ಸಾಮಾನ್ಯವಾಗಿ ನಾವು ನೀವು ಕೇಳಿರುವಂತೆ ನಾವು ದಿನಕ್ಕೊಂದು ಸೇಬು ಹಣ್ಣು ಸೇವಿಸಿದರೆ ನಮ್ಮನ್ನು ಹೃದ್ರೋಗ ವೈದ್ಯರಿಂದ ದೂರ ಇಟ್ಟುಕೊಳ್ಳಬಹುದು ಎಂದು. ಆದರೆ ದಿನಕ್ಕೊಂದು ಮೊಟ್ಟೆ ಇದನೆಲ್ಲಾ ಮೀರಿ ನಮ್ಮ ದೇಹದಸಂಪೂರ್ಣ ಗುಣಮಟ್ಟವನ್ನು ಹೆಚ್ಚಿಸಿ ನಮ್ಮನ್ನು ಎಲ್ಲಾ ರೀತಿಯ ವೈದ್ಯರುಗಳಿಂದ ದೂರವಿಡುತ್ತದೆ ಎಂಬ ಸತ್ಯ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಮೊಟ್ಟೆಯಲ್ಲಿ ಅಂತಹ ದೇಹಕ್ಕೆ ಸಹಕಾರಿಯಾದ ಮತ್ತು ದೇಹದ ಎಲ್ಲಾ ಅಂಗಗಳ ಆರೋಗ್ಯವನ್ನು ಒಂದೇ ರೀತಿಯಲ್ಲಿ ಉತ್ತಮಗೊಳಿಸುವ ಶಕ್ತಿ ಇದೆ. ಮೊಟ್ಟೆ ಪ್ರೊಟೀನ್‌ ನಿಂದ ತುಂಬಿದ ಉತ್ತಮವಾದ ಪೌಷ್ಟಿಕ ಆಹಾರವಾಗಿದೆ. ಆದರೆ ದುಡ್ಡಿನ ಆಸೆಗಾಗಿ ಕೆಲವೆಡೆ ನಕಲಿ ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಲಿದ್ದಾರೆ ಎನ್ನಲಾಗುತ್ತಿದೆ. ಅದರ ಬಗ್ಗೆ ಹಲವಾರು ವರದಿಗಳು ಸಹ ಬಂದಿವೆ. ಅಸಲಿ ಮೊಟ್ಟೆಯಂತೆ ಕಾಣುವ ಇದು ಆರೋಗ್ಯಕ್ಕೆ ಮಾರಕವಾಗಿದೆ. ಆದರೆ ಒಂದು ಬಾರಿ ನೋಡಿದ ಕೂಡಲೇ ಈ ಮೊಟ್ಟೆ ನಕಲಿಯೋ ಅಥವಾ ಅಸಲಿಯೋ ಎಂದು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ಆದುದರಿಂದ ಮೊಟ್ಟೆ ಸೇವನೆ ಮಾಡುವ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಹಾಗಿದ್ದರೆ ನಾವು ಸೇವಿಸುವ ಮೊಟ್ಟೆ ನಿಜವಾದದ್ದೋ ಅಥವಾ ನಕಲಿಯೋ ಎಂದು ಅದನ್ನು ಪತ್ತೆ ಮಾಡೋದು ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇದು ನಕಲಿ ಜಗತ್ತು ಇಲ್ಲಿ ನಾವು ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ನಕಲಿ . ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ ಕಂಡು ಬಂದ ಹಾಗೆ ನಕಲಿ ಮೊಟ್ಟೆ ಕೂಡ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ ಇದು ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಹಿಂದೆ ಕೂಡಾ ಕೃತಕ ಮೊಟ್ಟೆ ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿ ಒಬ್ಬನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು. ಆದರೆ ಇದರಿಂದ ಮಾರಕ ಆಗುವುದು ಮಾತ್ರ ಸಾಮಾನ್ಯ ಜನರ ಜೀವನಕ್ಕೆ. ಹಾಗಿದ್ದರೆ ಈ ಅಸಲಿ ನಕಲಿಯ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ? ಆದರೆ ನಮಗೆ ಅಷ್ಟು ಸುಲಭವಾಗಿ ಅಸಲಿ ಹಾಗೂ ನಕಲಿ ಯಾವುದು ಎಂಬುದನ್ನು ತಿಳಿಯುವುದು ಕಷ್ಟ. ಮೊಟ್ಟೆ ಸೇವಿಸುವ ಎಲ್ಲರೂ ಈ ವಿಚಾರದಲ್ಲಿ ಅತೀ ಜಾಗರೂಕತೆ ವಹಿಸಬೇಕು. ನಕಲಿ ಅಸಲಿ ಮೊಟ್ಟೆಗಳನ್ನು ಕಂಡು ಹಿಡಿಯುವುದು ಹೇಗೆ ನೋಡೋಣ.

