ಜಗ್ಗೇಶ್ ಹಾಗೂ ದರ್ಶನ್ ವಿ’ವಾದದ ಬಗ್ಗೆ ಶಶಿಕುಮಾರ್ ಏನಂದ್ರು ನೋಡಿ

0 1

ಜಗ್ಗೇಶ್​ರನ್ನು ಮುತ್ತಿಗೆ ಹಾಕಿದ  ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಆಗ್ರಹ ಡಿಬಾಸ್ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ ಕ್ಷಮೆ ಕೇಳಿ ಎಂದು ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳದೇ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಬಗ್ಗೆ ದರ್ಶನ್ ಕೂಡಾ ಏನೂ ಒಂದು ಮಾತು ಕೂಡಾ ಹೇಳದೆ ಇರುವುದು ಆಶ್ಚರ್ಯದ ಸಂಗತಿ ಆಗಿದೆ. ಈ ವಿಷಯದ ಕುರಿತಾಗಿ ಸ್ಯಾಂಡಲ್ವುಡ್ ನ ಹಿರಿಯ ನಟ ಶಶಿಕುಮಾರ್ ಅವರು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶಶಿಕುಮಾರ್ ಅವರು ಏನೆಂದು ಹೇಳಿದ್ದಾರೆ ಹಾಗೂ ಇದಕ್ಕೆ ಏನು ಪ್ರತಿಕ್ರಿಯೆ ಬಂದಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇತ್ತೀಚೆಗೆ ಅಷ್ಟೆ ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಅವರು ಮಾತನಾಡಿದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಖುದ್ದು ಜಗ್ಗೇಶ್ ಅವರೇ ಈ ಬಗ್ಗೆ ಟ್ವೀಟ್ ಮೂಲಕ ಅದಕ್ಕೆ ಸಮಜಾಯಿಷಿ ಕೂಡಾ ನೀಡಿದ್ದರು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದಕ್ಕೆ ಮತ್ತೆ ಕಿಡಿ ಹೊತ್ತಿಕೊಂಡಿದೆ. ದರ್ಶನ್ ಅಭಿಮಾನಿಗಳು ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ಕೆಲ ದಿನಗಳಿಂದ ನವರಸ ನಾಯಕ ಜಗ್ಗೇಶ್ ಮೈಸೂರಿನಲ್ಲಿ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿರುವ ತೋತಾಪುರಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗ ಹಠಾತಾಗಿ ದರ್ಶನ್ ಫ್ಯಾನ್ಸ್ ಶೂಟಿಂಗ್ ಸ್ಪಾಟ್‍ಗೆ ಬಂದು ಚಿತ್ರೀಕರಣ ನಿಲ್ಲಿಸಿ ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದಾರೆ.

ಡಿಬಾಸ್ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ, ಕ್ಷಮೆ ಕೇಳಿ ಎಂದು ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳದೇ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಲ ಸಮಯ ದರ್ಶನ್​ ಅಭಿಮಾನಿಗಳನ್ನು ಸಮಾಧಾನ ಮಾಡಲು ಖುದ್ದು ಜಗ್ಗೇಶ್ ಅವರೇ ಯತ್ನಿಸಿದ್ದಾರೆ. ತನ್ನ ತಪ್ಪಲ್ಲ, ತಾನು ಆ ರೀತಿ ಮಾತೇ ಆಡಿಲ್ಲ ಎಂದೂ ಎಷ್ಟು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ದರ್ಶನ್​ ಅಭಿಮಾನಿಗಳು ಇರಲಿಲ್ಲ. ಆದರೆ ದರ್ಶನ್ ಅಭಿಮಾನಿಗಳು ಯಾವ ಮಾತನ್ನೂ ಒಪ್ಪದೇ ಕ್ಷಮೆ ಕೇಳಲೇಬೇಕು ಎಂದಿದ್ದಾರೆ. ನಂತರ ತಾನು ಹಾಗೂ ದರ್ಶನ್ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದು, ಆಗಾಗ ಈಗಲೂ ಫೋನ್‍ನಲ್ಲಿ ಮಾತನಾಡುತ್ತಿರುತ್ತೇವೆ. ದರ್ಶನ್ ಅವರಿಗೆ ಮೊದಲಿಂದಲೂ ನಾನು ಸಪೋರ್ಟ್ ಮಾಡಿಕೊಂಡೇ ಬಂದಿದ್ದೇನೆ. ಯಾರೋ ನಮ್ಮಿಬ್ಬರನ್ನು ಕಂಡರೆ ಆಗದವರು ನನ್ನ ಆಡಿಯೋವನ್ನು ತಿರುಚಿ ನನ್ನ ದರ್ಶನ್ ನಡುವೆ ಮನಸ್ತಾಪ ಆಗಲೆಂದು ಹೀಗೆಲ್ಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಂತರ ದರ್ಶನ್ ಅಭಿಮಾನಿಗಳನ್ನು ಸಮಾಧಾನಪಡಿಸಿ ತೋತಾಪುರಿ ಶೂಟಿಂಗ್ ಸೆಟ್​ನಿಂದ ಕಳುಹಿಸಿದ್ದಾರೆ ಜಗ್ಗೇಶ್​.

