ಮಹಿಳೆಯರಲ್ಲಿ ಹೆಚ್ಚಾಗಿ ಗೋಚರಿಸುವಂತಹ ಈ ಬಂಗು ಸಮಸ್ಯೆಯು ಹೆಚ್ಚಾಗಿ ಮುಖದ ಮೇಲೆ ಮೂಗಿನ ಮೇಲೆ ಹಣೆಯ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಇದು ಎಲ್ಲ ವಯೋಮಾನದ ಮಹಿಳೆಯರಲ್ಲಿಯೂ ಸಹ ನಾವು ಕಾಣಬಹುದಾಗಿದೆ ಅಷ್ಟೇ ಅಲ್ಲದೇ ಈ ರೀತಿಯ ಬಂಗು ಮಹಿಳೆಯರಲ್ಲಿ ಮುಖದ ಅಂದವನ್ನು ಕೆಡಿಸುತ್ತದೆ, ಈ ಸಮಸ್ಯೆ ಇರುವವರು ಅನೇಕರು ಡಾಕ್ಟರ್ ಗಳ ಮೊರೆ ಹೋಗಿ ಔಷದಿಗಳನ್ನು ಹಚ್ಚಿಯೂ ಕೂಡ ಪರಿಹಾರ ಕಾಣದವರಿದ್ದಾರೆ ಆದರೆ ನಮ್ಮ ಮನೆಯಲ್ಲಿಯೇ ಮಾಡಬಹುದಾದ ಮನೆ ಮದ್ಧಿನಿಂದ ನಾವು ಮುಖದ ಮೇಲಿನ ಬಂಗನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದಾಗಿದೆ ಮೊಸರಿನಿಂದ ಹೀಗೆ ಮಾಡುವುದರಿಂದ ನಿಮ್ಮ ಬಂಗು ಅತೀ ಬೇಗ ಸುಧಾರಿಸುವುದರಲ್ಲಿ ಸಂಶಯವಿಲ್ಲ.
ಮೊಸರಿನಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಮತ್ತು ಉತ್ತಮ ಕ್ಯಾಲಾರಿ ಕೊಬ್ಬಿನಾಂಶ ಇರುವ ಕಾರಣ ಅದು ನಮ್ಮ ಮುಖಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮುಖವನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಮೊಸರಿನಿಂದ ಬಂಗನ್ನು ನಿವಾರಿಸಲು ಮಾಡಬಹುದಾದ ಮನೆ ಮದ್ಧಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಎರಡು ಚಮಚ ಮೊಸರಿನೊಂದಿಗೆ ಅರ್ಧ ಹೋಳು ಟೋಮ್ಯಾಟೊ ರಸವನ್ನು ಸೇರಿಸಿಕೊಳ್ಳಬೇಕು ನಂತರ ಹೀಗೆ ಮಿಶ್ರಣ ಮಾಡಿದ ರಸಕ್ಕೆ ಒಂದು ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ ಅದನ್ನೂ ಸಹ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು, ಹೀಗೆ ಮಾಡಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ರಬ್ ಮಾಡಿಕೊಳ್ಳಬೇಕು ನಂತರ ಅರ್ಧ ಗಂಟೆಗಳ ಕಾಲ ಅದನ್ನು ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು ವಾರದಲ್ಲಿ ಕನಿಷ್ಠ ಪಕ್ಷ ಮೂರು ಬಾರಿಯಾದರೂ ಹೀಗೆ ಮಾಡುವುದರಿಂದ ನಿಮ್ಮ ಮುಖದಮೇಲಿನ ಬಂಗು ಕ್ರಮೇಣ ಕಡಿಮೆಯಾಗುವುದಲ್ಲದೇ ನಿಮ್ಮ ಮುಖ ಕಾಂತಿಯುತವಾಗುತ್ತದೆ.