ಶೀತ ಕೆಮ್ಮು ನೆಗಡಿ ನಿವಾರಣೆಗೆ ಈ ಟೀ ಮಾಡಿ ಸವಿಯಿರಿ

0 1

ನೆಗಡಿ ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತದೆ. ನೆಗಡಿ ಆದರೆ ಬೇಗನೆ ಕಡಿಮೆ ಆಗುವುದಿಲ್ಲ. ಕೆಲವರಿಗೆ ಎರಡರಿಂದ ಮೂರು ದಿನಕ್ಕೆ ಕಡಿಮೆ ಆಗುತ್ತದೆ. ಆದರೆ ಇನ್ನು ಕೆಲವರಿಗೆ ಸುಮಾರು 15ದಿನಗಳ ಕಾಲ ಇರುತ್ತದೆ. ಆದ್ದರಿಂದ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ನೆಗಡಿ ಆದಾಗ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದರಿಂದ ಕಾಲಾಂತರದಲ್ಲಿ ಅಡ್ಡ ಪರಿಣಾಮಗಳು ಉಂಟಾಗುವ ಸಂಭವ ಹೆಚ್ಚು. ಆದ್ದರಿಂದ ನಾವು ಇಲ್ಲಿ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ನೆಗಡಿಯನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಎರಡು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಬೇಕು. ನಂತರ ಸ್ಟೋವ್ ಆನ್ ಮಾಡಿ ಇಡಬೇಕು. ಇದಕ್ಕೆ ಅರ್ಧ ಚಮಚ ಅರಿಶಿನ ಹಾಕಬೇಕು. ಅರಿಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದರಲ್ಲಿ ದೇಹದಲ್ಲಿ ಇರುವ ಕ್ರಿಮಿಗಳನ್ನು ಹೊರ ಹಾಕುವ ಶಕ್ತಿ ಇದೆ. ಮನೆಯಲ್ಲಿ ತಯಾರಿಸಿದ ಅರಿಶಿನ ಆದರೆ ಬಹಳ ಒಳ್ಳೆಯದು. ಹಾಗೆಯೇ ನಂತರದಲ್ಲಿ ಶುಂಠಿಯನ್ನು ಸಿಪ್ಪೆ ತೆಗದುಕೊಂಡು ಸುಮಾರು ಒಂದು ಇಂಚಿನಷ್ಟು ಕಲ್ಲಿನಲ್ಲಿ ಜಜ್ಜಿ ಹಾಕಬೇಕು. ಶುಂಠಿ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ನೆಗಡಿಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಂತರದಲ್ಲಿ 10 ರಿಂದ 15 ಕಾಳುಮೆಣಸನ್ನು ತೆಗೆದುಕೊಳ್ಳಬೇಕು. ಇದನ್ನು ಸಹ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಹಾಕಬೇಕು. ಇದು ದೇಹದಲ್ಲಿ ಉಷ್ಣತೆಯ ಪ್ರಮಾಣವನ್ನು ಕಾಪಾಡುತ್ತದೆ. ಹಾಗೆಯೇ ಚಕ್ಕೆಯನ್ನು ತೆಗೆದುಕೊಂಡು ಅದನ್ನು ಸಹ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಹಾಕಬೇಕು. ನಂತರದಲ್ಲಿ ಒಂದು ಚಮಚ ಬೆಲ್ಲವನ್ನು ಹಾಕಬೇಕು. ಚೆನ್ನಾಗಿ ಎಲ್ಲವೂ ಕುದ್ದಿದ ಮೇಲೆ ಗ್ಯಾಸ್ ಆಫ್ ಮಾಡಿ ಒಂದು ಲೋಟಕ್ಕೆ ಹಾಕಿ ಸೋಸಬೇಕು.

ಸ್ವಲ್ಪ ತಣ್ಣಗಾದ ನಂತರ ಇದಕ್ಕೆ ಲಿಂಬೆಹಣ್ಣನ್ನು ಕೊರೆದು ರಸವನ್ನು ಹಿಂಡಬೇಕು. ಈ ರೀತಿಯಲ್ಲಿ ಅರಿಶಿನ ಮತ್ತು ಶುಂಟಿಯ ಚಹಾವನ್ನು ಮಾಡಬಹುದು. ಇದನ್ನು ದಿನನಿತ್ಯ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕೆ ಹಾಕಿರುವ ಎಲ್ಲಾ ಸಾಮಗ್ರಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗೆಯೇ ನೆಗಡಿ ಆದಲ್ಲಿ ಬೇಗನೆ ವಾಸಿಯಾಗುತ್ತದೆ. ಕೆಮ್ಮು ಶೀತ ಯಾವುದೇ ಇದ್ದರೂ ಸಹ ಇದರಿಂದ ವಾಸಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹಾಗಾಗಿ ಇಂತಹವುಗಳನ್ನು ಕುಡಿಯುತ್ತಿದ್ದರೆ ಬಹಳ ಒಳ್ಳೆಯದು.

Leave A Reply

Your email address will not be published.