ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತನ್ನು ಕೇಳಿರುತ್ತೇವೆ ಆದರೆ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಅವರು ತಮ್ಮನ್ನು ಪ್ರೀತಿಸುವವರು ಹೀಗೆ ಇರಬೇಕು ಎಂದು ಬಯಸುತ್ತಾರೆ ಇದು ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ನಲವತ್ತರ ವಯಸ್ಸಿನಲ್ಲಿ ಮಹಿಳೆಯರು ತಮ್ಮನ್ನು ಪ್ರೀತಿಸುವವರಿಂದ ಬಯಸುವ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಪ್ರೀತಿ ಮಾಡಲು ಅಥವಾ ತನ್ನ ಪ್ರೀತಿಯ ವ್ಯಕ್ತಿಯನ್ನು ಹುಡುಕಲು ಇದೆ ವಯಸ್ಸು ಆಗಬೇಕೆಂದೇನಿಲ್ಲ. ಯಾವ ಪ್ರಾಯದಲ್ಲಾದರೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಮಯ ಕಳೆದಂತೆ ಪ್ರೀತಿಯಿಂದ ಬಯಸುವ ವಿಚಾರಗಳು ಬದಲಾಗಬಹುದು ಆದರೆ ಪ್ರೀತಿಯಲ್ಲಿ ಬದಲಾವಣೆ ಆಗುವುದಿಲ್ಲ. ನಲವತ್ತರ ವಯಸ್ಸಿನಲ್ಲಿ ಮಹಿಳೆಯರು ಪ್ರೀತಿಯಲ್ಲಿ ಕೆಲವು ವಿಷಯಗಳನ್ನು ಬಯಸುತ್ತಾರೆ ಅಲ್ಲದೆ ಇದು ಸಾಮಾನ್ಯವಾಗಿ ಎಲ್ಲಾ ವಯಸ್ಸಿನ ಮಹಿಳೆಯರೂ ಇಷ್ಟಪಡುವ ಸಂಗತಿಯಾಗಿದೆ. ಮಹಿಳೆಯರು ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರೆ. ಪ್ರಾಮಾಣಿಕವಾಗಿ ಇರುವ ಮನುಷ್ಯ ಎಲ್ಲರಿಗೂ ಹತ್ತಿರವಾಗುತ್ತಾನೆ, ಅದರಲ್ಲೂ ಮಹಿಳೆ ಆತನ ಪ್ರಾಮಾಣಿಕತೆಗೆ ಗೌರವ ತೋರುತ್ತಾಳೆ. ಪುರುಷ ಭಾವನಾತ್ಮಕವಾಗಿ ಪ್ರಾಮಾಣಿಕನಾಗಿರಬೇಕು. ತನ್ನ ಮನದಲ್ಲಿ ಯಾವ ಭಾವನೆಗಳಿವೆ ಎಂಬುದನ್ನು ಚಾಚು ತಪ್ಪದೆ, ಸುಳ್ಳು ಹೇಳದೆ ಸತ್ಯವನ್ನು ಹೇಳಬೇಕು ಎಂದು ಬಯಸುತ್ತಾಳೆ.

ಕಿರಿಯ ವಯಸ್ಸಿನ ಮಹಿಳೆಯೊಂದಿಗೆ ಹೋಲಿಕೆ ಮಾಡಬಾರದು, ನಲವತ್ತರ ನಂತರ ಮಹಿಳೆ ಹೀಗೆ ಬಯಸುತ್ತಾಳೆ. ಇಬ್ಬರಿಗೂ ವಯಸ್ಸಾಗಿರುವ ವಿಚಾರವನ್ನು ಇಬ್ಬರೂ ಒಪ್ಪಿಕೊಳ್ಳಬೇಕು ಅದಕ್ಕೆ ತಕ್ಕಂತೆ ಬದುಕಬೇಕು. ಅದು ಬಿಟ್ಟು ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ತನ್ನೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಆಕೆ ಇರುವ ರೀತಿಯನ್ನು ಒಪ್ಪಿಕೊಂಡು ಆಕೆಯ ಸ್ನೇಹ ಸಂಬಂಧವನ್ನು ಬಯಸಬೇಕು. ಐಲವ್ ಯೂ ಎನ್ನುವುದರ ಮೌಲ್ಯ ತಿಳಿದಿರಬೇಕು. ಒಬ್ಬ ಪ್ರಬುದ್ಧ ಮಹಿಳೆಗೆ ಐ ಲವ್ ಯೂ ಎನ್ನುವುದರ ಮೌಲ್ಯ ಚೆನ್ನಾಗಿ ತಿಳಿದಿರುತ್ತದೆ. ಅವಳೇನಾದರೂ ಐಲವ್ ಯೂ ಅಂದರೆ ಅದನ್ನು ಅಪಹಾಸ್ಯ ಮಾಡಬಾರದು ಎಂದು ಬಯಸುತ್ತಾಳೆ. ಅವಳ ಆ ಮೂರು ಪದ ತುಂಬಾ ವಿಶೇಷವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಹೇಳುತ್ತಾಳೆ ಅದನ್ನು ಅನುಮಾನಿಸದೇ ಅವರೊಂದಿಗೆ ಸಂತೋಷವಾಗಿ ಸಮಯ ಕಳೆಯಬೇಕು. ನಲವತ್ತರ ನಂತರ ಮಹಿಳೆಯರಿಗೆ ದಿನವಿಡೀ ರೊಮ್ಯಾನ್ಸ್ ಬೇಕಾಗಿರುವುದಿಲ್ಲ. ನಲವತ್ತರ ನಂತರದ ಮಹಿಳೆಗೆ ಗಮನ ಮತ್ತು ಸಮಯ ನೀಡುವುದು ಬೇಕಾಗಿರುತ್ತದೆ. ಸದಾ ಆಕೆಯ ಜೊತೆಗೆ ಇದ್ದು ಆಕೆಯ ಬೆಂಬಲವಾಗಿರುವುದನ್ನು ಆಕೆ ಬಯಸುತ್ತಾಳೆ ವಿನಃ ರೊಮ್ಯಾನ್ಸ್ ಅಲ್ಲ. ಅವರಿಗೆ, ಹೂವುಗಳನ್ನು ನೀಡುವ ಬದಲು ಒಂದು ಕಪ್ ಕಾಫಿ ಮಾಡಿಕೊಂಡು ಹೋಗಿ ಅವಳ ಜೊತೆ ಸಮಯ ಕಳೆಯುವುದನ್ನು ಆಕೆ ಇಷ್ಟಪಡುತ್ತಾಳೆ. ಅದೇ ಅವಳಿಗೆ ರೊಮ್ಯಾಂಟಿಕ್ ಅನುಭವ ನೀಡುವುದು.

