ಸ್ತ್ರೀಯರು ಕೈಗಳಿಗೆ ಧರಿಸುವ ಬಳೆಗಳು ಶೃಂಗಾರದ ಪ್ರತೀಕ ಅಷ್ಟೇ ಅಲ್ಲ. ಹಲವು ಆರೋಗ್ಯ ಪ್ರಯೋಜನಗಳಿವೆ. ಮಹಿಳೆಯರ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಮಹಿಳೆಯರು ಕೈಗೆ ಬಳೆ, ಕಾಲಿಗೆ ಗೆಜ್ಜೆ, ಕಾಲ್ಬೆರಳಿಗೆ ಉಂಗುರ, ಕಿವಿಗೆ ಓಲೆ, ಮೂಗಿಗೆ ನತ್ತು ಇವುಗಳನ್ನೆಲ್ಲ ಧರಿಸಬೇಕು ಎಂಬುದು ಕೇವಲ ಅಲಂಕಾರಕ್ಕೆ ಅಲ್ಲ. ಅಥವಾ ಇವು ಬರೀ ಸಂಪ್ರದಾಯ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳೂ ಅಲ್ಲ. ಇವುಗಳ ಹಿಂದೆ ಪ್ರತಿಯೊಂದಕ್ಕೂ ಶರೀರಶಾಸ್ತ್ರ, ಆರೋಗ್ಯ ಹಾಗೂ ಮಾನಸಿಕತೆಗೆ ಸಂಬಂಧಿಸಿದ ಕಾರಣಗಳಿವೆ.
ನಿಮ್ಮ ಸ್ಮರಣ ಶಕ್ತಿಯ ಹಿಂದೆಯೇ ಇರುಂತಹ ಬಳೆಗಳನ್ನು ಧರಿಸಿರುವ ಬಗ್ಗೆ ಒಂದು ಪೌರಾಣಿಕ ನಂಬಿಕೆ ಇದೆ. ಪುರಾಣದ ಪ್ರಕಾರ, ಮಹಿಳೆಯು ತನ್ನ ಪತಿಯ ಸುರಕ್ಷತೆಗಾಗಿ ಬಳೆಗಳನ್ನು ಧರಿಸಿರಬೇಕು ಮತ್ತು ಇದು ತನ್ನ ಪತಿಯ ವಯಸ್ಸನ್ನು ಹೆಚ್ಚಿಸಬಲ್ಲದು. ವಿವಾಹಿತ ಮಹಿಳೆಯರು ಬಳೆಗಳನ್ನು ಏಕೆ ಧರಿಸುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ.
ನಮ್ಮ ದೇಹದಲ್ಲಿ ಕೈನ ಮಣಿಕಟ್ಟು ಅತ್ಯಂತ ಶಕ್ತಿಯುತ ಜಾಗ. ಅಲ್ಲಿ ಸಾಕಷ್ಟು ಶಕ್ತಿ ಉತ್ಪನ್ನವಾಗುತ್ತದೆ. ಆ ಶಕ್ತಿ ದೇಹದ ಎಲ್ಲ ಭಾಗಕ್ಕೂ ಹರಡುತ್ತದೆ. ಬಳೆ ಧರಿಸುವುದು ಇದೇ ಮಣಿಕಟ್ಟಿನ ಸುತ್ತ. ಈ ಮಣಿಕಟ್ಟು ಪದೇ ಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಹಿಂದೆಲ್ಲ ಮಹಿಳೆಯರು ಪುರುಷರಂತೆ ದೇಹಕ್ಕೆ ಹೆಚ್ಚು ಶ್ರಮ ನೀಡುವ ಕೆಲಸ ಮಾಡದೆ ಸಣ್ಣಪುಟ್ಟ ಮನೆಗೆಲಸಗಳಲ್ಲೇ ಮುಳುಗಿರುತ್ತಿದ್ದರು.
