ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಾರ್ ಹತ್ತಿ ದೇಶ ಸುತ್ತಲು ಹೊರಟ ಯುವ ದಂಪತಿ ಕಾರಲ್ಲೇ ಊಟ ನಿದ್ದೆ

0 0

ಯಾವುದೇ ಅಡೆ ತಡೆ ಇಲ್ಲದೇ ದೇಶ ಸುತ್ತಬೇಕು ಇಷ್ಟ ಆಗಿರೋ ಎಲ್ಲಾ ಪ್ರಸಿದ್ಧ ಪ್ರದೇಶಗಳಿಗೂ ಭೇಟಿ ಕೊಡಬೇಕು ಎಂಬ ಯೋಚನೆ ಒಂದಲ್ಲ ಒಂದು ದಿನ ಬಂದು ಈ ರೀತಿಯಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಂದು ಕನಸಿರುತ್ತದೆ. ಆದರೆ ಶಿಕ್ಷಣ, ಉದ್ಯೋಗ, ಮನೆ, ಪೋಷಕರು, ಹಣ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಹಲವು ಮಂದಿ ತಮ್ಮ ಕನಸ್ಸನ್ನು ದೂರ ಮಾಡಿಕೊಂಡಿರುತ್ತಾರೆ. ಆದರೆ ಕೆಲ ಮಂದಿ ಮಾತ್ರ ತಾವು ಅಂದುಕೊಂಡಿದ್ದನ್ನು ಮಾಡಿ ಖುಷಿ ಪಡುತ್ತಾರೆ. ಇದೇ ರೀತಿ ಕೇರಳದ ಯುವ ಜೋಡಿಯೊಂದು ತಮ್ಮ ಕಾರಿನಲ್ಲೇ ದೇಶ ಸುತ್ತುವ ಯೋಚನೆ , ಯೋಜನೆ ಮಾಡಿಕೊಂಡು ತಾವು ಈಗ ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಾರ್ ಹತ್ತಿ ದೇಶ ಸುತ್ತಲು ಹೊರಟಿದ್ದಾರೆ.

ಕೇರಳದ ತ್ರಿಶೂರ್ ಮೂಲದ ದಂಪತಿ ಹರಿಕೃಷ್ಣ ಮತ್ತು ಲಕ್ಷ್ಮೀ ಕೃಷ್ಣ ತಮ್ಮ ಕಾರಿನಲ್ಲೇ ದೇಶ ಸುತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಮ್ಮ 9 ಟೂ 5 ಕೆಲಸಕ್ಕೆ ರಾಜೀನಾಮೆ ನೀಡಿ ಕುಟುಂಬದ ಬೆಂಬಲದೊಂದಿಗೆ ಈ ಪ್ರವಾಸವನ್ನು ಕೈಗೊಂಡಿದ್ದಾರೆ. ಹರಿಕೃಷ್ಣ ದಂಪತಿಗಳು ದೇಶದ 23 ರಾಜ್ಯಗಳಿಗೆ ಭೇಟಿ ನೀಡುವ ಗುರಿಯನ್ನು ಹೊಂದಿದ್ದು ತಮ್ಮ ಯೋಜನೆಯನ್ನು ಎರಡೂವರೆ ಲಕ್ಷ ರೂಪಾಯಿ ಹಣದೊಂದಿಗೆ ಮುಕ್ತಾಯ ಮಾಡಲು ಪ್ಲಾನ್ ಮಾಡಿದ್ದಾರೆ. ತಮ್ಮ ಪ್ರವಾಸಕ್ಕಾಗಿ ಬೇಕಾದ ಅಗತ್ಯ ವಸ್ತುಗಳನ್ನು ಮನೆಯಿಂದಲೇ ತೆಗೆದುಕೊಂಡಿರುವ ಇವರು ಕಾರಿನಲ್ಲೇ ಮಲಗಿಕೊಳ್ಳಲು ಅನುಕೂಲ ಆಗುವಂತೆ ಬೆಡ್ ಸೇರಿದಂತೆ ನೀರಿನ ಕ್ಯಾನ್, ಗ್ಯಾಸ್ ಮತ್ತು ಸ್ಟವ್ ಇತ್ಯಾದಿ ಸಾಮಗ್ರಿಗಳನ್ನು ತೆಗೆದುಕೊಂಡಿದ್ದಾರೆ.

ಇದರ ಕುರಿತಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಕೃಷ್ಣ ತಾವು ತೆರಳುವ ಮಾರ್ಗದಲ್ಲಿ ತಾವೇ ಅಡುಗೆ ಮಾಡಿಕೊಂಡು ಕೆಲ ಸಮಯದಲ್ಲಿ ಡಾಬಾಗಳಲ್ಲೂ ಊಟ ಮಾಡುತ್ತೇವೆ ಎನ್ನುತ್ತಾರೆ. ಇನ್ನೂ ತಮ್ಮ ಪ್ರವಾಸವನ್ನು 2020ರ ಅಕ್ಟೋಬರ್​ನಲ್ಲಿ ಆರಂಭ ಮಾಡಿದ ಇವರು ಇದುವರೆಗೂ ಕರ್ನಾಟಕದ ಬೆಂಗಳೂರು, ಉಡುಪಿ, ಗೋಕರ್ಣ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಮುಂಬೈ ಹಾಗೂ ಇಲ್ಲಿಂದ ಮುಂಬೈ ಮೂಲಕ ರಾಜಸ್ಥಾನ, ಗುಜರಾತ್ ಪ್ರವಾಸವನ್ನು ಮುಗಿಸಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಭೇಟಿ ಕೊಟ್ಟು ಅಲ್ಲಿನ ಪ್ರವಾಸಿ ತಾಣಗಳನ್ನು ನೋಡುತ್ತಾ ಇರುವ ಈ ದಂಪತಿಗಳು ಇದುವರೆಗೂ 130 ದಿನಗಳಲ್ಲಿ ಸುಮಾರು 10 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳ ಜನರ ಜೀವನ ನೋಡುತ್ತ ಸಾಗುವುದು ಸಾಕಷ್ಟು ಖುಷಿ ಕೊಟ್ಟಿದೆ ಎಂದು ಇವರು ತಿಳಿಸಿದ್ದಾರೆ.

Leave A Reply

Your email address will not be published.