ಪುರುಷರು ಅಷ್ಟೇ ಅಲ್ಲ ಹೆಂಗಸರು ಕೂಡ ನುಗ್ಗೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ,

0 7

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಕಾಪಾಡಿಕೊಳ್ಳಲು ನಾವು ತಿನ್ನುವಂತಹ ಆಹಾರವು ಆರೋಗ್ಯಕಾರಿ ಆಗಿರಬೇಕು. ಇಷ್ಟು ಮಾತ್ರವಲ್ಲದೆ ಸಮತೋಲಿತ ಆಹಾರ ಸೇವನೆಯಿಂದ ದೇಹದ ಆರೋಗ್ಯವನ್ನು ಕಾಪಾಡಬಹುದು. ಅದರಲ್ಲೂ ನಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಪಾಲು ತರಕಾರಿ ಇದ್ದರೆ ಆಗ ಅದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ನುಗ್ಗೆಕಾಯಿ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಇದನ್ನು ನಾವು ಹಲವಾರು ವಿಧದಿಂದ ಬಳಸುತ್ತೇವೆ. ಹೆಚ್ಚಾಗಿ ಸಾಂಬಾರಿನಲ್ಲಿ ನುಗ್ಗೆಕಾಯಿ ಬಳಸಿದರೆ ಅದು ತುಂಬಾ ರುಚಿಕರವಾಗಿರುತ್ತದೆ. ನುಗ್ಗೆಕಾಯಿಯು ಬಾಯಿಗೆ ರುಚಿ ನೀಡುವ ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನುಗ್ಗೆಕಾಯಿಯಿಂದ ಸಿಗುವ ಲಾಭಗಳು ಏನೂ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹೊಸದಾಗಿ ಮದುವೆಯಾದ ಗಂಡ ಹೆಂಡತಿಯ ನಡುವೆ ನುಗ್ಗೆಕಾಯಿಗೆ ಏನು ಕೆಲಸ ಎಂದು ಯಾರನ್ನಾದರೂ ಕೇಳಿದರೆ, ಅವರು ಖಂಡಿತ ತಲೆ ತಗ್ಗಿಸುತ್ತಾರೆ. ಏಕೆಂದರೆ ಆ ವಿಷಯವೇ ಹಾಗೆ. ಆದರೆ ನುಗ್ಗಿಕಾಯಿ ಕೇವಲ ಅಷ್ಟಕ್ಕೆ ಮಾತ್ರ ಅಂದುಕೊಳ್ಳಬೇಡಿ ಮತ್ತು ಇದನ್ನು ಪುರುಷರು ಮಾತ್ರ ಸೇವನೆ ಮಾಡಬೇಕು ಎನ್ನುವ ಹಾಗೇನಿಲ್ಲ. ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆಕಾಯಿ ಪರಿಹಾರ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇದರ ಉಲ್ಲೇಖವಿದೆ. ನಮ್ಮ ದೇಹದಲ್ಲಿ ಕಿಡ್ನಿಗಳು ಮತ್ತು ಇನ್ನಿತರ ಕೆಲವೊಂದು ಅಂಗಾಂಗಗಳು ತಮ್ಮ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ನುಗ್ಗೆ ಕಾಯಿಯಲ್ಲಿ ಕಂಡುಬರುವಂತಹ ಕೆಲವೊಂದು ಅಂಶಗಳನ್ನು ಸ್ವೀಕರಿಸುತ್ತವೆ.

ಇವುಗಳ ಕಾರಣದಿಂದ ಒಳಗಿನ ಅಂಗಾಂಗಗಳಿಗೆ ಮತ್ತು ಅಂಗಾಂಶಗಳಿಗೆ ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ನುಗ್ಗೆಕಾಯಿಯ ಮತ್ತಷ್ಟು ಪ್ರಯೋಜನಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ನೋಡುವುದಾದರೆ, ​ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತವೆ. ನುಗ್ಗೆಕಾಯಿಯಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಇತರ ಕೆಲವೊಂದು ವಿಟಮಿನ್ ಗಳು ಇರುವ ಕಾರಣದಿಂದಾಗಿ ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ದಿನನಿತ್ಯವೂ ನುಗ್ಗೆಕಾಯಿ ತಿಂದರೆ ಅದರಿಂದ ಮೂಳೆಯ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ಮೂಳೆಯು ಆರೋಗ್ಯವಾಗಿ ಇರುವುದು.

