ಸಹಾಯವನ್ನು ಪಡೆದುಕೊಂಡ ಪ್ರತಿಯೊಬ್ಬ ವ್ಯಕ್ತಿಯೂ ಸಹಾಯ ಮಾಡಿದ ಆ ವ್ಯಕ್ತಿಯನ್ನ ದೇವರಂತೆಯೇ ಕಾಣುತ್ತಾನೆ. ಅವರಿಗೆ ಅಂತಾನೆ ಒಂದು ಸ್ಥಾನ ಮರ್ಯಾದೆಯನ್ನು ಸಹ ನೀಡುತ್ತಾನೆ ಆದರೆ ಅದು ಎಲ್ಲಾ ಸಮಯದಲ್ಲಿ ಕೂಡ ನಡೆಯುವುದಿಲ್ಲ. ಸಹಾಯ ಮಾಡೋದಕ್ಕೆ ಅಂತ ಹೋಗಿ ತನಗೆ ತಾನೇ ಅಪತ್ತನ್ನು ತಂದುಕೊಂಡ ಎನ್ನುವ ಮಾತೂ ಕೂಡಾ ಇದೆ. ಆದರೆ ಹಾಗೆಯೇ ಇಲ್ಲಿ ಕೂಡಾ ಒಬ್ಬ ಡ್ರೈವರ್ ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ತನಗೆ ಒಂದು ದೊಡ್ಡ ಆಪಟ್ಟನ್ನು ತಂದೊಡ್ಡಿಕೊಂಡಿದ್ದಾನೆ. ಏನಿದು ಕಥೆ ಸಹಾಯ ಮಾಡೋಕೆ ಹೋಗಿ ಆಪತ್ತು ತಂದುಕೊಂಡಿರುವುದು ಅಂತ ಯೋಚಿಸ್ತಾ ಇದ್ದೀರಾ? ಈ ಕೆಳಗೆ ವಿವರಣೆ ಇದೆ ಓದಿ ಏನು ಅನ್ನೋದನ್ನ ತಿಳಿದುಕೊಳ್ಳಿ.

ಹೆರಿಗೆಗೆ ಆಟೋ ಫ್ರೀ ಎಂದು ಹೇಳಿದ ವ್ಯಕ್ತಿ ಇತ್ತೀಚೆಗೆ ಅಷ್ಟೇ ಅರೆಸ್ಟ್ ಆಗಿದ್ದಾನೆ. ಕಳೆದ ವಾರ ಮುಂಬೈ ರೈಲ್ವೇ ಸ್ಟೇಶನ್ ನಲ್ಲಿ ತನ್ನ ಗರ್ಭಿಣಿ ಹೆಂಡತಿಯ ಜೊತೆ ಒಬ್ಬ ವ್ಯಕ್ತಿ ಬಂದಿದ್ದಾರೆ. ಅದೇ ಸಮಯದಲ್ಲಿ ಆತನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಆ ಸಮಯದಲ್ಲಿ ಏನು ಮಾಡವುದು ಎಂದು ತೋಚದೆ ಅಲ್ಲೇ ಅಕ್ಕ ಪಕ್ಕದಲ್ಲಿ ಇದ್ದವರ ಬಳಿ ಸಹಾಯವನ್ನು ಕೇಳಿದ್ದಾರೆ. ಆದರೆ ಆಗ ಯಾರು ಕೂಡಾ ಆ ವ್ಯಕ್ತಿಯ ಸಹಾಯಕ್ಕೆ ಬರಲಿಲ್ಲ . ಯಾರೂ ಸಹಾಯಕ್ಕೆ ಬರದೆ ಇದ್ದಾಗ ಆ ಗರ್ಭಿಣಿ ಸ್ತ್ರೀ ಹಾಗೂ ಅವಳ ಗಂಡನ ಸಹಾಯಕ್ಕೆ ಬಂದಿದ್ದು ಮೂವತ್ನಾಲ್ಕು ವರ್ಷದ ಒಬ್ಬ ಆಟೋ ಡ್ರೈವರ್ ಸಾಗರ್ ಎನ್ನುವ ವ್ಯಕ್ತಿ.

ಯಾರು ಇವರ ಸಹಾಯಕ್ಕೆ ಬರದೆ ಇರುವುದನ್ನ ಗಮನಿಸಿ ರೈಲ್ವೆ ಸ್ಟೇಶನ್ ಫುಟ್ಪಾತ್ ಮೇಲೆಯೇ ಆಟೋ ಓಡಿಸಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ ಸೇರಿಸಿದ್ದಾರೆ. ಆ ಡ್ರೈವರ್ ಸಹಾಯದಿಂದ ತಕ್ಷಣವೇ ಆಸ್ಪತ್ರೆಗೆ ಹೋದ ಕಾರಣ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಅದಾದ ನಂತರ ರೈಲ್ವೆ ಸ್ಟೇಶನ್ ಫುಟ್ಪಾತ್ ಮೇಲೆಯೇ ಆಟೋ ಓಡಿಸಿದ್ದಕ್ಕಾಗಿ ಆ ಆಟೋ ಡ್ರೈವರ್ ಸಾಗರ್ ಎಂಬುವವನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಆತನನ್ನು ಬಿಡುಗಡೆ ಮಾಡಲಾಗಿದೆ. ಹೊರಗೆ ಬಂದ ಸಾಗರ್ ಗೆ ಒಂದು ಸಂಘಟನೆಯವರು ಒಂದು ಲಕ್ಷ ರೂಪಾಯಿ ಸಹಾಯ ಧನವನ್ನು ನೀಡಿದ್ದಾರೆ. ಆಟೋ ಓಡಿಸುವವರು ಎಂದರೆ ಮೀಟರ್ ಮೇಲೆ ದುಡ್ಡು ಕೇಳುವುದು, ಸರಿಯಾದ ಸಮಯಕ್ಕೆ ಬರದೆ ಇರುವವರು, ಕ್ರೂರಿಗಳು ಎಂದು ಹೀಗೆ ಆಟೋ ಡ್ರೈವರ್ ಗಳನ್ನು ದೂಷಿಸಹಬುದು ಆದರೆ ಪ್ರತೀ ಆಟೋ ಡ್ರೈವರ್ ಗಳು ಹೀಗಿರಲ್ಲ ಅವರಲ್ಲಿಯೂ ಕೂಡಾ ಮಾನವೀಯತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಆಗಿದೆ.

By

Leave a Reply

Your email address will not be published. Required fields are marked *