ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ಆಗುತ್ತದೆ. ನೆಗಡಿಯ ಹಾಗೆ ಒಣಕೆಮ್ಮು ಆಗುತ್ತದೆ. ಇದು ಅತಿಯಾಗಿ ಮುಂದುವರೆದರೆ ಸುಮಾರು ಧಮ್ಮಿನ ಲಕ್ಷಣಕ್ಕೆ ಹೋಗುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್ ದಿನನಿತ್ಯ ಆಹಾರದಲ್ಲಿ ಏನಾದರೂ ಬದಲಾವಣೆ ಆದರೆ ಉಂಟಾಗುತ್ತದೆ. ಆದ್ದರಿಂದ ನಾವು ಇಲ್ಲಿ ಒಣನೆಗಡಿ ಮತ್ತು ಕೆಮ್ಮನ್ನು ಮತ್ತು ಗ್ಯಾಸ್ಟ್ರಿಕ್ ನ್ನು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದಕ್ಕೆ ಹಲವಾರು ಸಾಮಗ್ರಿಗಳು ಬೇಕಾಗುತ್ತವೆ. ಅವುಗಳೆಂದರೆ ಮೊದಲು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ನಂತರದಲ್ಲಿ ಓಂಕಾಳನ್ನು ತೆಗೆದುಕೊಳ್ಳಬೇಕು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಇರುವ ಕಫವನ್ನು ಕರಗಿಸಿ ಚಳಿಯನ್ನು ಹೋಗಲಾಡಿಸುತ್ತದೆ. ಮೊದಲು ವೀಳ್ಯದೆಲೆಗೆ ಅರ್ಧ ಚಮಚ ಓಂಕಾಳನ್ನು ಹಾಕಬೇಕು.

ಇವೆಡನ್ನೇ ಬೇಕಾದರೂ ತಿನ್ನಬಹುದು. ಇಲ್ಲವಾದಲ್ಲಿ ರುಚಿಯಾಗಬೇಕು ಎಂದಾದರೆ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಬೇಕು. ಹಾಗೆಯೇ ಜೇನುತುಪ್ಪವನ್ನು ಭೂಮಿಯಲ್ಲಿ ಸಿಗುವ ಅಮೃತ ಎಂದು ಹೇಳಬಹುದು. ಇದನ್ನು ಪರಿಶುದ್ಧ ಇದ್ದಲ್ಲಿ ಮಾತ್ರ ಖರೀದಿ ಮಾಡಬೇಕು. ಹಾಗೆಯೇ ಸಕ್ಕರೆ ಖಾಯಿಲೆ ಇದ್ದವರು ಜೇನುತುಪ್ಪವನ್ನು ಬಳಕೆ ಮಾಡದೇ ಇದ್ದರೆ ಒಳ್ಳೆಯದು. ಇದನ್ನು ಕೊನೆಯದಾಗಿ ಕವಳದಂತೆ ಮಡಚಬೇಕು. ನಂತರ ಬಾಯಿಗೆ ಹಾಕಿ ಚೆನ್ನಾಗಿ ಅಗೆಯುತ್ತಾ ಅದರ ರಸವನ್ನು ತೆಗೆದುಕೊಳ್ಳಬೇಕು.

ದಿನಕ್ಕೆ ಮೂರು ಬಾರಿ ಇದನ್ನು ತಿನ್ನಬಹುದು. ಬೆಳಿಗ್ಗೆ ಮತ್ತು ಊಟ ಆದಮೇಲೆ ಮತ್ತು ರಾತ್ರಿ ಊಟ ಮಾಡಿ ಮಲಗುವಾಗ ತಿನ್ನಬೇಕು. ಹಾಗೆಯೇ ಚಿಕ್ಕ ಮಕ್ಕಳಿಗೆ ಬೇಕಾದರೂ ಕೊಡಬಹುದು. ಆದರೆ ಪ್ರಮಾಣವನ್ನು ಕಡಿಮೆ ಮಾಡಬೇಕು. ಓಂಕಾಳನ್ನು ಚೆನ್ನಾಗಿ ಜಜ್ಜಿ ಅದರ ರಸಕ್ಕೆ ಜೇನುತುಪ್ಪ ಹಾಕಿ ಕೊಡಬೇಕು. ಹಾಗೆಯೇ ಗ್ಯಾಸ್ಟ್ರಿಕ್ ಇದ್ದವರು ಕೂಡ ಇದನ್ನು ಸೇವನೆ ಮಾಡಿದರೆ ಬಹಳ ಬೇಗ ಮುಕ್ತಿ ಪಡೆಯಬಹುದು. ಹಾಗೆಯೇ ಕಾಳುಮೆಣಸು, ಜೀರಿಗೆ, ಶುಂಠಿ, ನಿಂಬೆಹಣ್ಣನ್ನು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Leave a Reply

Your email address will not be published. Required fields are marked *