ಹುಲಿಕಲ್ ನಟರಾಜ್ ಅವರ ಮೇಲೆ ವಾಮಾಚಾರ ಮಾಡುವುದಾಗಿ ಪಂಡಿತ್ ಕಾರ್ತಿಕ್, ಇಬ್ಬರ ನಡುವಿನ ಕಾಲ್ ರೆಕಾರ್ಡಿಂಗ್

0 10

ಕೆಲವು ಡೋಂಗಿ ಸ್ವಾಮೀಜಿಗಳು ದೇವರ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಾರೆ. ಭವಿಷ್ಯ ಹೇಳುತ್ತೇವೆ ಎಂದು ಸುಳ್ಳು ಭವಿಷ್ಯವನ್ನು ಹೇಳುತ್ತಾರೆ, ಅವರು ಹೇಳುವ ಮಾತಿಗೆ ಯಾವುದೆ ಜ್ಞಾನದ ಆಧಾರ ಇರುವುದಿಲ್ಲ. ಮೂಢನಂಬಿಕೆಯನ್ನು ನಂಬುವ ಜನರು ಇವರ ಮೋಸದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಹುಲಿಕಲ್ ನಟರಾಜ್ ಎಂಬ ವ್ಯಕ್ತಿ ವಾಮಾಚಾರ ಎನ್ನುವುದು ಸುಳ್ಳು, ಯಾರಾದರೂ ವಾಮಾಚಾರ ಮಾಡುವವರು ನನ್ನ ಮೇಲೆ ಪ್ರಯೋಗ ಮಾಡಬಹುದು ಎಂದು ಓಪನ್ ಚಾಲೆಂಜ್ ಕೊಟ್ಟಿದ್ದರು ಅವರ ಚಾಲೆಂಜ್ ಗೆ ಪಂಡಿತ್ ಕಾರ್ತಿಕ್ ಎಂಬುವವರು ನಾನು ನಟರಾಜ್ ಅವರ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತೇನೆ ಎಂಬ ಹೇಳಿಕೆಯನ್ನು ಹೇಳಿದರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಇತ್ತೀಚೆಗೆ ಹುಲಿಕಲ್ ನಟರಾಜ್ ಅವರು ವಾಮಾಚಾರ ಎನ್ನುವುದು ನಿಜವಾಗಿದ್ದರೆ ನನ್ನ ಮೇಲೆ ವಾಮಾಚಾರವನ್ನು ಪ್ರಯೋಗಿಸಿ ಎಂದು ವಾಮಾಚಾರಿಗಳಿಗೆ ಓಪನ್ ಚಾಲೆಂಜ್ ಮಾಡಿದ್ದರು. ಹಾಸನದ ಪಂಡಿತ್ ಕಾರ್ತಿಕ್ ಅವರು ಚಾಲೆಂಜ್ ಅನ್ನು ಸ್ವೀಕರಿಸಿ ಹುಲಿಕಲ್ ನಟರಾಜ್ ಅವರ ಮೇಲೆ ವಾಮಾಚಾರ ಪ್ರಯೋಗ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಪಂಡಿತ್ ಕಾರ್ತಿಕ್ ಅವರ ಹೇಳಿಕೆಯನ್ನು ನೋಡಿದ ನಟರಾಜ್ ಅವರು ಕಾರ್ತಿಕ್ ಅವರ ನಂಬರ್ ಗೆ ಕರೆ ಮಾಡಿ ಮಾತನಾಡಿದ್ದಾರೆ. ಕಾರ್ತಿಕ್ ಅವರು ವೇದಗಳೆ ಸುಳ್ಳು, ದೇವರೆ ಸುಳ್ಳು ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿದರು, ವಾಮಾಚಾರ ಮಾಡಲು ಕೆಲವು ವಸ್ತುಗಳು ಬೇಕಾಗುತ್ತದೆ ಕಾಲಿನ ಧೂಳು, ತಲೆ ಕೂದಲು, ಮೂತ್ರ ವಿಸರ್ಜನೆ ಮಾಡಿರುವ ಮಣ್ಣು, ಎಂಜಲು ಉಗಿದಿರುವ ಮಣ್ಣು ಇವುಗಳನ್ನು ನಾನು ಹೇಳುವ ದಿನ ತಂದುಕೊಡಿ ಎಂದು ನಟರಾಜ್ ಅವರಿಗೆ ಹೇಳಿದರು.

ನಟರಾಜ್ ಅವರು ವಾಮಾಚಾರ ನಡೆಯುತ್ತಿರುವುದು ಎಲ್ಲರಿಗೂ ತಿಳಿಯಲಿ ಎಂದು ಹೇಳಿದರು. ಕಾರ್ತಿಕ್ ಅವರು ನಾನು ಫೋನ್ ಮಾಡಿದಾಗ ದಿನಾಂಕ ಹೇಳುತ್ತೇನೆ ಎಂದು ಹೇಳಿ ನಟರಾಜ್ ಅವರ ಹುಟ್ಟಿದ ದಿನಾಂಕ ಮತ್ತು ಟೈಮ್ ಪಡೆದರು. ಅಲ್ಲದೆ ವಾಮಾಚಾರ ಮಾಡಿದ ತಕ್ಷಣ ಪರಿಣಾಮ ಬೀರುವುದಿಲ್ಲ, ಸ್ವಲ್ಪ ಸಮಯದ ನಂತರ ಪರಿಣಾಮ ಬೀರುತ್ತದೆ ಎಂದು ಕಾರ್ತಿಕ್ ಅವರು ಹೇಳಿದರು. ಎಲ್ಲರೂ ಡೋಂಗಿಗಳು ಇರುವುದಿಲ್ಲ. ಹಣ ತೆಗೆದುಕೊಂಡು ಇವತ್ತೆ ಮಾಡುತ್ತೇನೆ ಎಂದು ಹೇಳುವವರು ಇರುತ್ತಾರೆ ಅದು ಸುಳ್ಳು ವಾಮಾಚಾರ ಯಾರ ಮೇಲೆ ಮಾಡಬೇಕೊ ಅವರ ಗ್ರಹಗತಿ ನೋಡಿಕೊಂಡು, ಅವರ ಕೆಟ್ಟ ಸಮಯ, ಕೆಟ್ಟ ಯೋಗದಲ್ಲಿ ಇದ್ದಾಗ ಮಾಡಬೇಕು ಎಂದು ಕಾರ್ತಿಕ್ ಅವರು ನಟರಾಜ್ ಅವರಿಗೆ ಹೇಳಿದರು. ಅವರಿಬ್ಬರೂ ಮಾತನಾಡಿದ ಆಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೂಢ ನಂಬಿಕೆಯನ್ನು ನಂಬುವವರು ಡೋಂಗಿ ಸ್ವಾಮೀಜಿಗಳ ಬಳಿಗೆ ಹೋಗುತ್ತಾರೆ. ವಾಮಾಚಾರ ಮಾಡುವುದು ಸರಿಯಾದ ಮಾರ್ಗವಲ್ಲ. ಕೆಲವರು ವಾಮಾಚಾರ ನಡೆಯುತ್ತಿದೆ ಎಂದು ಹೇಳಿದರೆ, ಇನ್ನು ಕೆಲವರು ವಾಮಾಚಾರ ನಡೆಯುತ್ತಿದೆ ಎನ್ನುವುದು ಸುಳ್ಳು ಎಂದು ಹೇಳುತ್ತಾರೆ. ವಾಮಾಚಾರ ನಡೆಯುವುದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಕಾದು ನೋಡಬೇಕಾಗಿದೆ.

Leave A Reply

Your email address will not be published.