ಜಮೀನು ಸರ್ವೆ ಮಾಡುವುದರಿಂದ ಜಮೀನಿನ ಬಗ್ಗೆ ನಿಖರವಾದ ಅಂಕಿ ಅಂಶಗಳು ಸಿಗುತ್ತದೆ ಕೆಲವೊಂದು ಬಾರಿ ಕುಟುಂಬದ ಹಲವಾರು ಕಾರಣಗಳಿಂದ ಜನರು ಜಮೀನನ್ನು ಭೂ ಮಾಪನ ಮಾಡುತ್ತಾರೆ ಜಮೀನು ಸರ್ವೆ ಮಾಡುವಾಗ ಕರ್ನಾಟಕ ಸರ್ಕಾರದ ಭೂ ಮಾಪನ ಇಲಾಖೆಯಿಂದ ಸರ್ಕಾರದ ನಿಯಮದಂತೆ ಪರಭಾರೆ ಮಾಡುವಾಗ ಸರ್ವೆ ಮಾಡಬೇಕಾಗುತ್ತದೆ ಜಮೀನನ್ನು ಕರ್ನಾಟಕ ರಾಜ್ಯದಲ್ಲಿ ಎರಡು ರೀತಿಯಲ್ಲಿ ಅಳತೆ ಮಾಡಲಾಗುತ್ತದೆ

ಚೈನ ಅಥವಾ ಸರಪಳಿ ಸಹಾಯದಿಂದ ಜಮೀನು ಅಳೆಯುತ್ತಾರೆ ಹಾಗೆಯೇ ಪ್ಲೈನ ಟೇಬಲ್ ವಿಧಾನದ ಮೂಲಕ ಭೂ ಮಾಪನ ಮಾಡಲಾಗುತ್ತದೆ ಆದರೆ ಈ ಎರಡು ಪದ್ಧತಿಯಲ್ಲಿ ಭೂ ಮಾಲೀಕರು ಮಾಪನ ಮಾಡುವಾಗ ಇರಲೇ ಬೇಕಾಗುತ್ತದೆ ಸರ್ಕಾರಿ ಭೂ ಮಾಪಕರಿಂದಲೇ ಜಮೀನು ಅಳತೆ ಮಾಡಬೇಕು ಇದರಿಂದ ಅಧಿಕೃತ ಮಾಹಿತಿ ದೊರಕುವುದು ಅಲ್ಲದೆ ಕಾನೂನಿನ ಮಾನ್ಯತೆ ಕೂಡ ಇರುತ್ತದೆ ನಾವು ಈ ಲೇಖನದ ಮೂಲಕ ಜಮೀನಿನ ಸರ್ವೆ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಜಮೀನು ಸರ್ವೆ ಮಾಡುವುದು ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಕುಟುಂಬದಲ್ಲಿ ಹಲವಾರು ಕಾರಣಗಳಿಂದ ಜನರು ಜಮೀನು ಮಾಡುವಾಗ ಹಾಗೂ ಪೋಡಿ ದ ಮಾಡಬೇಕಾಗುತ್ತದೆ ಜಮೀನು ಅಳತೆ ಮಾಡುವ ಸರ್ಕಾರದ ಇಲಾಖೆಯೇ ಭೂಮಾಪನ ಇಲಾಖೆಯಾಗಿದೆ ಜಮೀನನ್ನು ಭೂ ಮಾಪಕರರು ಒಂದು ಅಳತೆ ಮಾಡಿ ವರದಿ ನೀಡುವ ವಿಧಾನವೇ ಭೂ ಮಾಪನ ವಾಗಿದೆ

ಜಮೀನು ಹದುಬಸ್ತಿ ನಲ್ಲಿಡಲು ಭೂ ಮಾಪನ ಮಾಡಲಾಗುತ್ತದೆ ಜಮೀನು ಪೋಡಿ ಮಾಡುವ ಸಂದರ್ಭದಲ್ಲಿ ಅಂದರೆ ಕುಟುಂಬದಲ್ಲಿ ಅಣ್ಣ ತಮ್ಮಂದಿರು ಜಗಳ ಮಾಡುವಾಗ ಜಮೀನಿನ ಸರ್ವೆ ಮಾಡುತ್ತಾರೆ ಸರ್ಕಾರದ ನಿಯಮದಂತೆ ಪರಭಾರೆ ಮಾಡುವಾಗ ಸರ್ವೆ ಮಾಡಬೇಕಾಗುತ್ತದೆ ಹಾಗಾಗಿ ಕ್ರಯ ವಿಭಾಗ ಮತ್ತು ದಾನ ಮಾಡಲು ಸರ್ವೆ ಮಾಡಬೇಕಾಗುತ್ತದೆ.

ಜಮೀನನ್ನು ಕರ್ನಾಟಕ ರಾಜ್ಯದಲ್ಲಿ ಎರಡು ರೀತಿಯಲ್ಲಿ ಅಳತೆ ಮಾಡಲಾಗುತ್ತದೆ ಚೈನ ಅಥವಾ ಸರಪಳಿ ಸಹಾಯದಿಂದ ಜಮೀನು ಅಳೆಯುತ್ತಾರೆ ಹಾಗೆಯೇ ಪ್ಲೈನ್ ಟೇಬಲ್ ಸಹಾಯದಿಂದ ಭೂ ಮಾಪನ ಮಾಡುತ್ತಾರೆ ಗುಣಮಟ್ಟದ ಕಬ್ಬಿಣದಿಂದ ತಯಾರಿಸಿದ ಮೂವತ್ತು ಮೂರು ಅಡಿ ಮೆಟ್ರಿಕ್ ಸರಪಳಿ ತಯಾರಿಸಿ ಒಂದಕ್ಕೊಂದು ಕೊಂಡಿಗಳನ್ನು ಕೂಡಿಸುತ್ತಾರೆ