ಯಾರಿಗೆ ಮಧುಮೇಹ ಸಮಸ್ಯೆ ಇರುತ್ತದೆ, ಅವರ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಇದ್ದೇ ಇರುತ್ತದೆ. ಸಕ್ಕರೆ ಅಂಶ ಹೆಚ್ಚಾದರೆ, ಅದರಿಂದ ಕಿಡ್ನಿಗಳಿಗೆ ಬಹಳಷ್ಟು ತೊಂದರೆ ಎಂದು ಹೇಳುತ್ತಾರೆ. ಆದರೆ ಅಂತಹವರು ಆಗಾಗ ನುಗ್ಗೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ನುಗ್ಗೆಕಾಯಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಕೆ ಆಗದಂತೆ ತಡೆಯುವುದು ಮಾತ್ರವಲ್ಲದೆ ಕಿಡ್ನಿಗಳಲ್ಲಿ ಕೂಡ ಕಲ್ಲುಗಳು ಉಂಟಾಗದಂತೆ ನೋಡಿಕೊಳ್ಳುತ್ತವೆ.
​ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಇದು ಸಹಾಯಕ.

ಮೂತ್ರಪಿಂಡಗಳಿಗೆ ನಮ್ಮ ದೇಹದಲ್ಲಿನ ಪ್ರಮುಖ ಕೆಲಸ ಎಂದರೆ ನಮ್ಮ ದೇಹವನ್ನು ಸ್ವಚ್ಛವಾಗಿಡುವುದು. ಅಂದರೆ ವಿಷಕಾರಿ ಅಂಶಗಳನ್ನು ನಮ್ಮ ದೇಹದಿಂದ ಹೊರಗೆ ಹಾಕುವುದು. ನುಗ್ಗೆಕಾಯಿ ಕೂಡ ಅದೇ ಕೆಲಸವನ್ನು ಮಾಡುತ್ತದೆ. ಪ್ರಮುಖವಾಗಿ ರಕ್ತದ ಶುದ್ಧೀಕರಣಕ್ಕೆ ಇದು ಹೆಚ್ಚು ಸಹಾಯ ಮಾಡುವುದು ಮಾತ್ರವಲ್ಲದೆ, ಕಿಡ್ನಿಗಳ ಭಾಗದಲ್ಲಿ ಯಾವುದೇ ವಿಷಕಾರಿ ಅಂಶಗಳ ಒತ್ತಡ ಇಲ್ಲದಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತನಾಳಗಳು ಕೂಡ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಡೀ ದೇಹದ ತುಂಬಾ ಸರಾಗವಾದ ರಕ್ತಸಂಚಾರ ಉಂಟಾಗುತ್ತದೆ.ನುಗ್ಗೆಕಾಯಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತವನ್ನು ಶುದ್ಧೀಕರಿಸುವ ಜತೆಗೆ ಇದು ಪ್ರಬಲ ರೋಗನಿರೋಧಕವಾಗಿಯೂ ಕೆಲಸ ಮಾಡುವುದು. ನುಗ್ಗೆಕಾಯಿ ತಿಂದರೆ ಇದು ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡುತ್ತದೆ.

ನುಗ್ಗೆಕಾಯಿಯು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ನುಗ್ಗೆಕಾಯಿ ತಿಂದರೆ ಅದರಿಂದ ಮೂತ್ರಕೋಶವು ಸರಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುವುದು. ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ನುಗ್ಗಕಾಯಿ ಸೇರಿಸಿಕೊಂಡರೆ ಅದರಿಂದ ಹೆರಿಗೆಯು ತುಂಬಾ ಸುಲಭವಾಗುವುದು ಮತ್ತು ಹೆರಿಗೆ ಬಳಿಕದ ಸಮಸ್ಯೆಗಳು ನಿವಾರಣೆ ಆಗುವುದು. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ ಮತ್ತು ಇದು ಗರ್ಭಕೋಶವು ಜೋತು ಬೀಳುವುದನ್ನು ತಡೆಯುವುದು ಮತ್ತು ಎದೆಹಾಲಿನ ಉತ್ಪತ್ತಿ ಹೆಚ್ಚಿಸುವುದು.

