ಆಧಾರ್ ಕಾರ್ಡ್ ನಲ್ಲಿ ಹೆಸರು ಹಾಗೂ ವಿಳಾಸ ಬದಲಾಯಿಸುವ ಸುಲಭ ವಿಧಾನ

0 21

ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ಹುಟ್ಟಿದ ದಿನಾಂಕ, ಅಡ್ರೆಸ್, ಮೊಬೈಲ್ ನಂಬರ್ ಇವುಗಳನ್ನ ಹೇಗೆ ಬದಲಾವಣೆ ಮಾಡಬಹುದು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಹಳಷ್ಟು ಜನರು ತಮ್ಮ ಆಧಾರ್ ಕಾರ್ಡ್ ಗೆ ತಮ್ಮ ಮೊಬೈಲ್ ನಂಬರ್ ಅನ್ನು ಸೇರಿಸಿರುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಏನಾದರೂ ಮಾಡಬೇಕಿದ್ದಲ್ಲಿ ಅದು ಸಾಧ್ಯ ಆಗುವುದಿಲ್ಲ. ಯಾವುದೇ ಒಂದು ಕೆಲಸಕ್ಕೂ ಈಗ ಆಧಾರ್ ಕಾರ್ಡ್ ಅವಶ್ಯಕತೆ ಇದ್ದು , ಇದರ ಓಟಿಪಿ ನಮ್ಮ ಮೊಬೈಲ್ ನಂಬರ್ ಗೆ ಬರುತ್ತದೆ. ಆದರೆ ನಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಜೊತೆ ಸೇರಿರದೆ ಇದ್ದಾಗ ಯಾವುದೇ ಓಟಿಪಿ ಬರಲು ಸಾಧ್ಯ ಇಲ್ಲ ಹಾಗಾಗಿ ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ಜೋಡಣೆ ಅಗತ್ಯ ಇರುತ್ತದೆ. ಈ ವೆಬ್ಸೈಟ್ ಲಿಂಕ್ ಬಳಸಿಕೊಂಡು ನಾವು ಆಧಾರ್ ಕಾರ್ಡ್ ಗೆ ನಮ್ಮ ಫೋನ್ ನಂಬರ್ ಜೋಡಿಸಬಹುದು.

ವೆಬ್ಸೈಟ್ ಲಿಂಕ್ https://ask.uidai.gov. in/ ಈ ಲಿಂಕ್ ಬಳಸಿ ಒಂದು ಪೇಜ್ ಓಪನ್ ಆದ ನಂತರ ಎಂಟರ್ ಯುವರ್ ಮೊಬೈಲ್ ನಂಬರ್ ಎಂದು ಇರುವಲ್ಲಿ ಆಧಾರ್ ಕಾರ್ಡ್ ಗೆ ಯಾವ ನಂಬರ್ ಜೋಡಿಸಬೇಕು ಅಂದುಕೊಂಡಿರುತ್ತೀರೋ ಆ ನಂಬರ್ ಅನ್ನು ಅಲ್ಲಿ ಟೈಪ್ ಮಾಡಬೇಕು. ನಂತರ ಒಂದು ಕ್ಯಾಪ್ಚಾ ಇರತ್ತೆ ಅದನ್ನೇ ನೋಡಿಕೊಂಡು ಅಲ್ಲಿ ಇರುವ ಹಾಗೆಯೇ ಕೆಳಗೆ ಕೊಟ್ಟಿರುವ ಬಾಕ್ಸ್ ನಲ್ಲೂ ಹಾಗೆಯೇ ಸರಿಯಾಗಿ ಟೈಪ್ ಮಾಡಬೇಕು. ನಂತರ ಸೆಂಡ್ ಓಟಿಪಿ ಅನ್ನೋ ಆಯ್ಕೆ ಸಿಗುತ್ತೆ ಅಲ್ಲಿ ಕ್ಲಿಕ್ ಮಾಡಿದರೆ ನೀವು ಕೊಟ್ಟಿರುವ ಮೊಬೈಲ್ ನಂಬರ್ ಗೆ ಆರು ಸಂಖ್ಯೆಯ ಒಂದು ಓಟಿಪಿ ಬರತ್ತೆ. ಆ ಓಟಿಪಿ ನಂಬರ್ ಅನ್ನು ಬಲಗಡೆ ಭಾಗದಲ್ಲಿ ಕಾಣುವ ಎಂಟರ್ ಓಟಿಪಿ ಎಂದು ಇರುವ ಬಾಕ್ಸ್ ನಲ್ಲಿ ಟೈಪ್ ಮಾಡಿ ಸಬ್ಮಿಟ್ ಓಟಿಪಿ ಅಂಡ್ ಪ್ರೊಸೀಡ್ ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಂದಿನ ಪೇಜ್ ಕಾಣಿಸಿಕೊಳ್ಳುತ್ತದೆ.