ಆಗ ಅವರ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವ ಕೆಲಸವನ್ನು ಬಳೆ ಮಾಡುತ್ತಿತ್ತು. ಕೈಗಳು ನಿರಂತರವಾಗಿ ಅಲುಗಾಡುವುದರಿಂದ ಬಳೆಯ ಘರ್ಷಣೆಯೊಂದಿಗೆ ವಿದ್ಯುತ್ಕಾಂತೀಯ ತರಂಗಗಳು ಉತ್ಪನ್ನವಾಗಿ ಅವು ಇಡೀ ದೇಹಕ್ಕೆ ಹರಡುತ್ತಿದ್ದವು. ಬಳೆ ವೃತ್ತಾಕಾರವಾಗಿರುವುದರಿಂದ ಅಲ್ಲಿ ಉತ್ಪನ್ನವಾದ ಶಕ್ತಿ ಬೇರೆಲ್ಲಿಗೂ ವರ್ಗಾವಣೆಯಾಗದೆ ನರವ್ಯೂಹದ ಮೂಲಕ ನಮ್ಮ ದೇಹಕ್ಕೇ ವರ್ಗವಣೆಯಾಗಬೇಕು. ಇದರ ಪ್ರಮಾಣ ಬಹಳ ಸಣ್ಣದಾದರೂ ನಿರಂತರವಾಗಿ ಈ ಶಕ್ತಿ ದೇಹಕ್ಕೆ ಸಿಗುತ್ತಾ ಇರುವುದರಿಂದ ನಾವು ಕ್ರಿಯಾಶೀಲರಾಗಿರಲು ಬಳೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪುರುಷರೊಂದಿಗೆ ಹೋಲಿಸಿದರೆ ಮಹಿಳೆಯ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ನಾಜೂಕಾಗಿರುತ್ತವೆ. ಬಳೆಗಳನ್ನು ಧರಿಸುವುದರಿಂದ ಮೂಳೆಗಳಿಗೆ ಶಕ್ತಿಯು ಒದಗುತ್ತದೆ ಮತ್ತು ಅದು ಮಹಿಳೆಯರ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಮಹಿಳೆಯು ಬೆಳೆಯುತ್ತಾ ಹೋದಂತೆ, ಅವರು ಮೂಳೆ ಸಂಬಂಧಿತ ರೋಗಳಿಗೆ ಒಳಗಾಗುತ್ತಾರೆ ಹಾಗೂ ಇಂತಹ ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಬಳೆಗಳು ಸಹಾಯ ಮಾಡುತ್ತವೆ.
ಗರ್ಭಿಣಿ ಮಹಿಳೆಗೆ ಸೀಮಂತ ಮಾಡಿ ಕೈತುಂಬಾ ಗಾಜಿನ ಬಳೆ ಇರಿಸುತ್ತಾರೆ. ಈ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ ಮಗು ತನ್ನ ತಾಯಿಯನ್ನು ಗುರುತಿಸಲು ಅವು ನೆರವಾಗುತ್ತವೆ. ಇನ್ನು ಲೋಹದ ಬಳೆ ಇಲ್ಲವೇ ಕಡಗವು ನಾವು ಧರಿಸಿರುವ ಬಟ್ಟೆಗಳಿಂದ ಉತ್ಪಾದನೆಯಾಗಬಹುದಾದ ಸ್ಟಾಟಿಕ್ ಎಲೆಕ್ಟ್ರಿಸಿಟಿ ಸುಲಭವಾಗಿ ಹೊರಹರಿಸಲು ನೆರವಾಗುತ್ತದೆ. ಕೈತುಂಬ ಬಳೆಗಳನ್ನು ಧರಿಸಿದ್ದರೆ, ಅದು ಸಣ್ಣ ಪುಟ್ಟ ಪೆಟ್ಟುಗಳಿಂದ ಕೈಗಳನ್ನು ರಕ್ಷಿಸುತ್ತದೆ.
ಒಂದಕ್ಕೊಂದು ತಾಗುವ ಮೂಲಕ ಬಳೆಗಳಿಂದ ಉಂಟಾಗುವ ಬಳೆಗಳ ಕಿಣಿಕಿಣಿ ಶಬ್ದವು ಋಣಾತ್ಮಕ ಕಂಪನಗಳನ್ನು ದೂರವಿರಿಸುತ್ತದೆ ಹಾಗೂ ಅನಪೇಕ್ಷಿತ ಶಕ್ತಿಯು ಹತ್ತಿರ ಸುಳಿಯದಂತೆ ನಿಮ್ಮ ಮನೆಯಿಂದ ದೂರವಿರುತ್ತದೆ. ನಿಮ್ಮ ಹಿರಿಯರು ನಂಬಿಕೆಯ ಪ್ರಕಾರ ಈ ರೀತಿ ಹೇಳುತ್ತಾರೆ, ಮನೆಯಲ್ಲಿ ಬಳೆಗಳ ಶಬ್ದವು ನಮ್ಮ ಪವಿತ್ರ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಸುಖಿಯಾಗಿರಿಸುತ್ತದೆ. ಬಳೆಗಳನ್ನು ಧರಿಸುವುದಕ್ಕೆ ಸಂಬಂಧಪಟ್ಟ ಅತ್ಯಂತ ಪುರಾತನ ಸಂಗತಿಯೊಂದು ಬಹಳ ಸ್ಪಷ್ಟವಾಗಿದೆ.
