ಮೈದಾ ಹೇಗೆ ತಯಾರಾಗುತ್ತೆ ಗೋತ್ತಾ? ನಿಜಕ್ಕೂ ನೀವು ತಿಳಿಯಲೇಬೇಕು

0 244

ಬಾಯಿಗೆ ತುಂಬಾ ರುಚಿ ನೀಡುವ ಮೃದುವಾಗಿರುವ ಹಾಗೂ ತಯಾರಿಕೆಗೆ ಸುಲಭವಾದ ಮೈದಾ ಎಂಬ ಬಿಳಿ ಹಿಟ್ಟು ಇಲ್ಲದೆ ಆಹಾರ ತಯಾರಿಕೆಯೇ ಅಪೂರ್ಣ ಎನ್ನುವಂತಿದೆ ಸದ್ಯದ ಸ್ತಿತಿ. ಆದರೆ ಈ ಮೈದಾ ಹಿಟ್ಟನ್ನು ಯಾವುದರಿಂದ ಮತ್ತು ಹೇಗೆ ತಯಾರಿಸುತ್ತಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.

ನಾವು ಪ್ರತಿನಿತ್ಯ ತಿನ್ನುತ್ತಿರುವ ಆಹಾರ ವಾಸ್ತುಗಳಲ್ಲಿ ಮೈದಾದಿಂದ ತಯಾರಿಸಿದ ತಿಂಡಿಗಳು ಅನೇಕ ರೀತಿಯಲ್ಲಿ ಇರಬಹುದು. ಅವುಗಳಲ್ಲಿ ಪರೋಟ, ರೋಟಿ, ಫಿಜ್ಜಾ, ಬರ್ಗರ್, ಪಫ್ಸ್, ಪೂರಿ ಇತ್ಯಾದಿಗಳನ್ನು ಹೋಟೆಲ್‌ಗಳಲ್ಲೂ ಮನೆಗಳಲ್ಲೂ ತಯಾರಿಸುತ್ತಾರೆ. ಅಲ್ಲದೆ ಬೇಕರಿಗಳಲ್ಲಿ ದೊರಕುವಂತಹ ಹೆಚ್ಚಿನ ತಿಂಡಿಗಳಾದ ಕೇಕ್ ಹಾಗೂ ಸಿಹಿ ತಿಂಡಿಗಳೂ ಮೈದಾದಿಂದ ತಯಾರಿಸಿದವುಗಳಾಗಿವೆ.

ಗೋಧಿಯ ಸಂಸ್ಕರಿಸಿದ ರೂಪವೇ ಮೈದಾ ಹಿಟ್ಟು. ಗೋಧಿ ಕಾಳನ್ನು ಸಾಮಾನ್ಯವಾಗಿ ಆಂತರಿಕ ಹಾಗೂ ಬಾಹ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. 1 ಬ್ರಾನ್, ನಾರು ಸಹಿತವಾದ ಅತ್ಯಧಿಕ ಪೋಷಕಾಂಶ ಹಾಗೂ ಜೀವಸತ್ವ, ಮೇದಾಮ್ಲ, ಖನಿಜಗಳು ಸಮೃದ್ಧವಾಗಿ ಕೂಡಿದ ಗಟ್ಟಿಯಾದ ಚಿಕ್ಕದಾದ ಹೊರಗಿನ ಭಾಗವಾಗಿದೆ. 2. ಜರ್ಮ್ ಇದು ಗೋಧಿಯ ಒಳಗಿನ ಭಾಗವಾಗಿದ್ದು ಮೊಳಕೆ ಒಡೆಯಲು ಸಹಾಯಕವಾಗುವಂತಹ ವಿಟಮಿನ್ ಈ ಪೊಲೀಕ್ ಆಸಿಡ್ ಅಗತ್ಯ ಪೋಷಕಾಂಶಗಳ ಸಾಂದ್ರೀಕ್ರುತ ಮೂಲವಾಗಿದೆ. 3. ಎಂಡೋಸ್ಪರ್ಮ ಈ ಭಾಗವು ಅತ್ಯಧಿಕ ದೊಡ್ಡದಾಗಿದ್ದು ಶೇ 80 ಕ್ಕಿಂತ hechhu ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್ ನಿಂದ ಆವರ್ತಿಸಿಗೊಂಡ ಭಾಗವಾಗಿದೆ.

