ಹೊಸ ದಾಖಲೆ ಬರೆದ ಜೈ ಭೀಮ್ ಸಿನಿಮಾ ಸೂರ್ಯನ ನಟನೆಗೆ ಅಭಿಮಾನಿಗಳು ಫುಲ್ ಪಿಧಾ

0 3


ಸೂರ್ಯ ನಟನೆಯ ಜೈ ಭೀಮ್ ಚಿತ್ರ ಒಂದಾದ ಮೇಲೆ ಒಂದು ವಿವಾದ ಸೃಷ್ಟಿ ಮಾಡುತ್ತಾ ಇದೆ. ಸಿನಿಮಾ ವಿರುದ್ಧ ಸಾಕಷ್ಟು ಮಂದಿ ತಿರುಗಿ ಮಾತನಾಡಿದ್ದಾರೆ. ಇನ್ನೂ ಕೆಲವರು ಸಿನಿಮಾ ಬ್ಯಾನ್​ ಮಾಡಬೇಕು ಎಂದು ಆಗ್ರಹಿಸುತ್ತಿದ್ದರು. ಈ ಮಧ್ಯೆ ನಟ ಸೂರ್ಯನಿಗೆ ಪ್ರಾಣ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರ ಮನೆಗೆ ಪೊಲೀಸ್​ ಭದ್ರತೆ ಒದಗಿಸಲಾಗಿದೆ. ಈ ಎಲ್ಲದರ ಮಧ್ಯೆ ಚಿತ್ರತಂಡ ಹೊಸ ದಾಖಲೆಯೊಂದನ್ನು ಬರೆದಿದೆ. ಈ ವಿಚಾರ ಚಿತ್ರತಂಡ ಹಾಗೂ ಸೂರ್ಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಾದರೆ ಜೈ ಭೀಮ್ ಸಿನಿಮಾ ಕೊಟ್ಟ ದಾಖಲೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ

ಇತ್ತೀಚೆಗೆ ಜೈ ಭೀಮ್​ ಸಿನಿಮಾ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾವನ್ನು ನೋಡಿ ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಈ ಚಿತ್ರ ಐಎಂಡಿಬಿ ರೇಟಿಂಗ್​ನಲ್ಲಿ ದಾಖಲೆ ಬರೆದಿದೆ. ಈ ಸಿನಿಮಾಗೆ ಐಎಂಡಿಬಿಯಲ್ಲಿ 10ಕ್ಕೆ 9.6 ಅಂಕ ನೀಡಲಾಗಿದೆ. ಈ ಮೂಲಕ ಸಿನಿಮಾ ಹಾಲಿವುಡ್​ನ ನ ದಿ ಗಾಡ್​ ಫಾದರ್, ದಿ ಗಾಡ್​ ಫಾದರ್​ ಪಾರ್ಟ್​ 2 ಹಾಗೂ ದಿ ಡಾರ್ಕ್​ ನೈಟ್​ ಚಿತ್ರಗಳನ್ನು ಹಿಂದಿಕ್ಕಿದೆ. ದಿ ಗಾಡ್​ ಫಾದರ್​ 9.2 ರೇಟಿಂಗ್​ ಕೊಡಲಾಗಿದೆ. ದಿ ಗಾಡ್​ ಫಾದರ್​ ಪಾರ್ಟ್​ 2 9.0 ರೇಟಿಂಗ್​ ಪಡೆದುಕೊಂಡಿದೆ.

ಇತ್ತೀಚೆಗೆ ಜೈ ಭೀಮ ಸಿನಿಮಾ ಬಗ್ಗೆ ವನ್ನಿಯಾರ್ ಸಮುದಾಯದ ಅಧ್ಯಕ್ಷ ಪು ಥಾ ಅರುಳ್ಮೋಳಿ ಅವರು ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ದೃಶ್ಯಗಳು ವನ್ನಿಯಾರ್ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿದೆ. ಈ ಕಾರಣಕ್ಕೆ ಅವುಗಳನ್ನು ತೆಗೆದು ಹಾಕಬೇಕು ಎಂದು ನೋಟಿಸ್ ನೀಡಲಾಗಿದೆ. ಸಿನಿಮಾದಲ್ಲಿ ಬರುವ ಕ್ಯಾಲೆಂಡರ್​ ಒಂದರಲ್ಲಿ ಅಗ್ನಿ ಕುಂಡದ ಫೋಟೋ ಇದೆ. ಅಗ್ನಿ ಕುಂಡವು ವನ್ನಿಯಾರ್ ಸಮುದಾಯದ ಚಿಹ್ನೆ. ದುರುದ್ದೇಶದಿಂದ ಅಗ್ನಿ ಕುಂಡದ ಚಿತ್ರವನ್ನು ಇರಿಸಲಾಗಿದೆ ಎಂಬ ವಿವಾದ ಹುಟ್ಟಿತು.

ಈ ಸಿನಿಮಾದಲ್ಲಿ ಬರುವ ಸಬ್​ ಇನ್​ಸ್ಪೆಕ್ಟರ್​ಗೆ ಗುರುಮೂರ್ತಿ ಎಂದು ಹೆಸರು ಇಡಲಾಗಿದೆ. ಈ ಸಬ್​-ಇನ್​ಸ್ಪೆಕ್ಟರ್​ ಸಿನಿಮಾದ ಪ್ರಮುಖ ಖಳನಾಯಕ. ಗುರುಮೂರ್ತಿ ಎಂಬುದು ಪಿಎಂಕೆಯ ಪ್ರಮುಖ ನಾಯಕ ಕಾಡುವೆಟ್ಟಿ ಜೆ ಗುರುವನ್ನು ಪ್ರತಿನಿಧಿಸುತ್ತದೆ ಎಂದು ಆರೋಪಿಸಲಾಗಿದೆ. ಇಷ್ಟೊಂದು ವಿವಾದದ ನಡುವೆ ಈ ಸಿನಿಮಾ ಹೊಸ ದಾಖಲೆ ಬರೆದಿರುವುದು ಅಚ್ಚರಿಯಾಗುತ್ತದೆ. ಒಟ್ಟಿನಲ್ಲಿ ವಿವಾದದ ನಡುವೆಯೂ ತೆರೆಕಂಡು ಯಶಸ್ಸಿನತ್ತ ಸಾಗುತ್ತಿದೆ.

Leave A Reply

Your email address will not be published.