ಕಣ್ಣಲ್ಲಿ ಸೇರಿಕೊಂಡಿದ್ದ ಕಲ್ಲುಗಳನ್ನು ಗರಿಕೆಯಿಂದ ತಗೆಯುವುದು ಎಷ್ಟು ನಿಜ, ಈಕೆಯ ನಿಜ ಸ್ವರೂಪ ಬಯಲು ಮಾಡಿದ ಹುಲಿಕಲ್ ನಟರಾಜ್

0 20,134

ಆಧುನಿಕ ಜಾಗತೀಕರಣದ ನಂತರ ವೈದ್ಯಕೀಯ ಕ್ಷೇತ್ರ ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದೆ ಆದರೂ ಮೌಡ್ಯ ಎಂಬುದು ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಯಡಿಯೂರಿನ ಒಬ್ಬ ಮಹಿಳೆ ಗರಿಕೆಯ ಸಹಾಯದಿಂದ ಕಣ್ಣಿನಲ್ಲಿ ಬಿದ್ದಿರುವ ಹರಳುಗಳನ್ನು ತೆಗೆಯುತ್ತಾರೆ. ಇದು ಎಷ್ಟು ನಿಜ ಮತ್ತು ಇದರ ಬಗ್ಗೆ ನೇತ್ರ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ನೀವು ಯಡಿಯೂರಿನ ಸಿದ್ದಲಿಂಗಸ್ವಾಮಿ ದೇವಾಲಯಕ್ಕೆ ಹೋದಾಗ ಅಲ್ಲಿ ಕಣ್ಣಲ್ಲಿ ಕಲ್ಲು ತೆಗೆಯುವ ಕಾಳಮ್ಮನವರ ಮನೆ ಯಾವುದು ಎಂದು ಕೇಳಿದರೆ ಯಾರು ಬೇಕಾದರೂ ನಿಮಗೆ ಅವರ ಮನೆಯ ವಿಳಾಸವನ್ನು ತೋರಿಸುತ್ತಾರೆ. ಇವರು ಕಣ್ಣಿನಲ್ಲಿ ಬಿದ್ದಿರುವ ಧೂಳಿನ ಕಣಗಳನ್ನು ಕೇವಲ ಗರಿಕೆಯ ಸಹಾಯದಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕಲ್ಲನ್ನು ತೆಗೆಯುತ್ತಾರೆ. ಇವರು ಹೇಳುವ ಪ್ರಕಾರ ಇದರಿಂದ ಕಣ್ಣಿನಲ್ಲಿ ಪೊರೆ ಬರುವುದಿಲ್ಲ ತಲೆ ನೋವು ಸಹ ಕಡಿಮೆಯಾಗುತ್ತದೆ.ತಲೆಭಾರ ಎನಿಸುವುದಿಲ್ಲ. ಇವರು ಕಣ್ಣಿನಲ್ಲಿ ಬಿದ್ದಿರುವ ಕಲ್ಲುಗಳನ್ನು ತೆಗೆಯಲು ಒಬ್ಬರಿಗೆ ಒಂದು ನೂರು ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ ಅದೇ ನೀವು ಆಸ್ಪತ್ರೆಗಳಿಗೆ ಹೋದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

