ಪಾರ್ವತಿಯ ಸಾಕ್ಷಾತ್ ಸ್ವರೂಪವಾಗಿರುವ ಜಡೆ ಗಣಪ ಇಲ್ಲಿ ನಡೆಯುವ ಪವಾಡವೇನು ಗೊತ್ತೇ?

0 4

ದೇಶದಲ್ಲಿ ಹಲವು ರೀತಿಯ ದೇವಾಲಯಗಳಿವೆ ಆದ್ರೆ ಪ್ರತಿ ಹಿಂದೂ ದೇವಾಲಯಗಳು ತಾನಂದೆಯಾದ ವಿಶೇಷತೆ ಹಾಗು ಮಹತ್ವವನ್ನು ಹೊಂದಿದೆ. ಅದೇ ನಿಟ್ಟಿನಲ್ಲಿ ಈ ದೇವಾಲಯ ಕೂಡ ತನ್ನದೆಯಾದ ವಿಶೇಷತೆ ಹಾಗು ಮಹತ್ವವನ್ನು ಹೊಂದಿದೆ. ಪಾರ್ವತಿಯ ಸಾಕ್ಷಾತ್ ಸ್ವರೂಪವಾಗಿರುವಂತ ಈ ಗಣಪನ ಸನ್ನಿದಿಯಲ್ಲಿ ಬಂದು ಹಲವು ಭಕ್ತರು ಕುಜ ದೋಷ, ಕೇತು ದೋಷ, ಇವುಗಳನ್ನು ನಿವಾರಿಸಿಕೊಂಡು ಹೋಗುತ್ತಾರೆ. ಈ ಜಡೆ ಗಣಪ ದೇವಾಲಯವು ಇನ್ನು ಹತ್ತಾರು ವಿಶೇಷತೆಗಳನ್ನು ಹೊಂದಿದೆ.

ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಇದರ ವಿಶೇಷತೆ ಏನು ಇಲ್ಲಿಗೆ ಹೋಗುವ ಮಾರ್ಗ ವ್ಯವಸ್ಥೆ ಹೇಗಿದೆ ಅನ್ನೋ ಹಲವು ಕುತೂಹಲಕಾರಿ ವಿಚಾರವನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಇಲ್ಲಿ ನೆಲೆಸಿರುವಂತ ಜಡೆ ಗಣಪ ಎಲ್ಲರಂತಲ್ಲ ವಿಭಿನ್ನ ಹಾಗು ವಿಶೇಷತೆಯನ್ನು ಹೊಂದಿದೆ. ಇನ್ನು ಜಡೆಯನ್ನು ಹೊಂದಿರುವಂತ ಏಕೈಕ ಗಣಪ ಎನಿಸಿರುವ ಈ ಜಡೆ ಗಣಪನ ಕೈಯಲ್ಲಿಉಗ್ರ ನರಸಿಂಹ ಸ್ವಾಮಿಯು ಆಸೀನನಾಗಿದ್ದಾನೆ.

ಇದು ಇರೋದುನಮ್ಮ ಕರ್ನಾಟಕದಲ್ಲೇ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ, ಈ ದೇವಾಲಯವು ಪ್ರಸನ್ನ ಗಣಪತಿ ಎಂಬುದಾಗಿ ಪ್ರಸಿದ್ದಿ ಹೊಂದಿದೆ. ಇನ್ನು ಈ ದೇವಾಲಯದಲ್ಲಿ ಏಕಶಿಲಾ ಮೂರ್ತಿ ಜಡೆ ಗಣಪ ನೋಡಲು ಹೆಚ್ಚು ಆಕರ್ಷಣೀಯವಾಗಿದೆ. ಅಷ್ಟೇ ಅಲ್ಲದೆ ಸುಂದರ ರಾಜಗೋಪುರ ನಡುವೆ ಈ ದೇವಾಲಯವು ಕಂಗೊಳಿಸುತ್ತದೆ.

ಇದನ್ನು ಕಟ್ಟಿಸಿದ ಕೀರ್ತಿ ಒಂದನೇ ಮದಕರಿನಾಯಕರ ಮೈದುನನಾದ ಗುಲ್ಯಾಪ್ಪನಾಯಕನಿಗೆ ಸಲ್ಲುತ್ತದೆ ಅನ್ನೋದನ್ನ ಇತಿಹಾಸ ಹೇಳುತ್ತದೆ. ಇನ್ನು ಈ ದೇವಾಲಯದ ವಿಶೇಷತೆಯನ್ನು ಹೇಳುವುದಕ್ಕಿಂತ ನೋಡುವುದು ಬಲು ಚಂದವಾಗಿದೆ ಹಾಗಾಗಿ ಹೇಳುತ್ತಾ ಹೋದರೆ ಇನ್ನು ತುಂಬಾನೇ ಇದೆ ಹಾಗಾಗಿ ಕೆಲವೊಂದು ವಿಚಾರಗಳನ್ನು ತಿಳಿಸಲು ಇಲ್ಲಿ ಬಯಸುತ್ತೇವೆ. ಗಣಪತಿ ಮೂಲಾಧಾರ ಕ್ಷೇತ್ರಸ್ಥಿತನಾಗಿ ಕುಂಡಲಿನೀ ಶಕ್ತಿ ಪ್ರಚೋದಕರಾಗಿ ಉಗ್ರಸ್ವಾಮಿಯೊಂದಿಗೆ ನೆಲೆಸಿದ್ದಾನೆ.

ಇನ್ನು ಭಕ್ತರ ಇಷ್ಟಾರ್ಥವನ್ನು ಪೂರೈಸುವ ನೆಚ್ಚಿನ ಗಣಪನಾಗಿದ್ದಾನೆ, ಇನ್ನು ಈ ಜಡೆ ಗಣಪನ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ 16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆಗೆ 85 ಕೆ.ಜಿ. ಬೆಣ್ಣೆ ಬೇಕಾಗುತ್ತದೆ. ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ನಂಬರ್ 99867 22167 ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

Leave A Reply

Your email address will not be published.