ಸಾವಿರಾರು ದೇವಾಲಯಗಳನ್ನು ಹೊಂದಿರುವಂತ ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುವಂತ ದೇವಾಲಯಗಳನ್ನು ಕಾಣಬಹುದು. ಪ್ರತಿ ದೇವಾಲಯಗಳು ತನ್ನದೆಯಾದ ವಿಶೇಷತೆಯಿಂದ ಗುರುತಿಸಿಕೊಂಡಿರುತ್ತವೆ ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಿರುತ್ತವೆ.

ಈ ದೇವಾಲಯವು ಕೂಡ ಅಷ್ಟೇ ಬೇಡಿದ ಭಕ್ತರ ಪಾಪಗಳನ್ನು ನಿವಾರಿಸಿ ಮಕ್ಕಳಭಾಗ್ಯವನ್ನು ಕೇಳುವವರಿಗೆ ಸನಾತನಪಲವನ್ನು ನೀಡುತ್ತಾನೆ ಈ ಲಕ್ಷ್ಮಿ ನರಸಿಂಹ ಸ್ವಾಮಿ, ಇನ್ನು ಜೀವನದಲ್ಲಿ ಅಗತ್ಯವಾಗಿ ಬೇಕಾಗುವಂತ ವಿದ್ಯೆ ಅರೋಗ್ಯ ಸಂಪತ್ತನ್ನು ಕರುಣಿಸುವ ಈ ಸ್ವಾಮಿಯ ದರ್ಶನ ಭಾಗ್ಯವನ್ನು ಪಡೆದರೆ ಜೀವನ ಪಾವನ ಅನ್ನುತ್ತಾರೆ ಇಲ್ಲಿನ ಭಕ್ತರು.

ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸಿ ದರ್ಶನ ಭಾಗ್ಯವನ್ನು ಪಡೆಯುತ್ತಾರೆ, ಇನ್ನು ಈ ದೇವಾಲಯ ಇರೋದಾದರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಬೆಂಗಳೂರಿನಿಂದ ತುಮಕೂರು ಟೋಲ್ ರಸ್ತೆ ಮುಖಾಂತರ ಫ್ಲೈ ಓವರ್ ಕೆಳಗೆ ಬಲ ತಿರುವು ಪಡೆದು ಉಡಿಗೆರೆ ಮಾರ್ಗವಾಗಿ ಚಲಿಸಿ ಬೆಟ್ಟಕ್ಕೆ ಎಡಬದಿ ಸಿಗುವ ದಾರಿಯನ್ನು ಅನುಸರಿಸಿದರೆ ದೇವರಾಯನ ದುರ್ಗಾ ಸಿಗುತ್ತದೆ ಅಲ್ಲಿ ಕೇಳಿದರೆ ಲಕ್ಷ್ಮಿ ನರಸಿಂಹ ದೇವಾಲಯದ ಬಗ್ಗೆ ಮಾಹಿತಿ ನೀಡುತ್ತಾರೆ.

By

Leave a Reply

Your email address will not be published. Required fields are marked *