2020 ರ ಗ್ರಾಮ ಪಂಚಾಯತಿ ಚುನಾವಣೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಗ್ರಾಮ ಪಂಚಾಯತಿ ಚುನಾವಣೆಯ ಮೂಲ ಆಶಯ ಏನು, ಯಾರೆಲ್ಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಹಾಗೂ ಗ್ರಾಮ ಪಂಚಾಯತಿಯ ಯಾವ ಯೋಜನೆಗೆ ಸರ್ಕಾರದಿಂದ ಎಷ್ಟು ಅನುದಾನ ಸಿಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಗ್ರಾಮ ಪಂಚಾಯತಿ ಚುನಾವಣೆ ಡಿಸೆಂಬರ್ 22 ಹಾಗೂ 27 ರಂದು ನಡೆಯಲಿದ್ದು ವಿದ್ಯಾವಂತರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಶಯ ಇತ್ತು ಅದರಂತೆ ಈ ಬಾರಿ ವಿದ್ಯಾವಂತರು, ಇಂಜಿನಿಯರ್, ಶಿಕ್ಷಕರು ಸ್ಪರ್ಧಿಸಲಿದ್ದಾರೆ. ನಮ್ಮ ಊರಿನ ಅಭಿವೃದ್ಧಿಯೇ ನಮ್ಮ ಪರಮ ಧ್ಯೇಯ ಎಂಬ ಮಾತನ್ನು ಪಾಲಿಸಲಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯ ದಿನಾಂಕ ನಿಗದಿಯಾಗಿದೆ ಹಸನಾಗಲಿ ಹಳ್ಳಿ ಎಂಬ ಆಶಯದೊಂದಿಗೆ ವಿದ್ಯಾವಂತರು ಗ್ರಾಮ ಅಭಿವೃದ್ಧಿಗೆ ಕೈ ಜೋಡಿಸಲಿದ್ದಾರೆ. ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಪ್ರಚಾರ ಜೋರಾಗಿದೆ.

ಈ ಬಾರಿ ಚುನಾವಣೆಯಲ್ಲಿ ವಿದ್ಯಾವಂತರು ಕಣ್ಣಕ್ಕಿಳಿದಿರುವುದು ವಿಶೇಷ ಅದರ ಜೊತೆಗೆ ರಾಜಕೀಯ ಹಿನ್ನಲೆ ಇಲ್ಲದೆ ಇರುವ ಯುವತಿಯರು ಸ್ಪರ್ಧಿಸಿರುವುದು ಇನ್ನೂ ವಿಶೇಷವಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ಯುವ ಸಮೂಹ ಸ್ಪರ್ಧಿಸಲಿದೆ. ಕೋವಿಡ್ 19 ಇದ್ದ ಕಾರಣ ಅಸಾಧಾರಣ ಹಾಗೂ ಸವಾಲಿನ ಸಮಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಕೊರೋನ ಕಾರಣದಿಂದ ಲಕ್ಷಾಂತರ ಮಂದಿ ಹಳ್ಳಿಗಳಿಗೆ ಬಂದರು. ಹಳ್ಳಿಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಆವಿಷ್ಕಾರ ನಡೆಸುತ್ತಿದ್ದಾರೆ.

ಸೇವಾ ಮನೋಭಾವ ಇರುವವರಿಗೆ ಹೊಸ ಅವಕಾಶ ಗ್ರಾಮ ಪಂಚಾಯತ್ ಚುನಾವಣೆಯಿಂದ ದೊರೆಯಲಿದೆ. ವಿದ್ಯಾವಂತರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗ್ರಾಮ ಉದ್ಧಾರವಾಗಬಹುದು, ಗ್ರಾಮ ಪಂಚಾಯತಿಯ ಮೂಲ ಆಶಯ ಈಡೇರಬಹುದು. ಗ್ರಾಮ ಪಂಚಾಯತಿಯ ಯೋಜನೆಗಳಿಗೆ ಅನುದಾನ ಬರುತ್ತದೆ, ರಸ್ತೆ ನಿರ್ಮಾಣಕ್ಕೆ 80 ಲಕ್ಷ ಅನುದಾನ ಸಿಗಲಿದೆ. ಮನೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ, ಚರಂಡಿ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ, ಕುಡಿಯುವ ನೀರಿನ ವ್ಯವಸ್ಥೆಗೆ 20 ಲಕ್ಷ ರೂಪಾಯಿ, ಕೆರೆಗಳ ನಿರ್ಮಾಣ ಹಾಗೂ ಕೆರೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ, ದನದ ಕೊಟ್ಟಿಗೆ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ, ಕೌಶಲ್ಯ ತರಬೇತಿಗಾಗಿ 50 ಲಕ್ಷ ರೂಪಾಯಿ, ಶಾಲೆಗಳಿಗೆ 50 ಲಕ್ಷ ರೂಪಾಯಿ, ಮಕ್ಕಳ ಆಟದ ಮೈದಾನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ, ಕಂಪ್ಯೂಟರ್, ಲ್ಯಾಬ್ ಗಳಿಗೆ 20 ಲಕ್ಷ ರೂಪಾಯಿ, ಗ್ರಂಥಾಲಯ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ, ಶೌಚಾಲಯ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ, ನಾಗರಿಕ ಕೇಂದ್ರಗಳಿಗೆ 10 ಲಕ್ಷ ರೂಪಾಯಿ, ಮಿನಿ ಮಾರುಕಟ್ಟೆ ನಿರ್ಮಾಣ ಮಾಡಲು 50 ಲಕ್ಷ ರೂಪಾಯಿ, ಸಮುದಾಯ ಭವನಕ್ಕೆ 50 ಲಕ್ಷ ರೂಪಾಯಿ, ಹೈಸ್ಪೀಡ್ ಇಂಟರ್ನೆಟ್ ಗಾಗಿ 10 ಲಕ್ಷ ರೂಪಾಯಿ, ಧಾನ್ಯ ಶೇಖರಣಾ ಕೇಂದ್ರ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ, ಸ್ಮಶಾನ ಅಭಿವೃದ್ಧಿಗೆ 20 ಲಕ್ಷ ರೂಪಾಯಿ ಒಟ್ಟು 7,20,00,000 ರೂಪಾಯಿಗಳನ್ನು ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಅನುದಾನ ನೇರವಾಗಿ ನಮ್ಮ ಗ್ರಾಮ ಪಂಚಾಯತಿಗೆ ಬರುತ್ತದೆ. ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿದ್ಯಾವಂತರನ್ನು ಆಯ್ಕೆ ಮಾಡಬೇಕು, ಕೆಲಸ ಮಾಡುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತದಾರರ ಆದ್ಯ ಕರ್ತವ್ಯವಾಗಿದೆ.

Leave a Reply

Your email address will not be published. Required fields are marked *