ನಲವತ್ತರ ನಂತರ ಮಹಿಳೆಯರಿಗೆ ಭಾವನೆಗಳೊಂದಿಗೆ ಆಡುವವರು ಬೇಕಾಗಿಲ್ಲ. ಕೆಲವು ಯುವಕರು ಮನಸ್ಸಿನ ಭಾವನೆಗಳೊಂದಿಗೆ ಆಟ ಆಡುವುದನ್ನು ಕೇಳುತ್ತೇವೆ ಆದರೆ ಅದನ್ನು ಈ ವಯಸ್ಸಿನ ಮಹಿಳೆ ಇಷ್ಟ ಪಡುವುದಿಲ್ಲ. ಆಕೆಗೆ ಸಮಯದ ಮಹತ್ವ ಗೊತ್ತಿರುತ್ತದೆ ಆದ್ದರಿಂದ ಆ ಸಮಯಕ್ಕೆ ಬೆಲೆ ಕೊಡುವ ವ್ಯಕ್ತಿಯನ್ನು ಬಯಸುತ್ತಾಳೆ. ತನ್ನ ಭಾವನೆಗಳೊಂದಿಗೆ ಆಡುವ ವ್ಯಕ್ತಿಯನ್ನು ಆಕೆ ಎಂದಿಗೂ ಮೆಚ್ಚುವುದಿಲ್ಲ, ಹಾಗೆಯೇ ಅವರೊಂದಿಗೆ ಇರಲು ಇಷ್ಟಪಡುವುದಿಲ್ಲ. ಯಾವ ವಯಸ್ಸೆ ಆಗಲಿ, ಯಾರಿಗೆ ಆಗಲಿ ಸೆಲ್ಫ್ ಅವೇರ್ ನೆಸ್ ಇರಬೇಕು. ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿತಿದ್ದರೆ ಮಾತ್ರ ಇನ್ನೊಬ್ಬರ ನೋವು, ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯ ಆದ್ದರಿಂದ ಸೆಲ್ಪ್ ಅಂಡರ್ ಸ್ಟಾಂಡಿಂಗ್ ಇರುವ ವ್ಯಕ್ತಿಯನ್ನು ನಲವತ್ತರ ನಂತರದ ಮಹಿಳೆ ಬಯಸುತ್ತಾಳೆ. ತನ್ನ ಬಗ್ಗೆ ಸರಿಯಾಗಿ ತಿಳಿದುಕೊಂಡ ವ್ಯಕ್ತಿ ಆಕೆಯ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುತ್ತಾನೆ ಎಂಬ ನಂಬಿಕೆ ಅವಳದ್ದು ಆದ್ದರಿಂದ ಪುರುಷರು ಮೊದಲು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಮಹಿಳೆಯರು ಬಯಸುತ್ತಾರೆ. ಕೇವಲ ನಲವತ್ತು ವರ್ಷ ಆಗಿರುವ ಮಹಿಳೆ ಮಾತ್ರವಲ್ಲದೆ ಎಲ್ಲಾ ವಯಸ್ಸಿನ ಮಹಿಳೆಯರೂ ಈ ಅಂಶಗಳನ್ನು ಇಷ್ಟಪಡುತ್ತಾರೆ.

Leave a Reply

Your email address will not be published. Required fields are marked *