ಹಾಗೆಯೇ ಸರಪಳಿಯ ಮಧ್ಯದಲ್ಲಿ ಹಿತ್ತಾಳೆ ಕೊಂಡಿ ಇರುತ್ತದೆ ಇದನ್ನು ಎಂಟಾಣೆ ಎಂದು ಕರೆಯಲಾಗುತ್ತದೆ ಹೊಲದ ಟಿಪ್ಪಣಿ ಸಹಾಯದಿಂದ ನಾಲ್ಕು ಗಡಿಗಳನ್ನು ಗುರುತಿಸಿ ಕಬ್ಬಿಣದ ಮೊಳೆಗಳನ್ನು ಹೊಡೆದು ಸರಪಳಿಯಿಂದ ಅಳತೆ ಮಾಡುತ್ತಾರೆ ಹೀಗೆ ಅಳತೆ ಮಾಡುತ್ತಾ ಟಿಪ್ಪಣಿ ಜೊತೆ ತಾಳೆ ಹಾಕಿ ಭೂ ಮಾಪನ ಮಾಡುತ್ತಾರೆ ಭೂ ಮಾಪನ ಮಾಡಲು ಬಂದಾಗ ಸ್ಥಳ ದ ಮಾಲೀಕರು ಇರುವುದು ಕಡ್ಡಾಯವಾಗಿದೆ ಸಾಧ್ಯವಾದರೆ ಅಕ್ಕ ಪಕ್ಕದವರು ಇದ್ದರೆ ಉತ್ತಮವಾಗಿ ಇರುತ್ತದೆ .

ಕರ್ನಾಟಕದ ಬಹು ಭಾಗಗಳಲ್ಲಿ ಚೈನ್ ಸರಪಳಿ ವಿಧಾನದಿಂದ ನಿಖರ ಮಾಹಿತಿ ಸಿಗುತ್ತದೆ ಪರವಾನಗಿ ಭೂ ಮಾಪಕರು ಮತ್ತು ಸರ್ಕಾರಿ ಭೂ ಮಾಪಕರಿಂದಲೇ ಜಮೀನು ಅಳತೆ ಮಾಡಬೇಕು ಇದರಿಂದ ಅಧಿಕೃತ ಮಾಹಿತಿ ದೊರಕುವುದು ಅಲ್ಲದೆ ಕಾನೂನಿನ ಮಾನ್ಯತೆ ಕೂಡ ಇರುತ್ತದೆ ಮುವತ್ಠ್ಮರು ಅಡಿಗಳ ಸರಪಳಿಯಲ್ಲಿ ಹಿಡಿಕೆಯು ಒಳಗೊಂಡಿರುತ್ತದೆ ಪ್ಲೈನ್ ಟೇಬಲ್ ಅಳತೆ ವಿಧಾನದಲ್ಲಿ ಸಮತಟ್ಟಾದ ಹೊಲದಲ್ಲಿ ಟೇಬಲ್ ಅನ್ನು ಇಟ್ಟು ಅದರ ಮೇಲೆ ಬಿಳಿ ಹಾಳೆ ಇಟ್ಟು ಟೆಲಿಸ್ಕೋಪ್ ಕ್ಯಾಲ್ಕುಲೇಟರ್ ಕೈವಾರದ ಮೂಲಕ ಅಳತೆ ಮಾಡಲಾಗುತ್ತದೆ

ಒಂದೇ ಜಾಗದಲ್ಲಿ ನಿಂತು ಟೆಲಿಸ್ಕೋಪ್ ಸಹಾಯದಿಂದ ನಕ್ಷೆ ರಚಿಸುವುದು ಪ್ಲೇನ್ ಟೇಬಲ್ ಮಾಪನವಾಗಿದೆ ಪ್ಲೈನ್ ಟೇಬಲ್ ಅಲ್ಲಿ ಕೂಡ ಹೊಲದ ಟಿಪ್ಪಣಿಯಲ್ಲಿ ಇದ್ದಂತೆ ಹೊಲದ ನಾಲ್ಕು ಭಾಗ ಗುರುತಿಸಿ ಅಲ್ಲಿ ಕಬ್ಬಿಣದ ಮೊಳೆಗಳನ್ನು ಹೊಡೆದು ಅಳತೆ ಮಾಡುತ್ತಾರೆ ಜಮೀನಿನ ಮಾಲೀಕರು ಸದರಿ ಸ್ಥಳದಲ್ಲಿ ಇರುವುದು ಕಡ್ಡಾಯವಾಗಿ ಇರುತ್ತದೆ ಕರ್ನಾಟಕದ ಬೆಳಗಾವಿ ವಿಭಾಗದಲ್ಲಿ ಮಾತ್ರ ಈ ಪದ್ಧತಿ ಅನುಸರಿಸುತ್ತಿದ್ದರು ಸ್ವಲ್ಪ ನಿಖರತೆ ಖಮ್ಮಿ ಯಾಗಿ ಇರುತ್ತದೆ ಎಲ್ಲವೂ ಕುಳಿತಲ್ಲೇ ಮಾಡಬೇಕಾಗಿರುವುದರಿಂದ ಚೈನ್ ಸರಪಳಿ ಬೇಕಾಗಿರುವುದಿಲ್ಲ ಈ ಮೂಲಕ ಜಮೀನಿನ ಕುರಿತು ಭೂ ನಕ್ಷೆಯನ್ನು ಎರಡು ವಿಧಾನದ ಮೂಲಕ ತಿಳಿದುಕೊಳ್ಳಬಹುದು.

Leave a Reply

Your email address will not be published. Required fields are marked *