ಹೌದು ರೀತಿಯ ಪರಿಸ್ಥಿತಿಯನ್ನು ನೀವು ನಾವುಗಳು ನೋಡುತ್ತಲೇ ಇರುತ್ತವೆ ಒಬ್ಬ ರೈತ ತನ್ನ ಯಾವುದೇ ದಾಖಲೆಗಳನ್ನು ಬೇಗನೆ ಪಡೆಯಲು ಅಥವಾ ಯಾವುದೇ ರೀತಿಯ ಸಹಿ ಮಾಡಿಸಬೇಕು ಅಂದ್ರೆ ಸರ್ಕಾರೀ ಕಚೇರಿಗಳಿಗೆ ಅಲೆದಾಡಬೇಕು ಹಣ ಕೊಟ್ಟು ಬೇಗನೆ ಕೆಲಸ ಮಾಡಿಸಿಕೊಳ್ಳಬೇಕು ಇಂತಹ ಪರಿಸ್ಥಿತಿ ಇದೆ.
ಹೀಗೆ ಒಬ್ಬ ಸಾಮಾನ್ಯ ರೈತನ ಮಗಳು ತನ್ನ ಜೀವನದಲ್ಲಿ ಸಾಧನೆ ಮಾಡಿರುವಂತ ಸ್ಪೂರ್ತಿದಾಯಕ ಸ್ಟೋರಿ ಇದು, ರೈತ ತಂದೆ ತಮ್ಮ ಹೊಲದ ದಾಖಲೆಯನ್ನು ಸಹಿ ಮಾಡಿಸಲು ಡಿಸಿ ಆಫೀಸ್ ಗೆ ಪ್ರತಿದಿನ ಅಲೆದಾಡುವುದನ್ನು ಕಂಡ ಮಗಳು ಒಮ್ಮೆ ತನ್ನ ತಂದೆಯನ್ನು ಕೇಳುತ್ತಲೇ ಪ್ರತಿದಿನ ಯಾಕಪ್ಪ ಹೀಗೆ ಅಲೆದಾಡುತ್ತಿದೆಯಾ ಎಂಬುದಾಗಿ ಅದಕ್ಕೆ ತಂದೆ ಹೇಳುತ್ತಾರೆ ಹೀಗೆ ಹೊಲದ ದಾಖಲೆಗೆ ಸಹಿ ಮಾಡಿಸಬೇಕು ಆದ್ರೆ ಆಗುತ್ತಿಲ್ಲ ಪ್ರತಿದಿನ ಅಲೆದಾಡಿಸುತ್ತಿದ್ದರೆ ಎಂಬುದಾಗಿ ಅಂದು ಆ ಚಿಕ್ಕ ಮಗಳು ಹೇಳಿದ ಮಾತು ನಾನು ಕೂಡ ಕಲೆಕ್ಟರ್ ಆಗಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂಬುದಾಗಿ
ಅಂದು ಮಗಳು ರೋಹಿಣಿ ೯ ನೇ ತರಗತಿ ಓದುತ್ತಿದ್ದಳು.
ಹೀಗೆ ಕಾಲಕಳೆದಂತೆ ತಾನು ಅಂದು ಕೊಂಡ ಕನಸನ್ನು ನೆರೆವಾರಿಸಿಕೊಳ್ಳಬೇಕು ಅನ್ನೋ ಛಲ ಹಂಬಲದಿಂದ ಇಂದು ಐಎಎಸ್ ಅಧಿಕಾರಿಯಾಗಿ ಬಡ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಮಹಾರಾಷ್ಟ್ರ ಮೂಲದ ಒಬ್ಬ ಸಾಮಾನ್ಯ ರೈತನ ಮಗಳು ತಂದೆಯನ್ನು ನೋಡಿ ಬಡ ಜನರಿಗಾಗಿ ತಮ್ಮ ಸೇವೆಯನ್ನು ನೀಡಲು ಐಎಎಸ್ ಅಧಿಕಾರಿಯಾಗಿ ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಐಎಎಸ್ ರೋಹಿಣಿ ಅವರು ಸೇಲಂ ಜಿಲ್ಲೆಯಲ್ಲಿ 170 ಐ,ಎ,ಎಸ್ ಪುರುಷ ಅಧಿಕಾರಿಗಳ ನಂತರ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ ಬಂದಿದ್ದರು ಇವರ ಕಾರ್ಯ ವೈಖರಿಗೆ ಮೆಚ್ಚಿ ಸೇಲಂ ಜಿಲ್ಲಾ ಜನತೆಗೆ ಮೆಚ್ಚಿಗೆಯಾಗಿದ್ದರೆ ಯಾವಾಗಲು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಇವರು ಬಡವರಿಗೆ ಅನುಕೂಲವಾಗುವ ಸೇವೆಯನ್ನು ನೀಡುತ್ತಿದ್ದಾರೆ. ಅದೇನೇ ಇರಲಿ ಈ ರೀತಿಯ ಪ್ರಗತಿ ಪರ ಸೇವೆ ಮಾಡುವ ಅಧಿಕಾರಿಗಳು ನಮ್ಮ ರಾಜ್ಯ ದೇಶಕ್ಕೆ ಇನ್ನು ಬೇಕಾಗಿದ್ದಾರೆ.