ಹಾಗಾದರೆ ಈ ವಿಧಾನದಿಂದ ಕಣ್ಣಿನಲ್ಲಿರುವ ಕಲ್ಲುಗಳನ್ನು ಹೊರ ತೆಗೆಯುವುದು ನಿಜವೇ ಎಂಬುದರ ಬಗ್ಗೆ ನೇತ್ರ ತಜ್ಞರಾದ ಡಾ. ಹರೀಶ್ ಅವರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ಗಾಳಿಯಲ್ಲಿ ಬರುವಂತಹ ಮಣ್ಣಿನ ಕಣಗಳು ಸಹಜವಾಗಿ ಕಣ್ಣಿನಲ್ಲಿ ಬಂದು ಬೀಳುತ್ತವೆ ಕಣ್ಣನ್ನು ನೀರಿನಿಂದ ತೊಳೆದುಕೊಂಡರೆ ಸಹಜವಾಗಿ ಆ ಕಣಗಳು ಹೊರಗೆ ಬರುತ್ತವೆ.ಕಣ್ಣಿಗೆ ಸಣ್ಣ ಧೂಳಿನ ಕಣ ತಗುಲಿದರೂ ಸಾಕು ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ ನೋವು ಆಗುತ್ತದೆ ಹಾಗೆ ಕಣ್ಣು ಮುಚ್ಚಿಕೊಳ್ಳುತ್ತಾರೆ.

ಅದು ಸಹಜ ಆದರೆ ಹಾಗಿರುವಾಗ ಕಾಳಮ್ಮನವರು ಗರಿಕೆಯ ಸಹಾಯದಿಂದ ತೆಗೆಯುವಾಗ ಕಣ್ಣಿಗೆ ಸಮಸ್ಯೆ ಆಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂದರೆ ಕಣ್ಣಿನಲ್ಲಿ ಬಿಳಿ ಕಣ್ಣು ಗುಡ್ಡೆ ಮತ್ತು ಕಪ್ಪು ಗುಡ್ಡೆ ಎಂಬ ಎರಡು ಭಾಗಗಳಿರುತ್ತವೆ. ಅದರಲ್ಲಿ ಬಿಳಿ ಭಾಗದಲ್ಲಿ ಸ್ಪರ್ಶ ಜ್ಞಾನ ಕಡಿಮೆ ಇರುತ್ತದೆ ಕಪ್ಪುಗುಡ್ಡೆ ತುಂಬಾ ಸೂಕ್ಷ್ಮವಾದದ್ದು ಕಾಳಮ್ಮನವರು ಕಣ್ಣನ್ನು ಮೇಲೆ ಮಾಡಿ ಕೆಳಗೆ ಮಾಡಿ ಎಂದು ಹೇಳುವ ಮೂಲಕ ಕೇವಲ ಕಣ್ಣಿನ ಬಿಳಿಯ ಭಾಗಕ್ಕೆ ಮಾತ್ರ ಗರಿಕೆಯನ್ನು ತಾಗಿಸಿ ಅಲ್ಲಿರುವ ಕಲ್ಲುಗಳನ್ನು ಹೊರಗೆ ತೆಗೆಯುತ್ತಾರೆ.

ಹಾಗಾದರೆ ವೈಜ್ಞಾನಿಕವಾಗಿ ವೈದ್ಯಕೀಯ ಪ್ರಕಾರದಲ್ಲಿ ಕಣ್ಣಿನಲ್ಲಿ ಅಷ್ಟು ಕಲ್ಲುಗಳಿರುತ್ತದೆಯೆ? ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂದರೆ ಅವರು ಮೇಲೆ ತೋರಿಸುವಷ್ಟು ಪ್ರಮಾಣದಲ್ಲಿ ಕಲ್ಲುಗಳು ಕಣ್ಣಿನಲ್ಲಿ ಇರುವುದಿಲ್ಲ ಕಣ್ಣಿನಲ್ಲಿ ಸಣ್ಣ ಧೂಳಿನ ಕಣ ಇದ್ದರೂ ಅದನ್ನು ಸಹಿಸಿಕೊಳ್ಳುವುದಿಲ್ಲ ಹಾಗಾಗಿ ವೈದ್ಯಕೀಯ ಶಾಸ್ತ್ರದ ಪ್ರಕಾರ ಕಣ್ಣಲ್ಲಿ ಅಷ್ಟು ಮಟ್ಟದ ಕಲ್ಲುಗಳಿರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಗರಿಕೆಯಿಂದ ಕಲ್ಲನ್ನು ತೆಗೆಯುವುದನ್ನು ವೈದ್ಯಕೀಯ ಕ್ಷೇತ್ರ ಒಪ್ಪುವುದಿಲ್ಲ ಇದರಿಂದ ಫಂಗಲ್ ಇನ್ ಪೆಕ್ಷನ್ ಆಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಕಣ್ಣಿನಲ್ಲಿ ಗಾಯ ಆದರೆ ಅದಕ್ಕೆ ಸಂಪೂರ್ಣವಾದ ಚಿಕಿತ್ಸೆ ನೀಡಲು ತುಂಬಾ ಸಮಯ ಬೇಕಾಗುತ್ತದೆ ಗಾಯ ಆದಾಗ ಚಿಕಿತ್ಸೆ ನೀಡಿದರೂ ಕಣ್ಣಿನಲ್ಲಿ ಕಲೆಗಳು ಉಳಿದು ಸ್ವಲ್ಪ ದೃಷ್ಟಿ ಕಡಿಮೆ ಆಗುವಂತಹ ಸಾದ್ಯತೆ ಇರುತ್ತದೆ. ಹಾಗಾಗಿ ಕಣ್ಣಿನ ಬಗ್ಗೆ ಜಾಗ್ರತೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

