ಮನೆಯಲ್ಲಿ ಅರಿಸಿನದಿಂದ ಗಣೇಶಮೂರ್ತಿ ಮಾಡುವ ಸರಳ ವಿಧಾನ ಇಲ್ಲಿದೆ

0 170

ಗಣೇಶನ ಮೂರ್ತಿಯನ್ನು ನಾವು ಎಲ್ಲಾ ಕಡೆಗಳಲ್ಲಿ ನೋಡುತ್ತೇವೆ. ಏಕೆಂದರೆ ಯಾವುದೇ ಕಾರ್ಯಗಳನ್ನು ಕೈಗೊಳ್ಳುವಾಗ ಮೊದಲು ಗಣಪತಿಯನ್ನು ನೆನೆಯಲಾಗುತ್ತದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿ ಮತ್ತು ಕಛೇರಿಗಳಲ್ಲಿ ಹಾಗೂ ಕೆಲವೊಂದು ವ್ಯವಹಾರಗಳನ್ನು ಮಾಡುವವರು ಗಣಪತಿಯ ಮೂರ್ತಿಯನ್ನು ತಮ್ಮ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆಯೇ ನಾವು ಇಲ್ಲಿ ಅರಿಶಿನ ಬಳಸಿ ಗಣಪತಿ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಮೊದಲು ಒಂದು ಕಪ್ ಮೈದಾಹಿಟ್ಟನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಒಂದು ಕಪ್ ಅರಿಶಿನವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅದಕ್ಕೆ ಸಕ್ಕರೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ಹರಳಿನ ಸಕ್ಕರೆ ಇದ್ದರೆ ಅದನ್ನು ಪುಡಿ ಮಾಡಿಕೊಳ್ಳಬೇಕು. ಇಲ್ಲವೇ ರೆಡಿಮೇಡ್ ಸಕ್ಕರೆ ಪುಡಿಯನ್ನು ಬೇಕಾದರೂ ಬಳಸಬಹುದು. ಅರಿಶಿನದ ಗಣಪತಿಯನ್ನು ಮಾಡುವ ವಿಧಾನವೆಂದರೆ ಒಂದು ದೊಡ್ಡ ಬೌಲನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಒಂದು ಕಪ್ ಮೈದಾಹಿಟ್ಟು, ಒಂದು  ಕಪ್ ಅರಿಶಿನ ಮತ್ತು ಎರಡು ಚಮಚ ಸಕ್ಕರೆ ಪುಡಿಯನ್ನು ಹಾಕಬೇಕು. ಇದನ್ನು ಚೆನ್ನಾಗಿ  ಕಲಸಿಕೊಳ್ಳಬೇಕು.

ಅದಕ್ಕೆ ನೀರನ್ನು ಹಾಕಿಚೆನ್ನಾಗಿ ಮಿಶ್ರಣ ಮಾಡಿ ಗಣಪತಿ ಮೂರ್ತಿ ಮಾಡಲು ಬೇಕಾದ ಎಲ್ಲಾ ಭಾಗಗಳನ್ನು ಮಾಡಿಕೊಳ್ಳಬೇಕು. ನಂತರದಲ್ಲಿ ಒಂದು ಕಪ್ ಮೈದಾಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಸಿರು ಬಣ್ಣವನ್ನು ಹಾಕಬೇಕು. ನಂತರ ನೀರನ್ನು ಹಾಕಿ ಚೆನ್ನಾಗಿ ಕಲಸಬೇಕು. ಇದನ್ನು ಅಶ್ವಥ್ ಎಲೆಯ ಆಕಾರದಂತೆ ಮಾಡಬೇಕು. ನಂತರ ಇದರ ಮೇಲೆ ಮೊದಲು ಮಾಡಿಟ್ಟುಕೊಂಡ ಅರಿಶಿನದ ಮಿಶ್ರಣದ ಭಾಗಗಳನ್ನು ಗಣಪತಿ ಆಕಾರ ಬರುವಂತೆ ಮಾಡುತ್ತಾಹೋಗಬೇಕು. ಹಾಗೆಯೇ ಅಶ್ವಥ್ ಎಲೆಯ ಆಕಾರದ ಇನ್ನೊಂದು ಸಣ್ಣ ಮಾದರಿಯನ್ನು ಮಾಡಿ ತಲೆಯ ಮೇಲೆ ಇಡಬೇಕು.

ನಂತರ ಮುಖಕ್ಕೆ ಕಣ್ಣನ್ನು ಮಾಡಬೇಕು. ಕೊನೆಯದಾಗಿ ಕಾಲಿನ ಉಗುರುಗಳ ಅಚ್ಚಿಗೆ ಕಡ್ಡಿಯಿಂದ ಗೆರೆಯನ್ನು ಎಳೆಯಬೇಕು. ನಂತರದಲ್ಲಿ ಪೇಟದಂತೆ ಮಾಡಿ ಅದಕ್ಕೆ ಕಾಪಿ ಬಣ್ಣವನ್ನು ಕೊಡಬೇಕು. ಸೊಂಡಿಲಿನ ಬುಡದಲ್ಲಿ ಕಡ್ಡಿಯನ್ನು ಕೊಂಬಿನಂತೆ ಹಾಕಬೇಕು. ಹಾಗೆಯೇ ಒಂದು ಪುಟ್ಟ ಇಲಿಯನ್ನು ಮಾಡಬೇಕು. ನಂತರದಲ್ಲಿ ಪುಟ್ಟ ಉಂಡೆಯನ್ನು ಮಾಡಿ ಅದಕ್ಕೆ ಬಿಳಿ ಬಣ್ಣವನ್ನು ಹಚ್ಚಿ ಕೈಯಲ್ಲಿ ಇಡಬೇಕು. ಹಾಗೆಯೇ ಹಣೆಗೆ ಬಿಳಿಯ ಬಣ್ಣದಿಂದ ವಿಭೂತಿಯಂತೆ ಹಚ್ಚಬೇಕು. ಕೊನೆಯದಾಗಿ ದಾರವನ್ನು ತೆಗೆದುಕೊಂಡು ಜನಿವಾರದಂತೆ ಹಾಕಬೇಕು. ಈಗ ಅರಿಶಿನದಿಂದ ತಯಾರಿಸಿದ ಗಣಪತಿ ಸಿದ್ಧವಾಗುತ್ತದೆ. ಇದು ನೋಡಲು ಬಹಳ ಆಕರ್ಷಣೀಯವಾಗಿರುತ್ತದೆ.

Leave A Reply

Your email address will not be published.