ತುಂಬಾ ಜನರು ಪೋಲಿಸ್ ಇಲಾಖೆಗೆ ಹೊಸದಾಗಿ ಅರ್ಜಿ ಹಾಕಿರುತ್ತಾರೆ. ಕೆಲವರು ವರ್ಷಗಳಿಂದ ಪರೀಕ್ಷೆ ಕಟ್ಟಿ ಹೇಗೆ ಬರೆಯಬೇಕು, ಓದಬೇಕು ಎಂದು ಅರ್ಥವಾಗದೆ ಪರೀಕ್ಷೆಯಲ್ಲಿ ಉತ್ತೀರ್ಣರಾದರಾಗದೆ ಇದ್ದರೂ ಛಲ ಬಿಡದೆ ಓದುವವರು ಇದ್ದಾರೆ. ಅವರಿಗೆಲ್ಲ ಉಪಯುಕ್ತವಾದ ಮಾಹಿತಿಯೊಂದು ಇಲ್ಲಿದೆ. ಯಾವ ಪುಸ್ತಕ ಪೋಲಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಉಪಯುಕ್ತ? ಯಾವ ರೀತಿಯಲ್ಲಿ ಓದಿದರೆ ಉತ್ತಮ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇಲ್ಲಿ ನೀಡಿರುವ ಸಲಹೆಗಳನ್ನು ಸರಿಯಾಗಿ ಉಪಯೋಗಿಸಿದಲ್ಲಿ ಪೋಲಿಸ್ ಪರೀಕ್ಷೆ ಪಾಸ್ ಮಾಡುವದು ಸಲೀಸಾಗುತ್ತದೆ. ಮೊದಲನೆಯದಾಗಿ ಪೋಲಿಸ್ ಪರೀಕ್ಷೆಯ ತಯಾರಿಗೆ ಚಿಗುರು ಎಂಬ ಪುಸ್ತಕ ಅತ್ಯುತ್ತಮವಾಗಿದೆ. ಇದರಲ್ಲಿರುವ ಪ್ರಶ್ನೆಗಳಲ್ಲಿ 50 ರಿಂದ 60 ರಷ್ಟು ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗಿದೆ. 50 ರಿಂದ 60 ಪ್ರಶ್ನೆಗಳು ಎಂದರೆ 70 ರಿಂದ 80 ಮಾರ್ಕ್ಸ್ ಸಿಗುತ್ತದೆ.

ಪೋಲಿಸ್ ಪರೀಕ್ಷೆ ಸುಲಭದಲ್ಲಿ ಪಾಸ್ ಮಾಡಲು ಹಿಂದೆ ನಡೆಸಿದ ಎಲ್ಲ ಪ್ರಶ್ನೆ ಪತ್ರಿಕೆಗಳಲ್ಲಿರುವ ಪ್ರಶ್ನೆಗಳನ್ನು ಆದಷ್ಟು ಹೆಚ್ಚು ಓದಬೇಕು. ಹೆಚ್ಚು 30 ರಿಂದ 40 ಪ್ರಶ್ನೆಗಳನ್ನು ಅದರಿಂದಲೆ ಕೇಳಲಾಗುತ್ತದೆ. ಆದಷ್ಟು ಟೈಮ್ ಮ್ಯಾನೇಜ್ಮೆಂಟ್ ಮಾಡುವುದನ್ನು ಕಲಿತುಕೊಳ್ಳಬೇಕು. ಪರೀಕ್ಷೆಗೆ ಟೈಮ್ ಮ್ಯಾನೆಜ್ಮೆಂಟ್ ಅತಿ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತದೆ. ಹೆಚ್ಚು ಹೆಚ್ಚು ರಿವಿಜನ್ ಮಾಡಿದಷ್ಟು ಲಿಸ್ಟ್ ನಲ್ಲಿ ಹೆಸರು ಇರುತ್ತದೆ. ರಿವಿಜನ್ ಪರೀಕ್ಷೆ ಪಾಸಾಗುವ ಒಂದು ಮಹತ್ವದ ದಾರಿಯಾಗಿದೆ. ಸಾಮಾನ್ಯವಾಗಿ ಕೆಲವರೂ ಒಂದೆರಡು ಬಾರಿ ಓದಿ ಮುಗಿಸಿಬಿಡುತ್ತಾರೆ. ಸಾಮಾನ್ಯ ಮನುಷ್ಯರಿಗೆ ನೆನಪಿಡುವ ಶಕ್ತಿಗೆ ಒಂದು ಲಿಮಿಟ್ ಇರುತ್ತದೆ. ಅದನ್ನು ಹೆಚ್ಚು ಮಾಡುವ ಒಂದು ಸಾಧನೆವೆಂದರೆ ರಿವಿಜನ್. ಏನನ್ನು ಓದಬಾರದು, ಏನನ್ನು ಓದಬೇಕು ಎಂಬ ಸಂಪೂರ್ಣ ಮಾಹಿತಿ ರಿವಿಜನ್ ಮಾಡುವುದರಿಂದ ಸಿಗುತ್ತದೆ. ಚಿಗುರು ಪುಸ್ತಕ ರಾಜ್ಯದ 28 ಜಿಲ್ಲೆಗಳಲ್ಲಿ ಎಲ್ಲಾ ಬುಕ್ ಸ್ಟಾಲ್ ಗಳಲ್ಲಿಯು ದೊರಕುತ್ತದೆ. ಮತ್ತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ನಲ್ಲಿ ಚಿಗುರು ಎಂಬ ಚಾನೆಲ್ ಇದೆ. ಅದರಲ್ಲಿ ನಿಮಗೆ ಬೇಕಾದ ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳಬಹುದು.

ಆದಷ್ಟು ಹೆಚ್ಚು ಮೌಕಿಕ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಇದರಿಂದ ಸೆಲ್ಪ್ ಕರೆಕ್ಷಷನ್ ಆಗುತ್ತದೆ. ಇಲ್ಲಿ ಸೆಲ್ಪ್ ಕರೆಕ್ಷನ್ ತುಂಬಾ ಮುಖ್ಯವಾಗಿರುತ್ತದೆ. ಯಾವುದರ ಮೇಲೆ ಹೆಚ್ಚು ಗಮನ ನೀಡಬೇಕು, ಯಾವುದರಲ್ಲಿ ಹಿಡಿತ ಸಾಧಿಸಬೇಕು ಎಂಬುದನ್ನು ಸರಿಪಡಿಸಿಕೊಳ್ಳಲು ಇದು ಒಳ್ಳೆಯ ವಿಧಾನವಾಗಿದೆ. ಪರೀಕ್ಷೆ ಇರುವ ತಿಂಗಳಿಗಿಂತ ಮೊದಲಿನ ಆರು ತಿಂಗಳುಗಳ ಸುದ್ದಿಗಳನ್ನು ರಾಷ್ಟ್ರೀಯ, ರಾಜ್ಯ, ಸ್ಪೋರ್ಟ್ಸ್ , ಹಾಗೂ ವಿಶೇಷ ನೇಮಕಾತಿಗಳು ಎಂದು ಬೇರೆ ಬೇರೆ ನೋಟ್ಸ್ ಮಾಡಿಕೊಳ್ಳಬೇಕು. ನವೆಂಬರ್ ತಿಂಗಳಲ್ಲಿ ಪರೀಕ್ಷೆ ಆಗುವ ಸಾಧ್ಯತೆ ಇದೆ ಹಾಗಾಗಿ ಜನವರಿಯಿಂದ ಮ್ಯಾಗ್ಸೀನ್ ಗಳ ನೋಟ್ಸ್ ಮಾಡಿಕೊಳ್ಳಬೇಕು. ಹಾಗೂ ಪೋಲಿಸ್ ಡಿಪಾರ್ಟ್ಮೆಂಟ್ ಗೆ ಯಾವುದೇ ತರಹದ ಹಣ ನೀಡುವ ಅಗತ್ಯತೆ ಇರುವುದಿಲ್ಲ. ಮೆಂಟಲ್ ಎಬಿಲಿಟಿ ಪರೀಕ್ಷೆಗೆ ಫಾರ್ಮುಲಾ ನೋಡಿಕೊಂಡರೆ ಪಾಸ್ ಆಗಬಹುದು ಸುಲಭವಾಗಿರುತ್ತದೆ. ಕಷ್ಟ ಎನ್ನುವುದನ್ನು ತೆಗೆದು ಹಾಕಿ ಇಷ್ಟ ಪಟ್ಟರೆ ಎಲ್ಲ ಸುಲಭ. ಯಾವುದೇ ಪ್ರಶ್ನೆ ಪತ್ರಿಕೆ ಸಿಕ್ಕಿದರು ಅದನ್ನು ವಿಷಯಗಳಿಗೆ ಸಂಬಂಧಿಸಿದಂತೆ ನೋಟ್ಸ್ ಮಾಡಿ ಎಲ್ಲಿಯೂ ಸಿಗದ ರೀತಿಯ 20 ಪ್ರಶ್ನೆಗಳನ್ನು ನಾವೂ ಹೀಗೆ ತಿಳಿದುಕೊಳ್ಳಬಹುದು.

ಇವೆಲ್ಲ ಆದನಂತರದಲ್ಲಿ ಜಿ.ಕೆ ಟುಡೇಯಲ್ಲಿ ವಿಷಯಾಧಾರಿತವಾಗಿ ಇರುವ ಪ್ರಶ್ನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು. ಪೋಲಿಸ್ ಪರೀಕ್ಷೆಯ ಹತ್ತಿರದಲ್ಲಿ ಯಾವುದೇ ಬೇರೆ ಪರೀಕ್ಷೆ ನಡೆದರೂ ಅದನ್ನು ಓದಿಟ್ಟುಕೊಳ್ಳಬೇಕು. ಅದರಲ್ಲಿ ಕೇಳಿದ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇರುತ್ತದೆ. ಚಿಗುರು ಪುಸ್ತಕದಲ್ಲಿ ಬೇರೆ ಬೇರೆ ಪುಸ್ತಕಗಳ ಮಾಹಿತಿ ನೀಡಲಾಗಿದೆ. ಚಿಗುರು ಪುಸ್ತಕ ಸಿವಿಲ್ ಪಿಸಿಗೆ ಒಳ್ಳೆಯ ಪುಸ್ತಕ. ಕಂಪ್ಯೂಟರ್ ವಿಷಯವನ್ನು ಆದಷ್ಟು ಓದಬೇಕು. ಇವಿಷ್ಟು ನಿರಂತರವಾಗಿ ಪಾಲಿಸಿದಲ್ಲಿ ಪೋಲಿಸ್ ಪರೀಕ್ಷೆ ಪಾಸ್ ಮಾಡುವುದು ಅತ್ಯಂತ ಸುಲಭ.

By

Leave a Reply

Your email address will not be published. Required fields are marked *