ಭಾರತೀಯ ರೈಲ್ವೆ ಇದು ಒಂದು ದಿನಕ್ಕೆ ಲಕ್ಷಾಂತರ ಜನರನ್ನು ತಮ್ಮ ತಮ್ಮ ಊರುಗಳಿಗೆ ತಲುಪ್ಪಿಸುತ್ತದೆ. ರೈಲ್ವೆ ಗಳು ದೂರದ ಪ್ರಯಾಣಕ್ಕೆ ಇರುವ ಉತ್ತಮ ಸಾರಿಗೆ ವ್ಯವಸ್ಥೆ ಆಗಿದೆ. ನಾವೆಲ್ಲ ಒಂದಲ್ಲ ಒಂದು ಬಾರಿ ರೈಲ್ವೆಯಲ್ಲಿ ಪ್ರಯಾಣ ಮಾಡಿಯೇ ಇರುತ್ತೇವೆ. ಆದರೆ ಎಂದಾದರೂ ಆ ರೈಲಿನ ಇಂಜಿನ್ ಎಷ್ಟು ಮೈಲೇಜ್ ಕೊಡುತ್ತದೆ ಎಂಬುದರ ಬಗ್ಗೆ ಯೋಚಿಸಿರುವುದಿಲ್ಲ. ಹಾಗಾಗಿ ಈ ಲೇಖನದ ಮೂಲಕ ಒಂದು ರೈಲಿನ ಇಂಜಿನ್ ಎಷ್ಟು ಮೈಲೇಜ್ ಕೊಡುತ್ತದೆ, ಅದರ ಬೆಲೆ ಹಾಗೂ ತೂಕ ಎಷ್ಟು ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಭಾರತೀಯ ರೈಲ್ವೇಯು ಈಗ ಎಲ್ಲಾ ರೈಲ್ವೇ ಮಾರ್ಗಗಳನ್ನೂ ಎಲೆಕ್ಟ್ರಿಕಲ್ ಮಾರ್ಗವನ್ನಾಗಿ ಮಾಡುತ್ತಿದೆ. ಇದರಿಂದಾಗಿ ಭಾರತೀಯ ರೈಲ್ವೇಗೆ ಡಿಸೈಲ್ ಖರ್ಚಿನಿಂದ ಆಗುವ ಹೆಚ್ಚಿನ ಖರ್ಚನ್ನು ಉಳಿಸಬಹುದು. ಇನ್ನು ಯಾವ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಮಾರ್ಗಗಳು ಆಗದೇ ಇದ್ದ ಜಾಗಗಳಲ್ಲಿ ಅಲ್ಲಿ ಡಿಸೈಲ್ ಇಂಜಿನ್ ಟ್ರೈನ್ ಗಳು ಸಂಚಾರ ಮಾಡುತ್ತಿವೆ. ರೈಲ್ವೆಯ ಇಂಜಿನ್ ಕೆಟಗರಿಯನ್ನ ಮೂರು ವಿಧಗಳಲ್ಲಿ ವಿಭಾಗಿಸಲಾಗಿದೆ. ಅದರಲ್ಲಿ ಮೊದಲನೆಯದು 5000 ಲೀಟರ್, ಎರಡನೆಯದು 5,500 ಲೀಟರ್ ಮತ್ತು ಮೂರನೆಯದು 6,000 ಲೀಟರ್.
ಇನ್ನು ಈ ಡಿಸೈಲ್ ಇಂಜಿನ್ ನ ಮೈಲೇಜ್ ಇದು ಅದರ ಲೋಡ್ ನ ಮೇಲೆ ನಿರ್ಧರಿತ ಆಗುತ್ತದೆ. ಈ ಟ್ರೈನ್ ಏನಾದರೂ 12 ಭೋಗಿಗಳನ್ನು ಹೊಂದಿರುವ ಜನರನ್ನು ಕೊಂಡೊಯ್ಯುವ ಟ್ರೈನ್ ಆಗಿದ್ದರೆ ಅದರ ಎವರೇಜ್ ಮೈಲೇಜ್ 6 ಲೀಟರ್ ಡಿಸೈಲ್ ಗೆ 1 ಕಿಲೋಮೀಟರ್ ದೂರ ಚಲಿಸುತ್ತದೆ. ಇದು ಪ್ರತೀ ಸ್ಟೇಶನ್ ನಲ್ಲಿ ನಿಂತು ಬ್ರೇಕ್ ಮತ್ತು ಎಕ್ಲೇರೇಷನ್ ಕಾರಣದಿಂದ ಇದಕ್ಕೆ ಹೆಚ್ಚಿನ ಡಿಸೈಲ್ ಅವಶ್ಯಕತೆ ಇರುತ್ತದೆ. ಅದೇ 12 ಭೋಗಿಗಳನ್ನು ಹೊಂದಿರುವ ಎಕ್ಸ್ಪ್ರೆಸ್ ಟ್ರೈನ್ ಆಗಿದ್ದಲ್ಲಿ 4.5 ಲೀಟರ್ ಡಿಸೈಲ್ ನಲ್ಲಿ 1 ಕಿಲೋಮೀಟರ್ ದೂರ ಚಲಿಸುತ್ತದೆ.
ಡಿಸೈಲ್ ಇಂಜಿನ್ ಅನ್ನು ಎಂದಿಗೂ ಬಂದ್ ಮಾಡಿ ಇಡಲ್ಲ. ಇದನ್ನ ಬಂದ್ ಮಾಡಿದಲ್ಲಿ ಇದರ ಬ್ಯಾಟರಿಗಳು ಮತ್ತೆ ಚಾರ್ಜ್ ಆಗಿ ಏರ್ ಕಂಪ್ರೇಸ್ಸರ್ ನಿಂದಾಗಿ ಅದನ್ನ ಮತ್ತೆ ಪುನಃ ಸ್ಟಾರ್ಟ್ ಮಾಡುವಾಗ ಇಂಜಿನ್ ಎರಡು ಪಟ್ಟು ಡಿಸೈಲ್ ಅನ್ನು ತೆಗೆದುಕೊಳ್ಳುತ್ತದೆ. ಇಂಡಿಯನ್ ಲೋಕೋಮೋಟಿವ್ ಡಿಸೈಲ್ ಇಂಜಿನ್ ನ ತೂಕ 1,12,800 ಕೆಜಿ ಆಗಿರುತ್ತದೆ. ಒಂದು ಲೋಕೋಮೋಟಿವ್ ಡಿಸೈಲ್ ಇಂಜಿನ್ ನ ಬೆಲೆ 9,000 HP ಲೋಕೋಮೋಟಿವ್ ಡಿಸೈಲ್ ಇಂಜಿನ್ ಬೆಲೆ 20ಕೋಟಿ ಆಗಿರುತ್ತದೆ. ಅದೇ 4,500HP ಲೋಕೋಮೋಟಿವ್ ಡಿಸೈಲ್ ಇಂಜಿನ್ ಬೆಲೆ 13 ಕೋಟಿ ಆಗಿರುತ್ತದೆ. ಇವು ನಮ್ಮ ಭಾರತೀಯ ರೈಲ್ವೆ ಯ ಇಂಜಿನ್ ನ್ ಬಗೆಗಿನ ಮಾಹಿತಿಗಳು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಷೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಶುಭವಾಗಲಿ