ನಾವು ಆರೋಗ್ಯವಂತರಾಗಿ ಇರಬೇಕು ಯಾವುದೇ ಅನಾರೋಗ್ಯ ಬರದೆ ಇರಲಿ ಅಂತ ನಮ್ಮ ಉತ್ತಮ ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲಾ ಶ್ರಮ ಪಡುತ್ತೇವೆ! ಆದರೂ ಈಗಿನ ಕಾಲದಲ್ಲಿ ನಾವು ಉತ್ತಮ ಆರೋಗ್ಯವನ್ನು ಹಿಂಡುವುದು ಸ್ವಲ್ಪ ಕಷ್ಟದ ವಿಷಯ. ಅದಕ್ಕೆ ಕಾರಣ ನಮ್ಮ ಈಗಿನ ಜೀವನ ಶೈಲಿ ಇರಬಹುದು ಆಹಾರ, ವಿಹಾರ, ನೀರು ಹಾಗೂ ಈಗಿನ ವಾತಾವರಣವು ಸಹ ಆರೋಗ್ಯ ಕೆಡಲು ಕಾರಣ ಆಗಿರುತ್ತದೆ. ನಮ್ಮ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳ ಕೊರತೆಯಿಂದ ನಿಶ್ಯಕ್ತಿ ಉಂಟಾಗುವುದು. ನಮಗೆ ತಿಳಿದೇ ಇರುವುದಿಲ್ಲ ಕೆಲವೊಮ್ಮೆ ಪ್ರತಿ ನಿತ್ಯ ನಾವು ಕುಡಿಯುವ ನೀರಿನಿಂದ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನ ಇದೆ ಎನ್ನುವುದು. ದಿನ ನಿತ್ಯದ ಇತರ ಉಪಯೋಗಕ್ಕೆ ಮನುಷ್ಯನಿಗೆ ನೀರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುದಿಯಲು ಕೂಡಾ. ನಾವು ಒಂದು ದಿನ ಊಟ ಇಲ್ಲದೆಯೂ ಇರಬಹುದು ಆದರೆ ದಿನದಲ್ಲಿ ಒಂದು ಹೊತ್ತು ನೀರು ಇಲ್ಲ ಅಂದರೆ ನಾವು ಬದುಕಲು ಸಾಧ್ಯವಿಲ್ಲ. ನೀರು ನಮ್ಮ ದೇಹಕ್ಕೆ ಅಷ್ಟೊಂದು ಅತ್ಯಾವಶ್ಯಕ ಆಗಿದೆ.
ಡಾಕ್ಟರ್ ಗಳ ಪ್ರಕಾರ ಒಂದು ದಿನಕ್ಕೆ ಒಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಕನಿಷ್ಟ ಪಕ್ಷ ಮೂರು ಲೀಟರ್ ನೀರನ್ನು ಕುಡಿಯಬೇಕು. ಆದರೆ ದಿನಕ್ಕೆ ಮೂರು ಲೀಟರ್ ನೀರು ಕುಡಿಯಬೇಕು ಅಂದರೆ ಕೆಲವರಿಗೆ ಹೇಗೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎನ್ನುವುದು ತಿಳಿಯದೆ ಒಟ್ಟಾರೆಯಾಗಿ ನೀರು ಕುಡಿದು ಮುಗಿಸುತ್ತಾರೆ. ಒಂದೇ ಸಲಕ್ಕೆ ಇಂದು ಲೀಟರ್ ನೀರನ್ನು ಕುಡಿಯುವುದಕ್ಕಿಂತ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಷ್ಟಷ್ಟು ಮಾತ್ರ ನೀರನ್ನು ಕುಡಿದರೆ ಒಳ್ಳೆಯದು.
