ಎಷ್ಟೋ ಜನರಿಗೆ ಕಾರು ಕೊಳ್ಳುವುದು ಅವರ ಜೀವನದ ದೊಡ್ಡ ಕನಸು. ಶ್ರೀಮಂತರು ಒಂದು ವರ್ಷ ದಿಂದ ಮೂರು ವರ್ಷಗಳಿಗೆ ಕಾರುಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಮಧ್ಯಮ ವರ್ಗಕ್ಕೆ ಸೇರಿದವರು ನಾಲ್ಕು ವರ್ಷಗಳಿಗೂ ಮಿಗಿಲಾಗಿ ಅದನ್ನು ಬಳಕೆ ಮಾಡುತ್ತಾರೆ. ಕೆಲವರೂ ಜೀವನ ಪೂರ್ತಿ ಒಂದೆ ಕಾರನ್ನು ಬಳಸುವವರು ಉಂಟು. ಅದಕ್ಕಾಗಿಯೆ ಕಾರು ತೆಗೆದುಕೊಳ್ಳುವ ಮುನ್ನ ತುಂಬಾ ಸಲ ಯೋಚಿಸುತ್ತಾರೆ. ಪೆಟ್ರೋಲ್ ಇಂಜಿನ್ ಇರೋದು ಕೊಳ್ಳುವುದಾ? ಇಲ್ಲಾ ಡೀಸೆಲ್‌ ಇರೋದು ಕೊಳ್ಳುವುದಾ? ಅಂತ ಗೊಂದಲದಲ್ಲಿ ಇರುತ್ತಾರೆ. ಅಂತಹವರಿಗೆ ಇಲ್ಲಿದೆ ಉತ್ತರ. ಕಾರು ಕೊಳ್ಳುವ ಮುನ್ನ ಕಾರನ್ನು ಎರಡು ತಿಂಗಳಲ್ಲಿ ಎಷ್ಟು ಓಡಿಸುತ್ತೆವೆ ಎಂಬುದನ್ನು ನೋಡಬೇಕು. ಎರಡನೇಯದು ಕೊಳ್ಳುವ ಕಾರನ್ನು ಎಷ್ಟು ವರ್ಷ ಬಳಸುತ್ತೆವೆ ಎಂಬುದನ್ನು ಗಮನಿಸಿಕೊಳ್ಳಬೇಕು. ಇವೆರಡು ಕಾರಣಗಳ ಮೇಲೆ ಯಾವ ತರಹದ ಕಾರನ್ನು ಕೊಳ್ಳಬೇಕೆಂದು ನಿರ್ಧರಿಸಲು ಸುಲಭವಾಗುತ್ತದೆ.

ಮೇಲೆ ಹೇಳಿದ ಎರಡು ಕಾರಣಗಳು ಯಾಕೆ ಅವಶ್ಯಕ ಎಂದರೆ ಒಂದು ಕಾರಿಗೆ ಡಿಸೇಲ್ ವೆರಿಯೆಂಟ್ ಹಾಗೂ ಪೆಟ್ರೋಲ್ ವೆರಿಯೆಂಟ್ ಎರಡು ಇದೆ ಎಂದು ಕಲ್ಪಿಸಿಕೊಂಡು ಲೆಕ್ಕ ಹಾಕಿದಾಗ ಏನು ಬರುತ್ತದೆ ತಿಳಿದುಕೊಳ್ಳೊಣ. ಪೆಟ್ರೋಲ್ ವೆರಿಯೆಂಟ್ ಕಾರಿಗೆ 6,50,000 ಇದೆ ಅಂದುಕೊಂಡರೆ ಅದೇ ಕಾರಿಗೆ ಡಿಸೇಲ್ ವೆರಿಯೆಂಟ್ ಕಾರಿಗೆ 8,00,000 ಇದೆ ಎಂದುಕೊಳ್ಳುವ. ಪೆಟ್ರೋಲ್ ಹಾಗೂ ಡಿಸೇಲ್ ಕಾರು ತಿಂಗಳಿಗೆ 1000 ಕಿ.ಮೀ. ಓಡುತ್ತದೆ. ಕಂಪನಿಯವರು 19ಕಿ.ಮೀ. ಮೈಲೇಜ್ ಕೊಡುತ್ತದೆ ಎಂದರೆ ನಿಜವಾಗಿ ಅದು 14 ಕಿ.ಮೀ. ಮೈಲೆಜ್ ಕೊಡುತ್ತದೆ ಎಂದುಕೊಳ್ಳೊಣ.

1000 ಕಿ.ಮೀ ಅನ್ನು 14 ರಿಂದ ಭಾಗಿಸಿದಾಗ 71.42 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಸದ್ಯದ ಪೆಟ್ರೋಲ್ ಬೆಲೆ 77.50ರೂಪಾಯಿ ಇದೆ. 77.42 ಲೀ ಗುಣಿಸು 77.50 ರೂಪಾಯಿ ಮಾಡಿದಾಗ ಒಂದು ತಿಂಗಳಿಗೆ 5535 ರೂಪಾಯಿ ಪೆಟ್ರೋಲ್ ಬೇಕಾಗುತ್ತದೆ. ಇದನ್ನು ನಾಲ್ಕು ವರ್ಷಕ್ಕೆ ಎಷ್ಟಾಗುತ್ತದೆ ನೋಡಿದಾಗ 5535ರೂಪಾಯಿ ಗುಣಿಸು 48 ತಿಂಗಳು ಮಾಡಿದಾಗ 2,65, 682 ರೂಪಾಯಿಗಳಷ್ಟು ಪೆಟ್ರೋಲ್ ಬೇಕಾಗುತ್ತದೆ. 2,65,682 ರೂಪಾಯಿಗೆ ಕಾರಿನ ಬೆಲೆ ಸೇರಿಸಿದಾಗ 9,15,682 ರೂಪಾಯಿ. ಇದು ಪೆಟ್ರೋಲ್ ವೆರಿಯೆಂಟ್ ಕಾರಿನ ಲೆಕ್ಕಾಚಾರ.

