ಅಂದವಾಗಿ ಕಾಣಬೇಕು ಎನ್ನುವ ಪುರುಷರಿಗೆ ಮಾತ್ರ ಈ ಬ್ಯೂಟಿ ಟಿಪ್ಸ್

0 2

ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ತಮ್ಮ ಅಂದ ಚಂದದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಯಾಕಂದ್ರೆ ಜಗತ್ತಿಗೆ ತಮ್ಮನ್ನು ತಾವು ಚಂದವಾಗಿ ಕಾಣುವಂತೆ ತೋರಿಸಿಕೊಳ್ಳಲು ಮತ್ತು ಯಾರೂ ತಮ್ಮನ್ನು ಕುರೂಪಿ ಎನ್ನಬಾರದೆಂಬ ಕಾರಣಕ್ಕೆ ತಾವು ಸೌಂದರ್ಯವತಿಯಾಗಿ ಕಾಣಬೇಕೆಂಬ ಆಸೆಯಿಂದ ಹೀಗೆ ಮಾಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಂತೆ ಪುರುಷರೂ ಕೂಡ ತಮ್ಮ ಅಂದ ಚಂದವನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸುತ್ತಿದ್ದಾರೆ, ಮಹಿಳೆಯರಂತೆ ತಾವು ಕೂಡ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಂಡು ಜನರ ನಡುವೆ ಆಕರ್ಷಕವಾಗಿ ಕಾಣಲು ಮುಂದಾಗುತ್ತಿದ್ದಾರೆ.

ಮೊದಲೆಲ್ಲ ಮಹಿಳೆಯರು ಬಳಸುವ ಕ್ರೀಮ್ ಗಳನ್ನೇ ಪುರುಷರೂ ಕೂಡಾ ಬಳಸುತ್ತಿದ್ದರು ಯಾಕಂದ್ರೆ ಪುರುಷರಿಗಾಗಿ ಅಂದು ಪ್ರೇತ್ಯೇಕ ಕ್ರೀಮ್ ಗಳು ಇರುತ್ತಿರಲಿಲ್ಲ ಆದರೆ ಈಗ ಕಾಲ ಬದಲಾಗಿದೆ ಕಾಲ ಬದಲಾಗುತ್ತಾ ಹೋದಂತೆಲ್ಲಾ ಮಾರುಕಟ್ಟೆಯಲ್ಲಿ ಪುರುಷರಿಗೂ ಕೂಡಾ ಪ್ರತ್ಯೇಕ ಕ್ರೀಮ್ ಗಳು ಲಭ್ಯವಿವೆ, ಯಾಕಂದ್ರೆ ಮಹಿಳೆಯರ ಚರ್ಮಕ್ಕಿಂತ ಪುರುಷರ ಚರ್ಮ ಶೇಕಡಾ ಮೂವತ್ತು ಪಟ್ಟು ಹೆಚ್ಚು ಗಡುಸುತನವನ್ನು ಹೊಂದಿರುವ ಕಾರಣದಿಂದಾಗಿ ಮಹಿಳೆಯರ ಕ್ರೀಮ್ ಗಳನ್ನು ಪುರುಷರು ಬಳಸುವುದರಿಂದ ಅದು ಪುರುಷರ ಚರ್ಮಕ್ಕೆ ಯಾವುದೇ ಉಪಯೋಗವಿಲ್ಲ ಪುರುಷರಲ್ಲಿ ಟೆಸ್ಟೋಸ್ಟಿರಾನ್ ಗ್ರಂಥಿಯ ಕಾರಣದಿಂದಾಗಿ ಪುರುಷರ ಮುಖವು ಮಹಿಳೆಯರಿಗಿಂತಾ ಗಡುಸಾಗಿರುತ್ತದೆ ಅಲ್ಲದೇ ಪುರುಷರ ಚರ್ಮವು ಮಹಿಳೆಯರಿಗಿಂತ ಹೆಚ್ಚು ಕಾಲಾಜನ್ ಬಿಡುಗಡೆ ಮಾಡುತ್ತದೆ.

