ನಿಮ್ಮ ಊರಿನ ಗ್ರಾಮಠಾಣ ನಕ್ಷೆಯನ್ನು ಪಡೆಯೋದು ಹೇಗೆ, ಇದರಿಂದ ಆಗುವ ಉಪಯೋಗ ನೋಡಿ

0 54

ಹಲವಾರು ಜನರಿಗೆ ಗ್ರಾಮಠಾಣಾ ನಕ್ಷೆಯ ಬಗ್ಗೆ ತಿಳಿದು ಇರುವುದಿಲ್ಲ ಹಾಗೆಯೇ ಅದರ ಮಾಹಿತಿ ಹಾಗೂ ಒಳಗೊಂಡ ವಿಷಯಗಳ ಬಗ್ಗೆ ಸರಿಯಾಗಿ ತಿಳಿದು ಇರುವುದಿಲ್ಲ ಗ್ರಾಮಠಾಣಾ ನಕ್ಷೆಯಿಂದ ಹಲವಾರು ಮಾಹಿತಿಯನ್ನು ಪಡೆದುಕೊಳ್ಳಬಹುದು ಸಾರ್ವಜನಿಕರಿಗೆ ಇದರ ಅವಶ್ಯಕತೆ ಸಾಕಷ್ಟು ಇರುತ್ತದೆ ಗ್ರಾಮಠಾಣಾ ನಕ್ಷೆಯಿಂದ ಇಡಿ ಗ್ರಾಮದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ

ಗ್ರಾಮದ ವಿಸ್ತೀರ್ಣ ಹಾಗೂ ರಸ್ತೆ ಸಾರ್ವಜನಿಕ ಕಟ್ಟಡಗಳ ಎಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ ಪ್ರಭಾವಿಗಳು ಸಾರ್ವಜಿಕರ ಪ್ರದೇಶವನ್ನು ಒತ್ತುವರಿ ಮಾಡಿದ್ದರೆ ಅಂತಹ ಪ್ರದೇಶವನ್ನು ಗ್ರಾಮಠಾಣಾ ನಕ್ಷೆಯ ಮೂಲಕ ತಿಳಿಯಬಹುದು. ನಾವು ಈ ಲೇಖನದ ಮೂಲಕ ಗ್ರಾಮಠಾಣಾ ನಕ್ಷೆಯು ಒಳಗೊಂಡ ವಿಷಯ ಹಾಗೂ ಗ್ರಾಮಠಾಣಾ ನಕ್ಷೆಯನ್ನು ಪಡೆದುಕೊಳ್ಳುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳಲ್ಲಿ ಗ್ರಾಮಠಾಣಾ ನಕ್ಷೆಯು ಒಂದು ಗ್ರಾಮಠಾಣಾ ನಕ್ಷೆಯಿಂದ ಹಲವಾರು ಮಾಹಿತಿಯನ್ನು ಪಡೆದುಕೊಳ್ಳಬಹುದು ಸಾರ್ವಜನಿಕರಿಗೆ ಇದರ ಅವಶ್ಯಕತೆ ಸಾಕಷ್ಟು ಇರುತ್ತದೆ ಹಲವಾರು ಕುಟುಂಬಗಳು ತಲತಲಾಂತರದಿಂದ ಒಂದೇ ಗ್ರಾಮದಲ್ಲಿ ವಾಸಿಸುತ್ತಿರುತ್ತದೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಂಪೂರ್ಣ ಗ್ರಾಮ ಸರ್ವೆ ಬಂದಾಗ ಕೆಲವು ಪ್ರದೇಶಗಳನ್ನು ಕೈ ಬಿಡುತ್ತಾರೆ

ಕೈ ಬಿಟ್ಟಿರುವ ಪ್ರದೇಶವನ್ನು ಪ್ರತ್ಯೇಕವಾಗಿ ಅಳತೆ ಮಾಡಿ ಪ್ರತ್ಯೇಕ ಗಡಿ ಗುರುತಿಸಿ ರಚಿಸುವ ನಕ್ಷೆಗೆ ಗ್ರಾಮಠಾಣಾ ನಕ್ಷೆ ಎಂದು ಕರೆಯುತ್ತಾರೆ ಸದರಿ ಪ್ರದೇಶದ ಜಾಗವು ಕಂದಾಯ ಇಲಾಖೆಯಲ್ಲಿ ಇರುವುದಿಲ್ಲ ಮತ್ತು ಆ ಜಾಗಕ್ಕೆ ಕಂದಾಯ ಕೂಡ ತೆಗೆದುಕೊಳ್ಳುವುದಿಲ್ಲ ಈ ಜಾಗಕ್ಕೆ ಸರ್ವೆ ನಂಬರ್ ಕೂಡ ಇರುವುದಿಲ್ಲ ಈ ಪ್ರದೇಶವು ಗ್ರಾಮೀಣ ಪಂಚಾಯತ್ ಗೆ ಸಂಭಂದಿಸಿದ ಪ್ರದೇಶವಾಗಿದೆ .