ಇನ್ನೂ ನಾವು ಯಾವ ಯಾವ ಸಮಯದಲ್ಲಿ ನೀರನ್ನು ಕುಡಿಯಬೇಕು ಅಂತ ನೋಡೋದಾದ್ರೆ, ಬೆಳಿಗ್ಗೆ ಎದ್ದು ಬ್ರಷ್ ಮಾಡಿ ಆದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರನ್ನು ಕುಡಿಯಬೇಕು. ಅದರಲ್ಲೂ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಬಹಳ ಉತ್ತಮ. ಆರೋಗ್ಯದಲ್ಲಿ ಯಾವುದೇ ಏರು ಪೇರು ಸಹ ಆಗಲ್ಲ. ಊಟಕ್ಕೆ ಅರ್ಧ ಗಂಟೆ ಮೊದಲು ನೀರನ್ನು ಕುಡಿಯಬೇಕು. ಇದರಿಂದ ಹಸುವು ಹೆಚ್ಚಾಗಿ, ಸರಿಯಾಗಿ ಊಟ ಸೇರುತ್ತದೆ ಹಾಗೂ ಜೀರ್ಣ ಕ್ರಿಯೆಗೆ ಸಹ ಸಹಾಯ ಆಗುತ್ತದೆ. ಹೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ ಹಾಗಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು.
ಹೆಚ್ಚು ದಣಿವಾದಾಗ ವಿಶ್ರಾಂತಿ ಪಡೆಯಲು ಸಮಯ ಇಲ್ಲದೆ ಇದ್ದಾಗ ಒಂದು ಲೋಟ ನೀರನ್ನು ಕುಡಿದರೆ, ಆಗ ಸ್ವಲ್ಪ ಸಮಾಧಾನ ಆಗುತ್ತದೆ ಅಲ್ಲದೆ ಮೆದುಳಿಗೂ ಸಹ ಉತ್ತೇಜನ ಸಿಗುತ್ತದೆ. ಹಾಗೆಯೇ, ವ್ಯಾಯಾಮ ಮಾಡುವ ಮೊದಲು ಮತ್ತು ವ್ಯಾಯಾಮದ ನಂತರ ಎರಡರಿಂದ ಮೂರು ಲೋಟ ನೀರನ್ನು ಕುಡಿಯುವುದರಿಂದ ಬಹಳ ಒಳ್ಳೆಯದು. ತುಂಬಾ ಹಸಿವಾದಾಗ ಒಂದು ಲೋಟ ನೀರು ಕುಡಿಯಬೇಕು. ಒಂದೇ ಬಾರಿಗೆ ನೀರು ಕುಡಿಯುವ ಬದಲು ಸ್ವಲ್ಪ ಸಮಯ ತೆಗೆದುಕೊಂಡು ನೀರನ್ನು ಕುಡಿಯಬೇಕು. ಇದರಿಂದ ದೇಹ ಚಟುವಟಿಕೆಯಿಂದ ಇರುವಂತೆ ಮಾಡಬಹುದು.
ಒಂದೇ ಬಾರಿಗೆ ಲೀಟರ್ ಅಷ್ಟು ನೀರು ಕುಡಿಯುವ ಬದಲು ದಿನದಲ್ಲೂ ಸಮಯ ಮಾಡಿಕೊಂಡು ಆಗಾಗ ನೀರನ್ನು ಕುಡಿಯುತ್ತಾ ಇದ್ದರೆ ನಮ್ಮ ದೇಹಕ್ಕೆ ಬಹಳ ಉತ್ತಮ. ನಮ್ಮ ದೇಹದಲ್ಲಿ ಆರೋಗ್ಯ ಜೀರ್ಣ ಆಗಲು ನೀರು ತುಂಬಾ ಮುಖ್ಯ. ಹಾಗೂ ದೇಹದ ಇತರ ಕಲ್ಮಶಗಳನ್ನು ಹೊರ ಹಾಕಲು ಸಹ ನೀರು ಬೇಕೆ ಬೇಕು. ದೇಹ ಸದಾಕಾಲ ಚಟುವಟಿಕೆಯಿಂದ ಇರಲು ನಾವು ಆಗಾಗ ನೀರನ್ನು ಕುಡಿಯುತ್ತಲೇ ಇರಬೇಕು. ನಮ್ಮ ದೇಹಕ್ಕೆ ಊಟಕ್ಕಿಂತ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಸರಿಯಾದ ಸಮಯದಲ್ಲಿ ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.