ಈ ಎಲ್ಲಾ ಕಾರಂಗಳಿಂದಾಗಿ ನಾವು ಹೇಳುವ ಕೆಲವು ಬ್ಯೂಟಿ ಟಿಪ್ಸ್ ಗಳನ್ನು ಪುರುಷರು ತಾವು ಮನೆಯಲ್ಲಿಯೇ ಮಾಡಿ ಉಪಯೋಗಿಸುವುದರಿಂದ ತಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚ್ಜಿಸಿಕೊಳ್ಳಬಹುದು, ಬನ್ನಿ ಹಾಗಾದ್ರೆ ಪುರುಷರಿಗಾಗಿಯೇ ನಾವು ಹೇಳುವಂತಹ ಬ್ಯೂಟಿ ಟಿಪ್ಸ್ ಗಳನ್ನು ತಯಾರಿಸುವ ಮತ್ತು ಉಪಯೋಗಿಸುವ ವಿಧಾನಗಳನ್ನು ಮತ್ತು ಅದರಿಂದ ಪುರುಷರ ಚರ್ಮಕೆ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ಒಂದು ಚಮಚ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದನ್ನು ತಮ್ಮ ಮುಖಕ್ಕೆ ಲೇಪಿಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ಬಿಟ್ಟು ನಂತರ ಅದನ್ನು ಶುದ್ಧವಾದ ಅಥವಾ ತಂಪಾದ ನೀರಿನಿಂದ ತೊಳೆಯುವುದರಿಂದ ಪುರುಷರ ಮುಖದ ಕಾಂತಿ ಹೆಚ್ಚುತ್ತದೆಯಲ್ಲದೆ ತಾವು ಅಂದವಾಗಿ ಕಾಣುವಂತೆ ಮಾಡುತ್ತದೆ ವಾರದಲ್ಲಿ ಮೂರು ಬಾರಿಯಾದರೂ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ನೀವು ಕಾಣಬಹುದಾಗಿದೆ

ಅಲ್ಲದೇ ಆಲೀವ್ ಆಯಿಲ್ ಎರಡು ಚಮಚ ಜೊತೆಗೆ ಸ್ವಲ್ಪ ವಿನೇಗರ್ ಸೇರಿಸಿ ಅದನ್ನು ಮುಖಕ್ಕೆ ಹಚ್ಚಿ ಮಸ್ಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಅದನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಪುರುಶರ ಚರ್ಮಕ್ಕೆ ಪುಷ್ಟಿ ಸಿಗುತ್ತದೆ ಮತ್ತು ಚರ್ಮವನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ ವಾರಕ್ಕೆ ಒಂದು ಬಾರಿಯಾದರೂ ಹೀಗೆ ಮಾಡುವುದರಿಂದ ನಿಮ್ಮ ಮುಖದ ಹೊಳಪು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ

ಅದರೊಂದಿಗೆ ಇನ್ನೊಂದು ಸುಲಭ ಉಪಾಯ ಎಂದರೆ ಒಂದು ಚಮಚ ಕಡಲೆ ಹಿಟ್ಟನ್ನು ಒಂದು ಬೌಲ್ ನಲ್ಲಿ ಹಾಕಿಕೊಂಡು ಅದಕ್ಕೆ ಒಂದು ಚಮಚ ಮೊಸರನ್ನು ಸೇರಿಸಿ ಅದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ ನಂತರ ಅದಕ್ಕೆ ಒಂದು ಚಮಚ ಟೋಮ್ಯಾಟೊ ಹಣ್ಣಿನ ರಸವನ್ನು ಸೇರಿಸಿ ಜೊತೆಗೆ ಒಂದೆರಡು ಚಿಟಿಕೆ ಅರಿಶಿನದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಈ ರೀತಿ ಮಾಡಿಕೊಂಡ ಮಿಶ್ರಣವನ್ನು ಪ್ರತಿ ದಿನ ಒಂದು ಬಾರಿ ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷಗಳ ಕಾಲ ಬಿಟ್ಟು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳುವುದರಿಂದ ಪುರುಷರ ಮುಖದ ಬಣ್ಣ ತಿಳಿಯಾಗಿತ್ತದೆ ಅಲ್ಲದೇ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ

Leave A Reply

Your email address will not be published.