ಎರಡನೇ ಪೇಜ್ ಅಲ್ಲಿ ಮತ್ತೆ ಎರಡು ಆಯ್ಕೆಗಳು ಕಾಣಿಸುತ್ತವೆ. ನ್ಯೂ ಏನರಲಾಮೆಂಟ್ ಹಾಗೂ ಅಪ್ಡೇಟ್ ಆಧಾರ್ ಎನ್ನುವ ಆಯ್ಕೆ ಕಾಣುತ್ತದೆ. ಹೊಸದಾಗಿ ಮಾಡದೆ ಈಗಾಗಲೇ ಮಾಡಿಸಿರುವ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕಾರಣದಿಂದ ಅಪ್ಡೇಟ್ ಆಧಾರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮತ್ತೆ ಇನ್ನೊಂದು ಪೇಜ್ ಓಪನ್ ಆದಾಗ ಅಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ನಂಬರ್ ಅನ್ನು ಸರಿಯಾಗಿ ಎಂಟರ್ ಮಾಡಬೇಕು. ಅದರ ನಂತರ ನಿಮಗೆ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಏನೇನು ಬದಲಾವಣೆ ಮಾಡಬೇಕು ಇಮೇಲ್ ಅಡ್ರೆಸ್ , ಫೋನ್ ನಂಬರ್ , ಅಡ್ರೆಸ್ ಹೀಗೆ ಏನೆಲ್ಲ ಬದಲಾವಣೆ ಮಾಡಬೇಕಾಗಿರುತ್ತೋ ಅವನ್ನೆಲ್ಲ ಸೆಲೆಕ್ಟ್ ಮಾಡಿ ನೆಕ್ಸ್ಟ್ ಎನ್ನುವಲ್ಲಿ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಎಲ್ಲವನ್ನೂ ಸರಿಯಾಗಿ ಟೈಪ್ ಮಾಡಿ ಸೇವ್ ಅಂಡ್ ಪ್ರೋಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೆ ಇನ್ನೊಂದು ಪೇಜ್ ಓಪನ್ ಆಗತ್ತೆ.

ಈ ಒಂದು ಪೇಜ್ ನಲ್ಲಿ ನಾವು ಅಪ್ಡೇಟ್ ಕೊಟ್ಟಂತಹ ಎಲ್ಲಾ ಡೀಟೈಲ್ಸ್ ಗಳು ಕಾಣಿಸುತ್ತವೆ. ನಂತರ ಕಾಣುವಂತಹ ಎಲ್ಲಾ ಅಂಶಗಳನ್ನು ಸರಿಯಾಗಿ ಓದಿಕೊಂಡು ಅಲ್ಲಿ ಒಂದು ರೈಟ್ ಮಾರ್ಕ್ ಕೊಟ್ಟು ನಂತರ ಸಬ್ಮಿಟ್ ಕೊಡಬೇಕು. ಸಬ್ಮಿಟ್ ಕೊಟ್ಟ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ನೀವು ಜೋಡಣೆ ಮಾಡಬೇಕು ಅಂದುಕೊಂಡ ಮೊಬೈಲ್ ನಂಬರ್ ಇಮೈಲ್ ಐಡಿ ಎಲ್ಲವೂ ಅಪ್ಡೇಟ್ ಆಗಿರುತ್ತೆ ಹಾಗೆ ನಿಮ್ಮ ಐಡಿ ಸಿಗತ್ತೆ ಅದನ್ನ ನೋಟ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಬುಕ್ ಅಪಾಯ್ಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ನಿಮ್ಮ ಉರು, ಊರಿನ ಪಿನ್ ಕೋಡ್ ಎಂಟರ್ ಮಾಡಿ ನಿಮ್ಮ ಊರಿನ ಆಧಾರ್ ಏನರಲಾಮೆಂಟ್ ಸೆಂಟರ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಊರಿನ ಹತ್ತಿರದ ಎಲ್ಲಾ ಆಧಾರ್ ಸೆಂಟರ್ ಗಳನ್ನು ತೋರಿಸತ್ತೆ. ಅಲ್ಲಿ ನಿಮಗೆ ಹತ್ತಿರದ ಆಧಾರ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಂಡು ಬುಕ್ ಅಪಾಯ್ಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದಿಷ್ಟು ದಿನಾಂಕಗಳನ್ನ ತೋರಿಸತ್ತೆ. ನಿಮಗೆ ಅನುಕೂಲ ಆಗುವ ದಿನವನ್ನು ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ . ನಂತರ ನೀವು ನೀಡಿದ ಡೇಟ್ ಎಲ್ಲವನ್ನು ಕನ್ಫರ್ಮ್ ಕೊಟ್ಟು ನಂತರ ಬರುವ ಪೇಜ್ ಅನ್ನು ಕಾಪಿ ತೆಗೆಸಿ ಅಲ್ಲಿ ಕೇಳಿರುವಂತಹ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

Leave A Reply

Your email address will not be published.