ಭಾರತೀಯರು ಬರೆದ ಈ ಗಿನ್ನಿಸ್ ರೆಕಾರ್ಡ್ ಅನ್ನು ಇದುವರೆಗೂ ಯಾರು ಮೀರಿಸಿಲ್ಲ ನೋಡಿ

0 3

ಜಗತ್ತಿನಲ್ಲಿ ಬಹಳಷ್ಟು ಜನರು ಗಿನ್ನಿಸ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸುವ ಸಾಧನೆ ಮಾಡಿದ್ದಾರೆ.‌ ಭಾರತೀಯರು ಗಿನ್ನಿಸ್ ದಾಖಲೆ ಮಾಡಲು ಯಾರಿಗೂ ಕಡಿಮೆ ಇಲ್ಲ.‌ ಗಿನ್ನಿಸ್ ರೆಕಾರ್ಡ್ ನಲ್ಲಿ ದಾಖಲೆಯಾದ ನಮ್ಮ ಭಾರತೀಯರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಶ್ವದ ಯಾವುದೇ ಮೂಲೆಯ ವ್ಯಕ್ತಿಯಾದರೂ ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸುತ್ತಾರೆ. ಸಾಧನೆ ಮಾಡಿ ಗುರುತಿಸುವುದಕ್ಕೆ ಹಲವಾರು ವೇದಿಕೆಗಳಿವೆ ಅದರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೂಡ ಒಂದು. ಗಿನ್ನಿಸ್ ಬುಕ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಬೇಕು ಎನ್ನುವುದು ಸಾಧಕರ ಆಶಯವಾಗಿರುತ್ತದೆ. ಅಂತಹ ಗಿನ್ನಿಸ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ ಭಾರತೀಯರು ಹಲವರಿದ್ದಾರೆ. ಪಂಜಾಬಿನ ಅವತಾರ್ ಸಿಂಗ್ ಎಂಬಾತ 45 ಕೆ.ಜಿ ತೂಕ ಹಾಗೂ 645 ಮೀಟರ್ ಉದ್ದದ ಪೇಟ ಧರಿಸಿ ವಿಶ್ವ ದಾಖಲೆ ಮಾಡಿದ್ದಾರೆ.