ಕೈಗಳಿಗೆ ಬಳೆ ಧರಿಸುವುದರಿಂದ ಕೈಗಳಿಗೆ ಬಲ ಬಂದಂಥಾಗುತ್ತದೆ. ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ನಾಡಿ ಮಿಡಿತದ ಚಟುವಟಿಕೆಗೆ ಅಗತ್ಯವಿರುವ ಶಕ್ತಿಯನ್ನು ಬಳೆಗಳು ಒದಗಿಸುತ್ತವೆ. ಸತತವಾದ ಘರ್ಷಣೆಯಿಂದ ಶರೀರದಲ್ಲಿ ರಕ್ತ ಪರಿಚಲನೆಯು ಸುಗಮಗೊಳ್ಳುತ್ತದೆ. ಗರ್ಭಕೋಶಕ್ಕೆ ರಭಸವಾದ ರಕ್ತ ಪರಿಚಲನೆ ಸಾಧ್ಯವಾಗುವುದರಿಂದ ಅಂಡಾಣು ಸಮಸ್ಯೆಯೂ ಬಗೆಹರಿಯುತ್ತದೆ. ನಾಡಿ ಮಿಡಿತವು ನಿಯಮಿತಗೊಳ್ಳುತ್ತದೆ. ನೋಡುವವರ ಕೆಟ್ಟ ದೃಷ್ಟಿಯನ್ನು ಬದಲಿಸುತ್ತದೆ.
ಇಂದಿನ ಜನಾಂಗ ಬಳೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಧರಿಸದೆ ನಿರ್ಲಕ್ಷಿಸುತ್ತಿರುವುದು ಮಾತ್ರ ಬೇಸರ ಹುಟ್ಟಿಸುತ್ತದೆ. ಬಳೆಗಳನ್ನು ಅವಗಣನೆ ಮಾಡುವುದರಿಂದ ನಮ್ಮ ಸಂಪ್ರದಾಯದ ಒಂದು ಅಂಗವನ್ನು ನಿರ್ಲಕ್ಷಿಸಿದಂತಾಗುತ್ತದೆ. ಸ್ತ್ರೀಯರ ಕೈಯಲ್ಲಿ ಬಳೆಗಳು ತುಂಬಾ ಬಿಗಿಯಾಗಿಯೂ, ಸಡಿಲವಾಗಿಯೂ ಇರಬಾರದು. ರಕ್ತನಾಳ ಹಾಗೂ ನರಗಳಿಗೆ ಮೃದು ಸ್ಪರ್ಶ ನೀಡುವಂತಿರಬೇಕು. ಮುಂಗೈ ನರಗಳಿಗೆ ಅಕ್ಯು ಪ್ರೌಶರ್ ಬೀಳುವುದರಿಂದ ಮೆದುಳಿಗೆ ಪ್ರಚೋದನೆ ಸಿಗುತ್ತದೆ. ಬಳೆ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಕೊಡುವಾಗ ಕೊಡುವ ಒಂದು ಪವಿತ್ರ ವಸ್ತು. ಅರಿಷಿಣ ಕುಂಕುಮ ಜೊತೆ ಬಳೆಗಳನ್ನು ಕೊಡುತ್ತಾರೆ.
ಒಟ್ಟಾರೆ ಮಹಿಳೆಯರ ಆರೋಗ್ಯ ಚೆನ್ನಾಗಿ ಇರಲು ಈ ಬಳೆಗಳು ಅತಿಮುಖ್ಯ ಪಾತ್ರ ನಿರ್ವಹಿಸುತ್ತವೆ.