ಆಧುನಿಕ ತಂತ್ರಜ್ಞಾನದಿಂದ ಕೂಡಿದ ಗಿರಣಿಗಳಲ್ಲಿ ಆಯಾಯ ಭಾಗಗಳನ್ನು ಬೇರ್ಪಡಿಸಿ ಮಾರುಕಟ್ಟೆಗೆ ನೀಡಲ್ಪಡುತ್ತದೆ ಇವುಗಳಲ್ಲಿ ಅತ್ಯಂತ ಸಂಸ್ಕರಿಸಲ್ಪಟ್ಟ ಹಾಗೂ ಕೊನೆಯ ಉತ್ಪಾದನೆಯಾಗಿದೆ ಮೈದಾ. ಇವುಗಳನ್ನು 2 ವಿಧವಾಗಿ ವಿಂಗಡಿಸಲಾಗಿದ್ದು ಬಿಳುಪಾಗಿಸಿದ ಮತ್ತು ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು ಇವುಗಳು ಕೆಲವೇ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿದೆ.

ಬಿಳುಪಾಗಿಸುವ ಹಾಗೂ ನುಣುಪಾಗಿಸುವ ವಿಧಾನಕ್ಕೆ ಕೆಲವೊಂದು ರಾಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ. ಅವುಗಳಲ್ಲಿ ಬೆಂರೆಯಿಕ್ ಪರಾಕ್ಸೈಡ್ ಹಾಗೂ ಅಲೆಕ್ಸಾನ್ ಮುಖ್ಯವಾದವು. ಅಲೆಕ್ಸಾನ್ ಬಿಳಿಯಾದ ಹುಡಿಯಾಗಿದ್ದು ಇದು ನಮ್ಮ ದೇಹದ ಆಂತರಿಕ ಭಾಗವಾದ ಮೇದೋಜೀರಕ(ಪ್ಯಾಂಕ್ರಿಯಾಸ್) ಗ್ರಂಥಿಯನ್ನು ಮೆಲ್ಲ ಮೆಲ್ಲನೆ ಹಾನಿ ಮಾಡುವಂತಹ ವಿಷಕಾರಿ ರಾಸಾಯನಿಕ ವಸ್ತು ಆಗಿದೆ .
            
ಕೆಲವರು ಮೈದಾದಿಂದ ತಯಾರಿಸಿದ ಪರೋಟ, ನಾನ್ ರೋಟಿ, ಸಕ್ಕರೆ ಖಾಯಿಲೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉತ್ತಮವೆಂದು ತಪ್ಪು ತಿಳುವಳಿಕೆ ಇಂದ ದೈನಂದಿನ ಆಹಾರವಾಗಿ ಸೇರಿಸುತ್ತಾರೆ. ಇದರಿಂದ ಆರೋಗ್ಯ ಕೆಟ್ಟು ಇನ್ನಿತರ ಸಮಸ್ಯೆಗಳಾದ ಬೊಜ್ಜು ಹೃದಯದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆ ಮುಂತಾದವು ತಲೆದೂರಬಹುದು. ಇಂಥ ವಿಷಪೂರಿತವಾಗಿರುವ ಅಲೆಕ್ಸಾನ್ ಈಗಾಗಲೇ ಅಮೆರಿಕಾದಲ್ಲಿ ಹಾಗೂ ಕೆಲವರು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಮೈದಾ ಬಳಕೆಗೆ ಅಡ್ಡಿ ಇಲ್ಲ.

ಅಲೆಕ್ಸಾನ್ ಭರಿತ ಉತ್ಪಾದನೆ ಮಾರುಕಟ್ಟೆ ಬಳಕೆ ಈ ಮೂರನ್ನು ಸಂಪೂರ್ಣ ನಿಷೇಧವನ್ನು ಕೋರಿ ಅದರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇದು ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿದೆ. ಇಂತಹ ಹಾನಿಕಾರಕ ರಾಸಾಯನಿಕ ವಸ್ತುಗಳನ್ನೊಳಗೊಂಡ ಮೈದಾ ಹಿಟ್ಟು ಶೇ 100 ಕಾರ್ಬೋಹೈಡ್ರೇಟ್ ನಿಂದ ಕೂಡಿದ್ದು ಇವುಗಳಿಂದ ತಯಾರಿಸಿದ ಆಹಾರ ಉತ್ಪನ್ನಗಳನ್ನು ನಿರಂತರ ಸೇವನೆಯಿಂದ ಮಕ್ಕಳು ಹದಿಹರೆಯದವರು ವಯಸ್ಕರು, ವೃದ್ಧರು ಎಂಬ ಭೇದ ಭಾವ ಇಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲಾ. video credit for youths learn Kannada

Leave A Reply

Your email address will not be published.