2012ರಲ್ಲಿ ಗುಜರಾತಿನ ಜಮಾನ ನಗರದಲ್ಲಿರುವ ಶ್ರೀ ಜಲರಾಮ್ ದೇವಸ್ಥಾನದ ಸಮಿತಿ ಜಗತ್ತಿನ ಅತಿದೊಡ್ಡ ರೋಟಿಯನ್ನು ಮಾಡಿದೆ. ಈ ರೋಟಿ 145 ಕೆಜಿ ತೂಕವಿದೆ. ಹೈದರಾಬಾದಿನ ಖುರ್ಷಿದ್ ಸಿಂಗ್ ಎಂಬಾತ ತನ್ನ ಮೂಗಿನಿಂದ 47 ಸೆಕೆಂಡ್ ಗಳಲ್ಲಿ 103 ಲೆಟರ್ ಟೈಪ್ ಮಾಡಿ ವಿಶ್ವ ದಾಖಲೆ ಮಾಡಿದ್ದಾನೆ. ಕಮಲಾನಂದನ್ ಹೇಮಲತಾ ಎಂಬ ಮಹಿಳೆ ಹೆಚ್ಚು ಗಂಟೆಗಳ ಕಾಲ ಡ್ಯಾನ್ಸ್ ಮಾಡಿದ ವರ್ಲ್ಡ್ ರೆಕಾರ್ಡ್ ಹೊಂದಿದ್ದಾರೆ. ಅವರು 123 ಗಂಟೆ 15 ನಿಮಿಷಗಳ ಕಾಲ ಸತತವಾಗಿ ಡ್ಯಾನ್ಸ್ ಮಾಡಿದ್ದಾರೆ. 2008 ರಲ್ಲಿ ದೆಹಲಿಯ ಕೊಹಿನೂರ್ ಫುಡ್ಸ್ ಲಿಮಿಟೆಡ್ ಎಂಬ ಸಂಸ್ಥೆ ಜಗತ್ತಿನ ಅತಿದೊಡ್ಡ ವೆಜ್ ಬಿರಿಯಾನಿಯನ್ನು ಸಿದ್ಧಪಡಿಸಿತು. 60 ಜನ ಸೇರಿ ಮಾಡಿದ ಬಿರಿಯಾನಿಗೆ 12,000 ಕೆ.ಜಿ ಅಕ್ಕಿ ಮತ್ತು ತರಕಾರಿಯನ್ನು ಹಾಕಲಾಗಿತ್ತು. ಆಂಧ್ರಪ್ರದೇಶದಲ್ಲಿ ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ 2436 ಜನರು 1 ಗಂಟೆ ಹಗ್ ಮಾಡುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಗುಜರಾತಿನ ವ್ಯಾಪಾರಿಯೊಬ್ಬ 10 ಲಕ್ಷ ಖರ್ಚು ಮಾಡಿ ಸೂಟನ್ನು ತಯಾರಿಸಿದ್ದನು ನಂತರ ಇದು 4ಕೋಟಿ 31 ಲಕ್ಷಕ್ಕೆ ಮಾರಾಟವಾಯಿತು ಆದ್ದರಿಂದ ಈ ಸೂಟ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಪಡೆದಿದೆ. ಕೇರಳದ ಒಂದು ಹಸು ಕೇವಲ 65.5 ಸೆಂಟಿಮೀಟರ್ ಉದ್ದ ಇದೆ ಜಗತ್ತಿನ ಅತಿಸಣ್ಣ ಹಸು ಎಂದು ವಿಶ್ವದಾಖಲೆ ಮಾಡಿದೆ. ರಾಜಸ್ಥಾನದ ಜೈಪುರದ ರಾಮ್ ಸಿಂಗ್ ಚೌಹಾಣ್ ಎಂಬ ವ್ಯಕ್ತಿಯ ಮೀಸೆ 14 ಫೀಟ್ ಉದ್ದವಿದೆ ಆದ್ದರಿಂದ ಜಗತ್ತಿನ ಅತಿ ಉದ್ದ ಮೀಸೆ ಹೊಂದಿದ ವ್ಯಕ್ತಿ ಎಂದು ವಿಶ್ವ ದಾಖಲೆ ಮಾಡಿದ್ದಾರೆ. ಸಮೀರ್ ಅಂಜಾನ್ 4,000ಕ್ಕೂ ಹೆಚ್ಚು ಹಾಡುಗಳನ್ನು ಬರೆದು ವಿಶ್ವ ದಾಖಲೆ ಮಾಡಿದ್ದಾರೆ. ಜಸ್ಟ್ ಡಯಲ್ ಕಂಪನಿಯ ಮಾಲಿಕ ಲಕ್ಷ್ಮಿ ಮಿಥಲ್ ಅವರ ಮಗಳ ಮದುವೆಗೆ 60 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.

ಜಗತ್ತಿನ ದುಬಾರಿ ಮದುವೆ ಎಂದು ವಿಶ್ವದಾಖಲೆ ಮಾಡಿದೆ. ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಆಯೋಜಿಸಿದ ಸೆಲ್ಫಿ ಕಾಂಟೆಸ್ಟ್ ನಲ್ಲಿ ನಿಮಿಷದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆದು ವಿಶ್ವದಾಖಲೆ ಮಾಡಲಾಗಿದೆ. 2015ರಲ್ಲಿ ಹಿಮಾಲಯದಲ್ಲಿ ನಡೆದ ಒಂದು ದಸರಾ ಉತ್ಸವದಲ್ಲಿ 10,000 ಮಹಿಳೆಯರು, 10,000 ಪುರುಷರು ಫೋಕ್ ಡಾನ್ಸ್ ಮಾಡಿ ಜಗತ್ತಿನ ಅತಿ ದೊಡ್ಡ ಫೋಕ್ ಡ್ಯಾನ್ಸ್ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಶ್ರೇಯಾ ರಾಕೇಶ್ ಪಾಂಡೆ ಎಂಬ ಐದು ವರ್ಷದ ಹುಡುಗಿ 27 ಕಾರುಗಳ ಅಡಿಯಲ್ಲಿ 48.2 ಮೀಟರ್ ದೂರ ಕೇವಲ 23 ಸೆಕೆಂಡ್ ಗಳಲ್ಲಿ ಸ್ಕೇಟಿಂಗ್ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದ 24 ವರ್ಷದ ಜ್ಯೋತಿ ಆಮ್ಗೆ ಅವರ ಉದ್ದ 2.6 ಫೀಟ್ ಜಗತ್ತಿನ ಅತೀ ಗಿಡ್ಡ ಮಹಿಳೆ ಎಂದು ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿ ಅವರ ಹೆಸರು ದಾಖಲಾಗಿದೆ.

Leave A Reply

Your email address will not be published.