ದೇಹದಲ್ಲಿ ರಕ್ತ ನಾಳಗಳು ಹಾಳಾದರೆ ನಮ್ಮ ದೇಹದಲ್ಲಿ ಹರಿಯಬೇಕಾದ ರಕ್ತ ಮತ್ತು ಅದರ ಅಂಶಗಳು ಮೂತ್ರ ವಿಸರ್ಜನೆಯಲ್ಲಿ ಮಿಶ್ರಣವಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಕಿಡ್ನಿಗಳಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಅಂಶದ ಶೇಖರಣೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಕ್ರಮೇಣವಾಗಿ ಕಿಡ್ನಿಗಳಲ್ಲಿನ ರಕ್ತನಾಳಗಳನ್ನು ಗಟ್ಟಿ ಮಾಡುತ್ತದೆ. ಆದರೆ ನುಗ್ಗೆ ಕಾಯಿಗಳನ್ನು ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಅಂಶದ ಜೊತೆಗೆ ಕಬ್ಬಿಣ ಮತ್ತು ಇನ್ನಿತರ ವಿಟಮಿನ್ ಅಂಶಗಳು ಕೂಡ ನಿಮ್ಮ ದೇಹಕ್ಕೆ ಸಿಗುತ್ತವೆ. ಇದರಿಂದ ನಿಮ್ಮ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ಮೂಳೆಗಳ ಬಲ ಕೂಡ ಅಭಿವೃದ್ಧಿಯಾಗುತ್ತದೆ.

ನುಗ್ಗೆಕಾಯಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಪೌಷ್ಟಿಕ ಸತ್ವಗಳ ಪ್ರಮಾಣ ಹೆಚ್ಚುತ್ತದೆ. ಬೇಡದ ಅಂಶಗಳು ನಿಮ್ಮ ಕಿಡ್ನಿಯಿಂದ ಹೊರಹೋಗುತ್ತವೆ. ಹೀಗಾಗಿ ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ನೀವು ಆಗಾಗ ನುಗ್ಗೆ ಸೊಪ್ಪು ಅಥವಾ ನುಗ್ಗೆಕಾಯಿಗಳನ್ನು ಸೇವನೆ ಮಾಡಬಹುದು.

ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ನಯಾಸಿನ್, ರಿಬಾಫ್ಲವಿನ್, ಫೋಲಿಕ್ ಆಮ್ಲ ಹೆಚ್ಚಾಗಿ ಸಿಗುತ್ತದೆ. ಜೊತೆಗೆ ಕಾರ್ಬೋಹೈಡ್ರೇಟ್ ಅಂಶಗಳ ಪ್ರಮಾಣ ಕೂಡ ನಮ್ಮ ದೇಹದಲ್ಲಿ ಸರಳವಾಗಿ ನಿರ್ವಹಣೆಯಾಗುತ್ತದೆ. ಆರೋಗ್ಯಕರವಾದ ರೀತಿಯಲ್ಲಿ ಪ್ರೋಟಿನ್ ಮತ್ತು ಕೊಬ್ಬಿನ ಅಂಶಗಳು ಸಿಗುತ್ತವೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವಂತಹ ನುಗ್ಗೆಕಾಯಿ ಎಲೆಗಳು ಹಾಗೂ ಹೂಗಳು ಗಂಟಲು ಹಾಗೂ ಚರ್ಮದ ಸೋಂಕು ತಡೆಯಲು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಸಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ದೇಹದಲ್ಲಿ ಇರುವಂತಹ ಹಾನಿಕಾರಕ ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು.

ವಿಟಮಿನ್ ಸಿ ಅಧಿಕವಾಗಿರುವಂತಹ ನುಗ್ಗೆಕಾಯಿಯು ಕೆಲವೊಂದು ಸಾಮಾನ್ಯ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ. ಇದರಲ್ಲಿ ಮುಖ್ಯವಾಗಿ ಕಾಡುವಂತಹ ಶೀತ, ಜ್ವರ ಹಾಗೂ ಗಂಟಲು ನೋವಿನ ಸಮಸ್ಯೆ ನಿವಾರಣೆ ಆಗುವುದು. ನುಗ್ಗೆಕಾಯಿ ಸೂಪ್ ಮಾಡಿಕೊಂಡು ಕುಡಿದರೆ ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆದು ಕೊಳ್ಳಬಹುದು. ನುಗ್ಗೆಕಾಯಿಯಲ್ಲಿ ಚಿಕಿತ್ಸಕ ಗುಣವಿದೆ ಮತ್ತು ಇದು ಅಸ್ತಮಾ, ಉಬ್ಬರ ಮತ್ತು ಶ್ವಾಸಕೋಶದ ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವುದು.

Leave A Reply

Your email address will not be published.