ದರ್ಶನ್​ ಹಾಗೂ ಜಗ್ಗೇಶ್​ ಅಗ್ರಜ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಹಾಗಂತ ಡಿಬಾಸ್ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಅವರ ನಡುವೆ ಮುಸುಕಿನ ಹಗ್ಗಜಗ್ಗಾಟ ನಡೆಯುತ್ತಿದೆ ಅಂತೇನಿಲ್ಲ. ಯಾಕೆಂದರೆ ಇಬ್ಬರ ನಡುವೆಯೂ ಉತ್ತಮ ಬಾಂಧವ್ಯವಿದೆ. 2014ರಲ್ಲಿ ಅಗ್ರಜ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. 2017ರಲ್ಲಿ ಮೈಸೂರಿನಲ್ಲಿ ನವರಸ ನಾಯಕ ಜಗ್ಗೇಶ್ ಅವರು ಕಟ್ಟಿಸಿದ್ದ ಕಲ್ಯಾಣ ಮಂಟಪವನ್ನು ದರ್ಶನ್ ಉದ್ಘಾಟಿಸಿದ್ದರು. ಮಾತ್ರವಲ್ಲ ಕಳೆದ ವರ್ಷ ಖಳನಟ ಕಿಲ್ಲರ್ ವೆಂಕಟೇಶ್ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗ ಜಗ್ಗೇಶ್ ಅವರಿಂದ ಮಾಹಿತಿ ತಿಳಿದು ಖುದ್ದು ದರ್ಶನ್ ಅವರೇ ವೆಂಕಟೇಶ್‍ ಅವರ ಆಸ್ಪತ್ರೆ ವೆಚ್ಚ ಭರಿಸಿದ್ದರು.

