ಕೃಷಿಮೇಳದಲ್ಲಿ ಕೃಷಿ ಉತ್ಪನ್ನಗಳು, ಯಂತ್ರೋಪಕರಣಗಳು, ಹೋರಿ, ಆಕಳುಗಳನ್ನು ನೋಡಬಹುದು. ಇತ್ತೀಚಿನ ಕೃಷಿಮೇಳವೊಂದರಲ್ಲಿ 1 ಕೋಟಿ ರೂಪಾಯಿಗೆ ಹೋರಿ ಖರೀದಿಯಾಗಿದೆ. ಹಾಗಾದರೆ ಆ ಹೋರಿಯ ವಿಶೇಷತೆಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಇತ್ತೀಚೆಗೆ ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮೇಳ ನಡೆದಿದೆ. ಎಲ್ಲರಿಗೂ ಉಚಿತ ಲಸಿಕೆ ಎಂಬ ಒಂದು ಉತ್ತಮ ಯೋಜನೆಯಿಂದಾಗಿ ಕೊರೋನ ವೈರಸ್ ಅಟ್ಟಹಾಸ ಆದಷ್ಟು ನಿಯಂತ್ರಣಕ್ಕೆ ಬಂದ ನಂತರ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಿ ನಡೆಸಿದ ಮೊದಲ ಕೃಷಿ ಮೇಳ ಇದಾಗಿದೆ. ಈ ಕೃಷಿ ಮೇಳದಲ್ಲಿ ಹಲವಾರು ವಿವಿಧ ರೀತಿಯ ಉಪಯುಕ್ತ ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ, ಪ್ರಾಣಿಗಳ ಪ್ರದರ್ಶನ ಹಾಗೂ ಪ್ರಾಣಿ ಮಾರಾಟ ನಡೆಯಿತು. ಪ್ರಾಣಿ ಪ್ರದರ್ಶನದಲ್ಲಿ ಒಂದು ಹೋರಿ ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದೆ.

ನಾಲ್ಕು ದಿನಗಳ ಕಾಲ ನಡೆದ ಈ ಕೃಷಿ ಮೇಳದಲ್ಲಿ ಕೃಷ್ಣ ಹೆಸರಿನ ಹೋರಿ ಇಡೀ ಕೃಷಿ ಮೇಳದ ಕೇಂದ್ರ ಬಿಂದುವಾಗಿತ್ತು. ಈ ಹೋರಿಯನ್ನು ನೋಡಲು ಹಾಗೂ ಖರೀದಿಸಲು ಬಹಳಷ್ಟು ಜನರು ಮುಗಿಬಿದ್ದಿದ್ದರು. ಕೇವಲ ಮೂರೂವರೆ ವರ್ಷ ವಯಸ್ಸಿನ ಈ ಹೋರಿ ಹಳ್ಳಿಕಾರ್ ಜಾತಿಗೆ ಸೇರಿದ್ದಾಗಿದೆ. ಈ ಬಗ್ಗೆ ಪ್ರಸಿದ್ಧ ರಾಷ್ಟೀಯ ಸುದ್ದಿ ವಾಹಿನಿ ANI ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಹೋರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಹೋರಿಯ ಬಗ್ಗೆ ಸುದ್ದಿವಾಹಿನಿಗಳಿಗೆ ಹೋರಿಯ ಮಾಲೀಕ ಬೋರೇಗೌಡ ಮಾಹಿತಿ ನೀಡಿದರು.

ಹಳ್ಳಿಕಾರ್ ತಳಿಯ ಹೋರಿಯ ವೀರ್ಯಕ್ಕೆ ಬಹುದೊಡ್ಡ ಬೇಡಿಕೆ ಇದ್ದು ಈ ಹೋರಿಯ ಒಂದು ಡೋಸ್ ಸ್ಪರ್ಮ್ ಗೆ ಒಂದು ಸಾವಿರ ರೂಪಾಯಿ ಬೆಲೆ ಇದೆ. ಹಳ್ಳಿಕಾರ್ ತಳಿಯ ಆಕಳಿನ ಹಾಲು A2 ಪ್ರೊಟೀನ್ ಯುಕ್ತ ಹಾಲಾಗಿರುತ್ತದೆ. ಹಳ್ಳಿಕಾರ್ ತಳಿಯ ಜಾನುವಾರುಗಳ ಸಂಖ್ಯೆ ಬರಬರುತ್ತಾ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಹೀಗಾಗಿ ಈ ತಳಿಗೆ ಸಾಕಷ್ಟು ಬೇಡಿಕೆ ಇದ್ದು ಸದ್ಯ ಈ ಹೋರಿಯನ್ನು ಖರೀದಿಸಲು ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಯ ಲೆಕ್ಕದಲ್ಲಿ ಬೆಲೆ ಕಟ್ಟುತ್ತಿದ್ದಾರೆ.

ಕೊನೆಗೂ ಒಬ್ಬರು ಒಂದು ಕೋಟಿ ರೂಪಾಯಿ ಕೊಟ್ಟು ಇದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಹೋರಿಯ ಫೋಟೊ ಸಾಕಷ್ಟು ವೈರಲ್ ಆಗುತ್ತಿದ್ದು ಇದರ ಬಗ್ಗೆ ಹಲವಾರು ಜನರು ಹಲವಾರು ರೀತಿಯಲ್ಲಿ ತಮ್ಮ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಹೋರಿಯ ಬಗ್ಗೆ ಆಶ್ಚರ್ಯವಾಗುತ್ತದೆ. ಒಂದು ಕೋಟಿ ಮೌಲ್ಯದ ಹೋರಿಯ ಬಗ್ಗೆ ಇದೆ ಮೊದಲ ಬಾರಿಗೆ ಕೇಳಲಾಗುತ್ತಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!