ಕಾರದಿಂದ ಜಿಲ್ಲಾ ಪಂಚಾಯತ ನೇಮಕಾತಿ ಮತ್ತು ಹೆಸ್ಕಾಂ ಹೆದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.ಇದಕ್ಕೆ ಅರ್ಜಿ ಸಲ್ಲಿಸಲು ಯಾವ ಅರ್ಹತೆ ಇರಬೇಕು ಯಾವ ಯಾವ ಪ್ರದೇಶದಲ್ಲಿ ಹುದ್ದೆ ಕಾಲಿ ಇದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ತಾಲೂಕು ಹೋಬಳಿ ಮಟ್ಟದಲ್ಲಿ ಕೆಲಸಕ್ಕೆ ಹೊಸ ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕದ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ವಿವಿಧ ಜಿಲ್ಲಾ ಪಂಚಾಯತಿಗಳಲ್ಲಿ ಕಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತಿದೆ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬೇಕು.

ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್, ಜಿಲ್ಲಾ ಸ್ಕಿಲ್ ಮತ್ತುಇಂಟ್ರಾಪ್ರೆನ್ಯೂರ್ಶಿಫ್, ಜಿಲ್ಲಾ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಒ, ತಾಲೂಕಾ ಪ್ರೋಗ್ರಾಂ ಮ್ಯಾನೇಜರ್, ಕ್ಲಸ್ಟರ್ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಕರ್ನಾಟಕ ಸರ್ಕಾರ ದಿಂದ ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ನೇಮಕಾತಿ ನಡೆಯುತ್ತಿದೆ. ನೀವು ಅರ್ಜಿಯನ್ನು ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದಕ್ಕೆ ಪದವೀಧರರು ಮತ್ತು ಸ್ನಾತ್ತಕೋತ್ತರ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು. ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

ಅರ್ಜಿಯನ್ನು ಸಲ್ಲಿಸಲು ವಯೋಮಿತಿಯನ್ನು ನೋಡುವುದಾದರೆ ಹದಿನೆಂಟು ವರ್ಷ ಮೆಲ್ಪಟ್ಟವರು ಮತ್ತು ನಲವತ್ತೈದು ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು. ನೂರಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಯಾವ ಯಾವ ಜಿಲ್ಲೆಯಲ್ಲಿ ಹುದ್ದೆ ಕಾಲಿ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಕಾರಣ ನೀವು ನಿಮ್ಮ ಲೋಕಲ್ ಪಂಚಾಯತಿ ಕಛೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಎರಡನೆಯ ಹುದ್ದೆ ಹೆಸ್ಕಾಂನಲ್ಲಿ ನೇಮಕಾತಿ ನಡೆಯುತ್ತಿದೆ.ಹೆಸ್ಕಾಂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಬಿಲ್ ಕಲೆಕ್ಟರ್ ಮೈಕ್ರೋ ಫ್ರೀಡರ್ ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ವಿವಿಧ ಜಿಲ್ಲೆಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಊರಿನವರಿಗೆ ಮೊದಲ ಆದ್ಯತೆ ಎಂದು ಹೇಳಲಾಗಿದೆ.

ಹೆಸ್ಕಾಂ ನ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ. ಹೆಸ್ಕಾಂ ನಲ್ಲಿ ಮೈಕ್ರೋ ಫ್ರೀಡರ್ ಫ್ರಾಂಚೈಸಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಫ್ರಾಂಚೈಸಿಗಲು ಬಿಲ್ ವಿತರಣೆ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿವೆ.

ಇದಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ದ್ವೀತಿಯ ಪಿಯುಸಿ ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವವರು ಹದಿನೆಂಟು ವರ್ಷ ಮೆಲ್ಪಟ್ಟವರು ಮತ್ತು ನಲವತ್ತು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಹಳ್ಳಿಯ ನಿವಾಸಿ ಆಗಿರಬೇಕು ಗ್ರಾಮ ಪಂಚಾಯತ ಅದ್ಯಕ್ಷರು ಮಾತ್ರ ಇತರ ಗ್ರಾಮ ಪಂಚಾಯತ ಅಭ್ಯರ್ಥಿಗಳನ್ನು ನೆಮಿಸಬಹುದು. ನಿವಾಸ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಿಂದ ಯಾವ ಯಾವ ಜಿಲ್ಲೆಯಲ್ಲಿ ಕಾಲಿಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಉತ್ತರಕನ್ನಡ ಹಾವೇರಿ ಬೆಳಗಾವಿ ಬಾಗಲಕೋಟೆ ವಿಜಯಪುರ ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ನೂರಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಪ್ರತಿ ತಿಂಗಳು ಹನ್ನೆರಡು ಸಾವಿರ ಸಂಬಳವಿರುತ್ತದ್ದೆ. ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೋಡಿದಿರಲ್ಲ ಸ್ನೇಹಿತರೆ ನಿಮಗೆ ಉದ್ಯೋಗವನ್ನು ಪಡೆದುಕೊಳ್ಳಲು ಇದು ಸುವರ್ಣಾವಕಾಶವಾಗಿದೆ. ಈ ಮಾಹಿತಿಯ ಉಪಯೋಗವನ್ನು ಪಡೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.