ಇನ್ನು ಕಳೆದ ವಾರ ಆಡಿಯೋ ವೈರಲ್ ಆದಾಗ ಆಗಲೀ ಅಥವಾ ಈಗ ಅಭಿಮಾನಿಗಳು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ ಬಳಿಕವಾಗಲಿ ಡಿಬಾಸ್ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಆಡಿಯೋ ವೈರಲ್ ಆದಾಗ ಖುದ್ದು ಜಗ್ಗೇಶ್ ಅವರೇ ಆ ಬಗ್ಗೆ ಹಲವು ಸರಣಿ ಟ್ವೀಟ್‍ಗಳ ಮೂಲಕ ಹಾಗೂ ಅಭಿಮಾನಿಗಳಿಗೆ ಉತ್ತರಿಸುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದರ ಬಗ್ಗೆ ದರ್ಶನ್ ಕೂಡಾ ಏನೂ ಮಾತು ಆಡದೆ ಇದ್ದಿದ್ದು ಬೇಸರದ ಸಂಗತಿ ಆಗಿದೆ. ಈ ವಿಷಯದ ಬಗ್ಗೆ ಇನ್ನೊಮ್ಮೆ ತಮ್ಮ ಬೇಸರ ವ್ಯಕ್ತ ಪಡಿಸಿದ್ದ ಜಗ್ಗೇಶ್ ಅವರು ಇನ್ನೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದರು. ಇದರಲ್ಲಿ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ಸರಿಯಾಗಿ ನೆಲೆ ಇಲ್ಲವಾಗಿದೆ. ರಾಜಕುಮಾರ್, ವಿಷ್ಣುವರ್ಧನ್ , ಅಂಬರೀಷ್ ಇವರುಗಳ ನಿಧನದ ನಂತರ ಕನ್ನಡಕ್ಕೆ ಬೆಲೆ ಇಲ್ಲದಾಗಿದೆ ನಮ್ಮ ಇಂಡಸ್ಟ್ರಿಯಲ್ಲಿ ಬೇರೆ ಭಾಷಿಗರು ಬಂದು ಅವರ ಭಾಷೆ ಮಾತನಾಡಲು ಹೇಳುತ್ತಿದ್ದಾರೆ ಇನ್ನೂ ನಾನೂ ಕೂಡಾ ಈ ಮೂವರೂ ದಿಗ್ಗಜರ ಜೊತೆ ಜೊತೆಗೇ ಬೆಳೆದು ಬಂದವನು ಅವರ ನಗು , ನೋವಿನಲ್ಲಿ ನಾನೂ ಕೂಡಾ ಪಾಲುದಾರ ಇನ್ನು ಹಳೆಯ/ಹಿರಿಯ ನಟರಲ್ಲಿ ನಾವು ನಾಲ್ಕು ಜನ ಶಿವರಾಜಕುಮಾರ್ , ವಿ ರವಿಚಂದ್ರನ್ , ರಮೇಶ್ ಅರವಿಂದ್ ನಾವೇ ಒಂದು ನಾಲ್ಕು ಜನ ಇದ್ದೇವೆ ನಾವೂ ಮರಣ ಹೊಂದಿದ ಮೇಲೆ ನಮ್ಮ ತಿಥಿ ಮಾಡಿ ಖುಷಿ ಪಡಿ ಎಂದು ತಮ್ಮನ್ನೂ ಸೇರಿ ಹೇಳಿಕೊಂಡ ಜಗ್ಗೇಶ್ ತಮ್ಮ ಬೇಸರ ವ್ಯಕ್ತ ಪಡಿಸಿದರು.

ಇದರ ಬಗ್ಗೆ ಸ್ಯಾಂಡಲ್ವುಡ್ನ ಹಿರಿಯ ನಟರಲ್ಲಿ ಒಬ್ಬರಾದ ಶಶಿಕುಮಾರ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದು , ಈ ರೀತಿಯಾಗಿ ಬರೆದುಕೊಂಡಿದ್ದಾರೆ. “ಯಾವಾಗಲೂ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ನಿಮ್ಮ ಮುಖದಲ್ಲಿ ಈಗ ನೋವಿನ ನೆರಳನ್ನು ನೋಡಿ ದುಃಖ ಆಗುತ್ತಿದೆ ಎಂದು ತಿಳಿಸಿದ್ದಾರೆ. ಇದರಿಂದ ನಮಗೆ ತುಂಬಾ ಬೇಸರವಾಯಿತು. ಆದರೆ ಎಲ್ಲದಕ್ಕೂ ಕೂಡಾ ಒಂದು ಒಳ್ಳೆಯ ಕಾಲ ಅನ್ನೋದು ಇದ್ದೆ ಇರುತ್ತದೆ. ನಿಮ್ಮ ಮಾತು , ನಿಮ್ಮ ನಗು ನಿಮ್ಮ ಸಲಹೆ ಪ್ರೀತಿ ಸ್ನೇಹಕ್ಕೆ ನಾವು ಕನ್ನಡಿಗರು ಸದಾ ಚಿರಋಣಿ ಎಂದು ಬರೆದುಕೊಂಡಿದ್ದಾರೆ”. ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು “ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದ ಹಾಗೇ ಕೋವಿಡ್ ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತ ಇದ್ದೇವೆ ಇದರ ನಡುವೆ ವಿವಾದಗಳು ಬೇಡ ಚಿತ್ರರಂಗದ ಬೆಳವಣಿಗೆಗೆ ಎಂದು ದುಡಿಯೋಣ. ಈ ವಿವಾದಕ್ಕೆ ಸಂಬಂಧ ಪಟ್ಟವರು ಎಲ್ಲವನ್ನೂ ಮರೆತರೆ ಒಳ್ಳೆಯದು” ಎಂಬ ಸಲಹೆ ನೀಡಿದ್ದಾರೆ. ಇನ್ನು ಇದರ ಬಗ್ಗೆ ಜಗ್ಗೇಶ್ ಅವರು ತಾನು ಇನ್ನುಮುಂದೆ ಚಿತ್ರರಂಗದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.