ಈಗ ಡೀಸೆಲ್ ವೆರಿಯೆಂಟ್ ಕಾರಿನ ಲೆಕ್ಕಾಚಾರಕ್ಕೆ ಬಂದರೆ. ಇಲ್ಲಿ ಕಂಪನಿ 26 ಕಿ.ಮೀ. ಮೈಲೆಜ್ ಕೊಡುತ್ತದೆ ಎಂದರೆ ನಿಜವಾಗಿ 21 ಕಿ.ಮೀ ಮೈಲೆಜ್ ಕೊಡುತ್ತದೆ ಎಂದುಕೊಳ್ಳೊಣ. 1000ಕಿ.ಮೀ ಅನ್ನು 21 ರಿಂದ ಭಾಗಿಸಿದಾಗ 47.61 ಲೀಟರ್ ಡಿಸೇಲ್ ಬೇಕಾಗುತ್ತದೆ. ಒಂದು ಲೀಟರ್ ಡಿಸೇಲ್ ನ ಬೆಲೆ 68 ರೂಪಾಯಿ ಇದೆ. 47.61 ಲೀಟರ್ ಗುಣಿಸು 68 ಮಾಡಿದಾಗ 3238 ರೂಪಾಯಿಯಷ್ಟು ಡಿಸೇಲ್ ಬೇಕಾಗುತ್ತದೆ. 3238. ರೂಪಾಯಿಯನ್ನು 48 ತಿಂಗಳಿಗೆ ಹೋಲಿಸಿದರೆ 1,55,428 ರೂಪಾಯಿಗಳಷ್ಟು ಹಣ ಬೇಕಾಗುತ್ತದೆ. 1,55,438 ರೂಪಾಯಿ ಹಾಗೂ ಕಾರಿನ ಬೆಲೆ 8,00,000 ವನ್ನು ಕುಡಿಸಿದಾಗ 9,55,428 ರೂಪಾಯಿಗಳು ಆಗಿದೆ. ಇದು ಡಿಸೇಲ್ ವೆರಿಯೆಂಟ್ ಕಾರಿನ ಲೆಕ್ಕಾಚಾರ. ಈಗ ಪೆಟ್ರೋಲ್ ವೆರಿಯೆಂಟ್ ಕಾರಿನ ದರವನ್ನು ಹಾಗೂ ಡಿಸೇಲ್ ವೆರಿಯೆಂಟ್ ಕಾರಿನ ದರದಲ್ಲಿ ಕಳೆಯಬೇಕು. 9,55,428 ರೂಪಾಯಿ – 9,15,685 ರೂಪಾಯಿ ಕಳೆದಾಗ 39,743 ರೂಪಾಯಿ ಹಣ ಡಿಸೇಲ್ ಕಾರಿಗೆ ಹೆಚ್ಚಾಗಿ ಖರ್ಚಾಗುತ್ತದೆ. 4 ವರ್ಷಗಳಿಗೆ 1000ಕಿ.ಮೀ ಗೆ ಈ ಲೆಕ್ಕಾಚಾರ ಮಾಡಲಾಗಿದೆ. 2000 ಕಿ.ಮೀ ತೆಗೆದುಕೊಂಡರೆ ಎಷ್ಟು ಬರಬಹುದು ಯೋಚಿಸಿ. ಡಿಸೇಲ್ ಕಾರುಗಳಿಗಿಂತ ಪೆಟ್ರೋಲ್ ಕಾರಿನಲ್ಲಿ ಸರ್ವೀಸ್ ದರ ಕಡಿಮೆ ಇರುತ್ತದೆ. ಪಿಕ್ ಆಫ್ ಮತ್ತು ಪವರ್ ಬಗ್ಗೆ ಹೇಳುವುದಾದರೆ ಪೆಟ್ರೋಲ್ ಕಾರು ಹೆಚ್ಚು ಪಿಕ್ ಆಫ್ ಕೊಡುತ್ತದೆ. ಡಿಸೇಲ್ ಕಾರು ಅಷ್ಟು ಪಿಕ್ ಆಫ್ ಕೊಡುವುದಿಲ್ಲ. 10,00,000 ಕ್ಕೂ ಹೆಚ್ಚು ಬೆಲೆಯ ಕಾರುಗಳನ್ನು ಕೊಳ್ಳುವುದಾದರೆ ಡಿಸೇಲ್ ಕಾರುಗಳು ಹೆಚ್ಚು ಪಿಕ್ ಆಫ್ ಕೊಡುತ್ತದೆ. ಲೋವರ್ ಸೆಗ್ಮೆಂಟ್ ಕಾರುಗಳಲ್ಲಿ ಹ್ಯೂಂಡೈ ಕಂಪನಿಯ ಕಾರುಗಳು ಒಳ್ಳೆಯ ಪಿಕ್ ಆಫ್ ಕೊಡುತ್ತದೆ.

Leave a Reply

Your email address will not be published. Required fields are marked *