ನಕಲಿ ಮೊಟ್ಟೆಯನ್ನು ಬೆಂಕಿಯ ಬಳಿ ತೆಗೆದುಕೊಂಡು ಹೋದ ಕೂಡಲೇ ಅದಕ್ಕೆ ಬೆಂಕಿ ಹತ್ತುತ್ತದೆ. ಯಾಕೆಂದರೆ ಅದು ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ನಕಲಿ ಮೊಟ್ಟೆಯನ್ನು ಕಂಡು ಹಿಡಿಯುವ ಒಂದು ಸುಲಭ ವಿಧಾನ ಎಂದರೆ ಅದರ ಹೊಳಪು. ಒಂದು ವೇಳೆ ಮೊಟ್ಟೆಯ ಮೇಲಿನ ಪದರ ಹೆಚ್ಚು ಹೊಳಪಿನಿಂದ ಕೂಡಿದ್ದರೆ ಅದು ನಕಲಿ ಎಂದು ಅರ್ಥ. ಯಾಕೆಂದರೆ ನಿಜವಾದ ಮೊಟ್ಟೆ ಹೊಳೆಯುವುದಿಲ್ಲ. ನಕಲಿ ಮೊಟ್ಟೆಯನ್ನು ಅಲ್ಲಾಡಿಸಿ ನೋಡಿದಾಗ ಅದರಿಂದ ಶಬ್ದ ಬರುತ್ತದೆ. ಆದರೆ ಅಸಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಶಬ್ದ ಬರುವುದಿಲ್ಲ. ನಕಲಿ ಮೊಟ್ಟೆ ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಮೊಟ್ಟೆಯನ್ನು ಒಮ್ಮೆ ಕೈಯಲ್ಲಿ ಸ್ವಲ್ಪ ಒತ್ತಿ ನೋಡಿ. ಅದು ತುಂಬಾ ಗಟ್ಟಿ ಆಗಿದ್ದರೆ ಅದು ನಕಲಿ. ಯಾಕೆಂದರೆ ಅಸಲಿ ಮೊಟ್ಟೆಯ ಪದರ ಸ್ಮೂತ್ ಆಗಿರುತ್ತದೆ. ಮೊಟ್ಟೆಯನ್ನು ಒಡೆದು ಸ್ವಲ್ಪ ಸಮಯ ಬಿಟ್ಟಾಗ ಬಿಳಿ ಮತ್ತು ಹಳದಿ ದ್ರವ ಜೊತೆಯಾಗಿ ಮಿಕ್ಸ್ ಆದರೆ ಅದು ನಕಲಿ ಮೊಟ್ಟೆ. ಈ ಎರಡು ದ್ರವಗಳನ್ನು ಒಂದೇ ಕೆಮಿಕಲ್ ಬಳಸಿ ಮಾಡುವುದರಿಂದ ಅವೆರಡು ಬೇಗನೆ ಮಿಕ್ಸ್ ಆಗುತ್ತವೆ.. 

ಆರ್ಟಿಫಿಷಿಯಲ್ ಆಗಿ ತಯಾರಿಸಿರುವ ಈ ನಕಲಿ ಮೊಟ್ಟೆಗಳನ್ನು ಸೇವಿಸಿದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮಕ್ಕಳಿಗಂತೂ ಈ ನಕಲಿ ಮೊಟ್ಟೆ ಅನ್ನು ಅಂದರೆ ಪ್ಲಾಸ್ಟಿಕ್ ಮೊಟ್ಟೆಯನ್ನು ತಿನ್ನಿಸಬಾರದು ಆದ ಕಾರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಸ್ತುಗಳು ಹೆಚ್ಚಿನ ಪದಾರ್ಥಗಳು ನಕಲಿ ಆಗುತ್ತಿರುವ ಕಾರಣ. ಕಲಬೆರಕೆ ಆಗುತ್ತಿರುವ ಕಾರಣ ಆದಷ್ಟು ಜಾಗರೂಕತೆಯಿಂದ ಗ್ರಾಹಕರು ಇದ್ದರೆ ಒಳ್ಳೆಯದು

Leave a Reply

Your email address will not be published. Required fields are marked *