ಗ್ರಾಮಠಾಣಾ ನಕ್ಷೆಯಿಂದ ಇಡಿ ಗ್ರಾಮದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ ಗ್ರಾಮದ ವಿಸ್ತೀರ್ಣ ಹಾಗೂ ರಸ್ತೆ ಸಾರ್ವಜನಿಕ ಕಟ್ಟಡಗಳ ಎಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ ಪ್ರಭಾವಿಗಳು ಸಾರ್ವಜಿಕರ ಪ್ರದೇಶವನ್ನು ಒತ್ತುವರಿ ಮಾಡಿದ್ದರೆ ಅಂತಹ ಪ್ರದೇಶವನ್ನು ಗ್ರಾಮಠಾಣಾ ನಕ್ಷೆಯ ಮೂಲಕ ತಿಳಿಯಬಹುದು. ಮನೆ ಕಟ್ಟಡ ಪರವಾನಗಿ ಬೇಕಾದಲ್ಲಿ ಗ್ರಾಮ ಪಂಚಾಯತಿ ಗ್ರಾಮಠಾಣಾ ನಕ್ಷೆಯ ಮೂಲಕ ಸಾರ್ವಜನಿಕ ಪ್ರದೇಶದಲ್ಲಿ ಕಟ್ಟಡ ಕಟ್ಟಿರುವುದು ಅಥವಾ ಇಲ್ಲವೆಂದು ತಿಳಿಸುತ್ತದೆ

ಗ್ರಾಮಸ್ಥರಿಗೆ ತಮ್ಮ ತಮ್ಮ ಮನೆಗಳನ್ನು ಗುರುತಿಸಲು ಗ್ರಾಮಠಾಣಾ ನಕ್ಷೆಯ ಮೂಲಕ ತಿಳಿದುಕೊಳ್ಳಬಹುದು ಗ್ರಾಮದಿಂದ ತಮ್ಮ ತಮ್ಮ ಜಮೀನಿಗೆ ಹೋಗಲು ರಸ್ತೆಗಳು ಮತ್ತು ಹಳ್ಳಿಯಿಂದ ಪಟ್ಟಣದ ರಸ್ತೆಗಳ ಬಗ್ಗೆ ತಿಳಿದುಕೊಳ್ಳಬಹುದು ಗ್ರಾಮಠಾಣಾ ನಕ್ಷೆಯನ್ನು ಪಡೆಯಲು ತಮ್ಮ ಗ್ರಾಮದ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ ಗಳಿಗೆ ಗ್ರಾಮಠಾಣಾ ನಕ್ಷೆ ಯಾವ ಕಾರಣಕ್ಕೆ ಬೇಕು ಎಂದು ಅರ್ಜಿ ಸಲ್ಲಿಸಬೇಕು

ಆ ಅರ್ಜಿಯಲ್ಲಿ ನಕ್ಷೆ ಬೇಡಿಕೆಯ ಉದ್ದೇಶ ತಿಳಿಸುವುದು ಕಡ್ಡಾಯ ವಾಗಿದೆ ಅರ್ಜಿಯ ಜೊತೆಗೆ ಆಧಾರ್ ಕಾರ್ಡ್ ಹಾಗೂ ಮನೆ ಕಂದಾಯ ರಶೀದಿ ಲಗ್ಗತಿಸಬೇಕು ಗ್ರಾಮ ಲೆಕ್ಕಾಧಕಾರಿಗಳು ಅರ್ಜಿ ಪರಿಶೀಲಿಸಿ ಸಂಭಂದ ಪಟ್ಟ ದಾಖಲೆ ನೀಡಿ ಹಣವನ್ನು ಪಾವತಿದರೆ ಗ್ರಾಮಠಾಣಾ ನಕ್ಷೆ ನೀಡುತ್ತಾರೆ ಈ ಮೂಲಕ ಗ್ರಾಮಠಾಣಾ ನಕ್ಷೆಯನ್ನು ಪಡೆಯಬಹುದು .

Leave A Reply

Your email address will not be published.