ಜಾಂಡಿಸ್ ಅಂದರೆ ಕಾಮಾಲೆ ರೋಗವು ಅತ್ಯಂತ ಮಾರಕವಾದ ಮತ್ತು ತಕ್ಷಣ ಗೋಚರವಾಗದ ಕಾಯಿಲೆಯಾಗಿದೆ. ಈ ಕಾಮಾಲೆಯ ರೋಗದಲ್ಲಿ ಹಲವು ಬಗೆಗಳಿವೆ. ಬತ್ ಕಾಮಾಲೆ, ಡುಬ್ಬ ಕಾಮಾಲೆ, ಅರಿಶಿನ ಕಾಮಾಲೆ, ಹೀಗೆ ಹಲವು ಬಗೆಯದ ಕಾಮಾಲೆ ರೋಗಗಳಿವೆ. ಇದಕ್ಕೆ ಸರಿಯಾದ ಸಮಯಕ್ಕೆ ಸರಿಯಾದ ಔಷಧ ದೊರಕಿದರೆ ಇದನ್ನು ಸುಲಭವಾಗಿ ಗುಣಪಡಿಸಿಕೊಳ್ಳಬಹುದು. ಕಾಮಾಲೆ ರೋಗಕ್ಕೆ ಹೆಚ್ಚಿನದಾಗಿ ಆಯುರ್ವೇದ ಔಷಧಿಯು ಹೆಚ್ಚು ಉಪಯುಕ್ತವಾಗಿರುತ್ತದೆ. ಈ ಕಾಮಾಲೆ ರೋಗಕ್ಕೆ ದಿವ್ಯವಾದಂತಹ ಆಯುರ್ವೇದಿಕ್ ಔಷಧಿಯನ್ನು ಸ್ವತಹ ಮನೆಯಲ್ಲಿಯೇ ತಯಾರಿಸಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ನೆಲನೆಲ್ಲಿ ಗಿಡವನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿಕೊಂಡು, ಎರಡನೆಯದಾಗಿ ಅಣ್ಣೆ ಸೊಪ್ಪನ್ನು ಸಹ ಸ್ವಚ್ಚ ಗೊಳಿಸಿಕೊಂಡು,ಇವೆರಡು ಸೊಪ್ಪನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಸಣ್ಣ ತುಂಡುಗಳನ್ನು ಮಾಡಿ ಅದಕ್ಕೆ ಒಂದು ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಜಜ್ಜಬೇಕು. ಕಲ್ಲಿನಲ್ಲಿ ಹಾಕಿ ಜಜ್ಜುವುದರಿಂದ ಅದರಲ್ಲಿನ ಔಷಧ ಗುಣವು ಹೋಗದಂತೆ ಸರಿಯಾಗಿ ಬಳಕೆ ಯಾಗುವಂತೆ ಕಾಪಾಡುತ್ತದೆ. ತದನಂತರ ಅದನ್ನು ಒಂದು ಬಟ್ಟೆಯಲ್ಲಿ ಹಾಕಿ, ಸ್ವಲ್ಪ ಪ್ರಮಾಣದ ನೀರನ್ನು ಸೇರಿಸಿ 2 ರಿಂದ 3 ಚಮಚ ವಾಗುವಷ್ಟು ಮಾಡಿಕೊಂಡು ರಸವನ್ನು ಹಿಂಡಿ ತೆಗೆದುಕೊಳ್ಳಬೇಕು. ಇದಕ್ಕೆ ಒಂದು 100ಮಿಲಿಯಾಗುವಷ್ಟು ಮೇಕೆಯ ಹಾಲನ್ನು ಸೇರಿಸಿಕೊಳ್ಳಬೇಕು.
ಮೇಕೆ ಹಾಲಿನಲ್ಲಿ ಔಷಧ ಗುಣದ ಪ್ರಮಾಣವು ಹೆಚ್ಚಾಗಿರುತ್ತದೆ. ಹಾಗಾಗಿ ಮೇಕೆಯ ಹಾಲನ್ನು ಬಳಸುವುದು ಅತ್ಯುತ್ತಮ. ಮೇಕೆಯ ಹಾಲಿನೊಂದಿಗೆ ಔಷಧವನ್ನು ಬೆರೆಸುವುದರಿಂದ ಹಸಿರು ಬಣ್ಣಕ್ಕೆ ಬರುತ್ತದೆ. ಇದು ಸ್ವಲ್ಪ ಕಹಿ ಅಂಶವನ್ನು ನೀಡುವುದರಿಂದ ಇದಕ್ಕೆ ಪರಿಶುದ್ಧವಾದ ಬೆಲ್ಲವನ್ನು ಒಂದರಿಂದ ಒಂದುವರೆ ಚಮಚ ಸೇರಿಸಿಕೊಳ್ಳಬಹುದು. ಬೆಲ್ಲವನ್ನು ಸೇರಿಸುವುದರಿಂದ ಅದರ ಕಹಿ ಅಂಶವನ್ನು ಸ್ವಲ್ಪ ಪ್ರಮಾಣದಲ್ಲಿ ಹೋಗಲಾಡಿಸಲು, ಅದನ್ನು ಸೇವಿಸಲು ಅನುಕೂಲವಾಗುತ್ತದೆ. ಸಿದ್ಧವಾದ ಬೆಲ್ಲವಿಲ್ಲದಿದ್ದರೆ ಕಬ್ಬಿನ ಹಾಲನ್ನು ಸೇರಿಸಬಹುದು. ಈ ಔಷಧವನ್ನು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಹೀಗೆ ಈ ಔಷಧವನ್ನು ಒಂದು ವಾರ ತೆಗೆದುಕೊಳ್ಳಬೇಕು. ಈ ಔಷಧದಿಂದ ಕಾಮಾಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಕಾಮಾಲೆ ರೋಗಕ್ಕೆ ಈ ಔಷಧ ತೆಗೆದುಕೊಳ್ಳುವುದರ ಜೊತೆಗೆ ಸರಿಯಾದ ಪಥ್ಯವನ್ನು ಅನುಸರಿಸಬೇಕು. ಅಂದರೆ ಕರಿದ ಪದಾರ್ಥಗಳು,ಮಾಂಸ ಪದಾರ್ಥಗಳು,ಜಿಡ್ಡಿನ ಪದಾರ್ಥಗಳು ಎಣ್ಣೆ ಅಂಶಗಳುಳ್ಳ ಪದಾರ್ಥಗಳನ್ನು ಸ್ವಲ್ಪ ಕಾಲದವರೆಗೆ ಬಿಡಬೇಕು. ಔಷಧದ ಜೊತೆಗೆ ಪಥ್ಯವನ್ನು ಸರಿಯಾಗಿ ಅನುಸರಿಸಿದಲ್ಲಿ ಕಾಮಾಲೆ ರೋಗವನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕಾಮಾಲೆ ರೋಗವನ್ನು ನಿರ್ಲಕ್ಷಿಸದೆ ಸರಿಯಾದ ಔಷಧವನ್ನು ಮಾಡಿಕೊಳ್ಳುವುದು ಉತ್ತಮ.