ಜನರು ಮುಖದ ಅಂದಕ್ಕೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ ಯಾರೂ ಸಹ ಕುರೂಪಿಯನ್ನು ಇಷ್ಟ ಪಡುವುದಿಲ್ಲ ಅಲ್ಲದೆ ಕೆಲವರಂತೂ ಕುರೂಪಿ ವ್ಯಕ್ತಿಗಳನ್ನು ವರಿಸಲೂ ಸಹ ನಿರಾಕರಿಸುತ್ತಾರೆ, ಅಷ್ಟೇ ಅಲ್ಲದೇ ನಮ್ಮ ಸುತ್ತ ಮುತ್ತಲಿನ ಸಮಾಜ ಬೆಳ್ಳಗಿರುವವರ ಮುಖಕ್ಕೆ ಕೊಡುವ ಬೆಲೆಯೇ ಬೇರೆ ಕಪ್ಪಗಿರುವವರ ಮುಖಕ್ಕೆ ಕೊಡುವ ಬೆಲೆಯೇ ಬೇರೆ ಆದ್ದರಿಂದ ಎಂತಹ ಕಪ್ಪಗಿರುವವರೂ ಸಹ ತಾವು ಬೆಳ್ಳಗಾಗಬೇಕೆಂದು ಬಯಸುತ್ತಾರೆ ಅವರು ಬಯಸುವುದೇನೂ ತಪ್ಪಲ್ಲ ಬಿಡಿ ಅಷ್ಟೇ ಅಲ್ಲದೇ ಜನರು ತಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಆದರೆ ನೈಸರ್ಗಿಕವಾಗಿ ನಿಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳುವಂತಹ ಯಾವುದೇ ಕ್ರೀಮ್ ಗಳು ಇಂದಿಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಬಿಡಿ ಅಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳ ಉಪಯೋಗಕ್ಕಿಂತ ಅಡ್ಡ ಪರಿಣಾಮಗಳೇ ಹೆಚ್ಚು ಆದ್ದರಿಂದ ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್ ಗಳನ್ನು ತಾವು ಬೆಳ್ಳಗಾಗಬೇಕೆಂದು ಬಳಸಬೇಡಿ ಅದರ ಬದಲಾಗಿ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಬಹುದಾದಂತಹ ಮನೆ ಮದ್ಧುಗಳನ್ನು ಬಳಸುವುದರ ಮೂಲಕ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಮುಖದ ಬಣ್ಣವನ್ನು ಬೆಳ್ಳಗಾಗಿಸಿಕೊಳ್ಳಿ

ನಾವು ದಿನನಿತ್ಯ ತಿನ್ನುವ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಅಂತಹದ್ದೊಂದು ಶಕ್ತಿ ಇದೆ ಹೌದು ನಾವು ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ಮಾತ್ರ ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ ಆದರೆ ಆ ಸಿಪ್ಪೆಯಲ್ಲಿರುವ ಲಾಭಗಳು ನಿಮಗೆ ಗೊತ್ತಾದರೆ ನೀವು ಎಂದಿಗೂ ಆ ಸಿಪ್ಪೆಗಳನ್ನು ಬಿಸಾಡಲಾರಿರಿ ಹೌದು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಳಸಿ ನೀವು ನಿಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದಲ್ಲದೇ ನಿಮ್ಮ ಮುಖವನ್ನು ಮತ್ತಷ್ಟು ಕಾಂತಿಯುತವಾಗಿಡಲೂ ಬಹುದು ಹಾಗಾದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ತಯಾರಿಸಬಹುದಾದ ಮನೆ ಮದ್ದಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ಮೊದಲಿಗೆ ಕಿತ್ತಳೆ ಹಣ್ಣಿನಿಂದ ಬೇರ್ಪಡಿಸಿದ ಸಿಪ್ಪೆಗಳನ್ನು ಒಂದೆಡೆ ಹಾಕಿ ನೆರಳಿನಲ್ಲಿ ಒಣಗಿಸಿಕೊಳಬೇಕು ಹೀಗೆ ಒಣಗಿಸಿಕೊಂಡ ಕಿತ್ತಳೆ ಹಣ್ಣಿನ ಸಿಪ್ಪೆಗಳು ಮೆತ್ತಗಾಗಿರುತ್ತವೆ ಆದ್ದರಿಂದ ಒಣಗಿದ ಮೆತ್ತಗಾದ ಸಿಪ್ಪೆಗಳನ್ನು ಒಂದು ಮೈಕ್ರೋ ಒವನ್ ನಲ್ಲಿ ಇಟ್ಟು ಸ್ವಲ್ಪ ಒಣಗುವ ರೀತಿ ಬಿಸಿ ಮಾಡಿಕೊಳ್ಳಬೇಕು ನಂತರ ಒರಟಾದ ಒಣಗಿದ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಒಂದು ಮಿಕ್ಸಿ ಜಾರ್ ನಲ್ಲಿ ಹಾಕಿ ಅದನ್ನು ಚೆನ್ನಾಗಿ ರುಬ್ಬಿ ಪುಡಿ ಮಾಡಿಕೊಂಡು ಇಟ್ಟುಕೊಳ್ಳಬೇಕು

ಮೊದಲಿಗೆ ಒಂದು ಬೌಲ್ ನಲ್ಲಿ ಒಂದು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಮಾಡಿದ ಪೌಡರ್ ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಿಟಿಕೆ ಅರಿಸಿನದ ಪುಡಿ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು ನಂತರ ಈ ಪೇಸ್ಟ್ ಅನ್ನು ವಾರದಲ್ಲಿ ಮೂರು ಬಾರಿ ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮುಖವು ತಕ್ಷಣ ಬೆಳ್ಳಗಾಗುವುದಲ್ಲದೇ ಮುಖದ ಕಾಂತಿಯೂ ಕೂಡ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ

ಅದೇ ರೀತಿ ಒಂದು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ತಯಾರಿಸಿದ ಪೌಡರ್ ಗೆ ಒಂದು ಚಮಚ ಕಡಲೆ ಹಿಟ್ಟನ್ನು ಸೇರಿಸಿ ಐದರಿಂದ ಆರು ಚಮಚ ಹಾಲನ್ನು ಹಾಕಿ ಅದನ್ನು ಮಿಶ್ರಣ ಮಾಡಿಕೊಂಡು ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ರಬ್ ಮಾಡಿಕೊಂಡು ನಂತರ ಅದನ್ನು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮುಖವು ತಕ್ಷಣದಲ್ಲಿ ಕಾಂತಿಯುತವಾಗಿ ಕಾಣುತ್ತದೆ ಅಷ್ಟೇ ಅಲ್ಲದೇ ವಾರದಲ್ಲಿ ಎರಡರಿಂದ ಮೂರು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!