ಆಸಾನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ. ಭಾರಿ ಮಳೆ, ಪ್ರವಾಹ ಉಂಟಾದಾಗ ಬಗೆ ಬಗೆಯ ವಸ್ತುಗಳನ್ನು ನದಿಗಳು ಕೊಚ್ಚಿಕೊಂಡು ತರುತ್ತವೆ. ಸಮುದ್ರಗಳು ಕೂಡ ಹಾಗೆಯೇ. ಆದರೆ ಅಸನಿ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿ ತೀರಕ್ಕೆ ಚಿನ್ನದ ಬಣ್ಣದ ರಥವೊಂದು ಕೊಚ್ಚಿಕೊಂಡು ಬಂದಿದೆ. ಇದು ಅಚ್ಚರಿ ಮೂಡಿಸಿದೆ. ಈ ರಥದ ಮೂಲ ಯಾವುದು ಎನ್ನುವ ಪತ್ತೆ ಪ್ರಯತ್ನ ನಡೆಯುತ್ತಿದೆ.

ಅಸನಿ ಚಂಡಮಾರುತದಿಂದ ತತ್ತರಿಸಿರುವ ಆಂಧ್ರಪ್ರದೇಶದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಳ್ಳಿ ಕರಾವಳಿ ತೀರದಲ್ಲಿ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದರೆ, ಅಧಿಕಾರಿಗಳು ರಥದ ಮೂಲ ಪತ್ತೆ ಹಚ್ಚಲು ತನಿಖೆ ಅರಂಭಿಸಿದ್ದಾರೆ.
ಚಿನ್ನದ ಬಣ್ಣದ ಲೇಪನವುಳ್ಳ ರಥವನ್ನು ಹೋಲುವ ರಚನೆಯು ಸಮುದ್ರದಲ್ಲಿ ತೇಲಿಬಂದಿದೆ.

ಭಾರಿ ಅಲೆ, ಗಾಳಿಯ ಹೊಡೆತದ ನಡುವೆಯೂ ಈ ರಥ ಬಹುತೇಕ ಗಟ್ಟಿಮುಟ್ಟಾಗಿರುವುದು ವಿಶೇಷ. ಈ ರಥವನ್ನು ಮ್ಯಾನ್ಮಾರ್, ಮಲೇಷ್ಯಾ, ಥಾಯ್ಲೆಂಡ್, ಜಪಾನ್, ಕಾಂಬೋಡಿಯಾ ಅಥವಾ ಇಂಡೋನೇಷ್ಯಾದಲ್ಲಿ ಕರಾವಳಿ ತೀರದಲ್ಲಿ ಇರಿಸಿದ್ದಿರಬಹುದು ಎಂದು ಊಹಿಸಲಾಗಿದೆ. ಅಸನಿ ಚಂಡಮಾರುತದ ಪ್ರಭಾವದಿಂದ ಅದು ಆಂಧ್ರದ ಕರಾವಳಿ ಕಡೆಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ಕಡಲ ತೀರದಲ್ಲಿ ರಥವನ್ನು ಕಂಡು ಅಚ್ಚರಿಗೊಳಗಾದ ಸ್ಥಳೀಯರು, ಅದರ ಬಳಿ ತೆರಳಿ ಹಗ್ಗಗಳನ್ನು ಕಟ್ಟಿ, ಅದನ್ನು ತೀರಕ್ಕೆ ಎಳೆದು ತಂದಿದ್ದಾರೆ.

ರಥದ ಮೇಲೆ 16-01-2022 ಎಂದು ದಿನಾಂಕ ಕೆತ್ತಲಾಗಿದೆ. ಇದು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇರುವ ಬೌದ್ಧ ವಿಹಾರಗಳ ಆಕಾರವನ್ನು ಹೋಲುತ್ತದೆ. ಚಂಡಮಾರುತದ ಪರಿಣಾಮ ಉಂಟಾದ ಬೃಹತ್ ಅಲೆಗಳಿಂದ ಈ ರಥ ಕರಾವಳಿಯ ಕಡೆಗೆ ತೇಲಿ ಬಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದಾರೆ.

ಅಂಡಮಾನ್ ಸಮುದ್ರದಲ್ಲಿ ಮೊದಲ ವಾಯುಭಾರ ಕುಸಿತ ಉಂಟಾಗಿತ್ತು. ಅಂಡಮಾನ್ ಸಮುದ್ರಕ್ಕೆ ಸಮೀಪ ಇರುವ ದೇಶದ ಕರಾವಳಿಯಲ್ಲಿ ಇರಿಸಿದ್ದ ರಥವನ್ನು ಬೃಹತ್ ಅಲೆಗಳು ಎಳೆದು ತಂದಿರಬಹುದು. ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ ಅಥವಾ ಇಂಡೋನೇಷ್ಯಾದಿಂದ ಈ ರಥ ಬಂದಿರಬಹುದು ಎಂದು ವರದಿಗಳು ತಿಳಿಸಿವೆ.

ಆದರೆ, ಸಂಟಬೊಮ್ಮಳಿ ತಹಶೀಲ್ದಾರ್ ಅವರು ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಯಾವುದೇ ವಿದೇಶ ನೆಲದಿಂದ ಬಂದಿರಲಾರದು ಎಂದು ಜೆ ಚಲಮಯ್ಯ ಹೇಳಿದ್ದಾರೆ. ಭಾರತದ ಕರಾವಳಿಯಲ್ಲಿಯೇ ಎಲ್ಲೋ ಸಿನಿಮಾ ಚಿತ್ರೀಕರಣಕ್ಕೆ ಈ ರಥವನ್ನು ಬಳಸಿರಬಹುದು. ಬೃಹತ್ ಪ್ರಮಾಣದ ಅಲೆಗಳು ಅದನ್ನು ಶ್ರೀಕಾಕುಳಂ ತೀರಕ್ಕೆ ಹೊತ್ತು ತಂದಿರಬಹುದು ಎಂದು ತಿಳಿಸಿದ್ದಾರೆ.

ಈ ರಥವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಸನಿ ಚಂಡಮಾರುತ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಆಂಧ್ರಪ್ರದೇಶದಲ್ಲಿ ರೆಡ್​ ಅಲರ್ಟ್​​ ಘೋಷಣೆ ಮಾಡಲಾಗಿದ್ದು, ಎಸ್​​ಡಿಆರ್​ಎಫ್​ ಮತ್ತು ಎನ್​​ಡಿಆರ್​​ಎಫ್​​​ ತಂಡ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿವೆ.

Leave a Reply

Your email address will not be published. Required fields are marked *