ತಲೆ ನೋವು ಎಂಬುದು ಮುಕ್ಕಾಲು ಭಾಗ ಮನಸ್ಸಿನಿಂದ ಬರುವಂತಹದ್ದು ಮತ್ತು ಕಾಲು ಭಾಗ ಶರೀರಕ್ಕೆ ಸಂಬಂಧಿಸಿದ್ದು ಕೆಲವರಿಗೆ ಕಣ್ಣಿನಲ್ಲಿರುವ ಕಲ್ಲುಗಳನ್ನು ತೆಗೆದಾಗ ಮಾನಸಿಕವಾಗಿ ಸಂತೃಪ್ತಿಯಾಗಿ ತಲೆನೋವು ಕಡಿಮೆಯಾದಂತೆ ಅನಿಸುತ್ತದೆ. ಒಂದು ಸಾರಿ ಕಡಿಮೆ ಆದಾಗ ಮತ್ತೆ ಮತ್ತೆ ಹೋಗುವಂತಹ ಹವ್ಯಾಸವನ್ನು ಜನರು ಬೆಳೆಸಿಕೊಳ್ಳುತ್ತಾರೆ. video credit for Hulikal nataraj

ಇದನ್ನು ಅವರು ಬಂಡವಾಳವನ್ನಾಗಿಸಿಕೊಳ್ಳುತ್ತಾರೆ. ನಮ್ಮಲ್ಲಿ ಕಣ್ಣಿನಲ್ಲಿರುವ ಕಲ್ಲನ್ನು ಉಗುರಿನಿಂದ ತೆಗೆಯುವಂತವರಿದ್ದಾರೆ ನಾಲಿಗೆಯಿಂದ ತೆಗೆಯುವಂತವಾರಿದ್ದಾರೆ ಬೆಣ್ಣೆಯನ್ನು ಕಣ್ಣಿಗೆ ಹಾಕಿ ಅದರಿಂದ ತೆಗೆಯುವವರಿದ್ದಾರೆ. ತಲೆಕೂದಲಿನಿಂದ ತೆಗೆಯುವಂತವರಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಗಳು ಆಗಿವೆ. ಕಣ್ಣು ಎಂಬುದು ಎಲ್ಲರಿಗೂ ಬಹು ಮುಖ್ಯವಾದದ್ದು ಅದನ್ನು ನಾವು ಕಾಪಾಡಿಕೊಳ್ಳುವುದು ನಮ್ಮಕೈಯಲ್ಲಿದೆ ನಿಮಗೆ ಕಣ್ಣಿನ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಿ. ನಿಮ್ಮ ಕಣ್ಣುಗಳ ಸುರಕ್ಷತೆ ನಿಮ್ಮ ಕೈಯಲ್ಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.