ನಮ್ಮ ಮನೆಯಲ್ಲಿ ಬೇಕಾದಷ್ಟು ಸೊಪ್ಪುಗಳಿರುತ್ತವೆ. ಆದರೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಕಹಿಬೇವನ್ನು ಯುಗಾದಿ ಹಬ್ಬಕ್ಕೆ ಮಾತ್ರ ಬಳಸುತ್ತಾರೆ ಎಂದು ಕೆಲವರು ತಿಳಿದಿದ್ದಾರೆ. ಇದರ ಪ್ರಯೋಜನ ಬಹಳ ಇದೆ. ಹಾಗೆಯೇ ನಾವು ಕಹಿಬೇವಿನ ಪ್ರಯೋಜನದ ಬಗ್ಗೆ ತಿಳಿಯೋಣ.

ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ ಅವಶ್ಯವಿರುವ ಅನೇಕ ರೀತಿಯ ಔಷಧೀಯ ಗುಣಗಳು ಇರುತ್ತವೆ ಎಂದು ಕೆಲವರಿಗೆ ಗೊತ್ತಿಲ್ಲ. ಬೇವಿನ ರಸದಲ್ಲಿರುವ ಕಹಿ ಅಂಶದಿಂದ ಇದನ್ನು ಬಳಸಲು ಜನರು ಹಿಂದೆ ಮುಂದೆ ನೋಡುತ್ತಾರೆ. ಬೇವು ಬ್ಯಾಕ್ಟೀರಿಯಾ ವಿರೋಧಿ ಹಾಗೂ ಶಿಲೀಂಧ್ರ ವಿರೋಧಿ ಗುಣ ಹೊಂದಿರುತ್ತದೆ. ಬೇವಿನ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಸೋಂಕುಗಳ ಅಪಾಯವನ್ನು ತಡೆಯಬಹುದು. ಬೇವಿನ ಸೊಪ್ಪಿನಲ್ಲಿ ಬೇಯಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ರೋಗ ರುಜಿನಗಳು ನಮ್ಮ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ. ಬೇವಿನ ರಸ ಕುಡಿಯುವುದರಿಂದ ರಕ್ತ ಶುದ್ಧಿಗೊಂಡು ಯಾವುದೇ ಸೋಂಕುಗಳು ತಾಗುವುದಿಲ್ಲ.

ಕೆಲವರಿಗೆ ಬೇವಿನ ಸೊಪ್ಪು ತಂದು ಅದರ ರಸ ಮಾಡುವುದು ಕಷ್ಟವಾಗುತ್ತದೆ. ನಗರ ಪ್ರದೇಶಗಳಲ್ಲಿ ಇದು ಸಿಗುವುದು ಕಷ್ಟ. ಆದ್ದರಿಂದ ಮಾರುಕಟ್ಟೆಯಲ್ಲಿ ಇದು ಸಿಗುತ್ತದೆ. ಬೇವಿನ ರಸವೇ ರೆಡಿಮೇಡ್ ಸಿಗುತ್ತದೆ.

ಉದರ ಹಾಗೂ ಕರುಳನ್ನು ಶುದ್ದೀಕರಿಸುತ್ತದೆ. ದಿನನಿತ್ಯ ಬೇವಿನ ರಸವನ್ನು ಸೇವಿಸುವುದರಿಂದ ಕರುಳು ಮತ್ತು ಉದರ ಶುದ್ಧವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಅಂಶಗಳನ್ನು ಹೆಚ್ಚಿಸುತ್ತದೆ.ಚರ್ಮಕ್ಕೆ ಇದು ರಾಮಬಾಣ. ಕಾಣಿಸಿಕೊಳ್ಳುವ ಯಾವುದೇ ರೀತಿಯ ಚರ್ಮರೋಗವನ್ನು ಇದರಿಂದ ನಿವಾರಿಸಿಕೊಳ್ಳಬಹುದು. ಮೊಡವೆ ಕಲೆಗಳು ಸಹ ಗುಣವಾಗುತ್ತದೆ.

ಇದು ಕಣ್ಣಿಗೆ ಆರಾಮದಾಯಕ. ಕಣ್ಣಿಗೆ ಧೂಳಿನಿಂದಾದ ನೋವನ್ನು ಬೇವಿನ ರಸ ಹಾಕುವುದರಿಂದ ಕಡಿಮೆ ಆಗುತ್ತದೆ. ಹಾಗೇಯೇ ಕಣ್ಣುಗಳನ್ನು ತಂಪಾಗಿರಿಸುತ್ತದೆ. ದೇಹದಲ್ಲಿ ರಕ್ತ ಸಂಚಾರ ಸುಗಮ ಆಗುವಂತೆ ಮಾಡುತ್ತದೆ. ಮಧುಮೇಹಿಗಳಿಗೆ ಬೇವಿನ ರಸ ತುಂಬಾ ಸಹಕಾರಿಯಾಗಿದೆ. ಮಧುಮೇಹಿಗಳಿಗೆ ದೇಹದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ. ಬೇವು ಮಲೇರಿಯಾದಂತಹ ಕಾಯಿಲೆ ಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ದೇಹದಲ್ಲಿ ವೈರಸ್ ಬೆಳವಣಿಗೆಯನ್ನು ತಗ್ಗಿಸಿ ಲಿವರನ್ನು ಚೆನ್ನಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.ಗರ್ಭದ ವ್ಯವಸ್ಥೆಯಲ್ಲಿ ಜನನೇಂದ್ರಿಯದಲ್ಲಿ ಕಾಣಿಸಿಕೊಳ್ಳುವಂತಹ ನೋವನ್ನು ಇದು ಕಡಿಮೆ ಮಾಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಬೇವು ತಿನ್ನಲು ಕಹಿಯಾದರೂ ಗುಣಗಳಲ್ಲಿ ಅಮೃತ ಎಂದು ಹೇಳಬಹುದಾಗಿದೆ. ಆದ್ದರಿಂದ ಇದನ್ನು ದಿನನಿತ್ಯ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!