ಹಲ್ಲಿಗಳು ಇಲ್ಲದಿರುವ ಜಾಗವೇ ಇಲ್ಲ. ಇವುಗಳನ್ನು ಸಾಯಿಸಲು ಮನಸು ಬರುವುದೇ ಇಲ್ಲ. ಆದರೆ ಇವುಗಳಿಂದ ಅಪಾಯವೇ ಜಾಸ್ತಿ. ಬಾಗಿಲು ತೆಗೆಯಲು ಹೋದರೆ ತಲೆಯ ಮೇಲೆ ಕಿಟಕಿ ತೆಗೆದರೆ ಕೈ ಮೇಲೆ ಬೀಳುತ್ತದೆ. ಆಹಾರದಲ್ಲಿ ಬಿದ್ದರೆ ಎನ್ನುವ ಚಿಂತೆ. ಇವು ಎಲ್ಲಾ ಕಡೆ ಓಡಾಡುತ್ತವೆ. ಆಹಾರಪದಾರ್ಥಗಳ ಮೇಲೆ ಹರಿದರೆ ಬಹಳ ಹಾನಿಕರ. ನಾವು ಇಲ್ಲಿ ಹಲ್ಲಿಗಳನ್ನು ಮನೆಯಿಂದ ಓಡಿಸುವ ಸುಲಭದ ವಿಧಾನವನ್ನು ತಿಳಿಯೋಣ.

ಮೊದಲು 15 ರಿಂದ 20 ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು. ನಂತರ 10 ರಿಂದ 15 ಲವಂಗಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಈರುಳ್ಳಿ ತೆಗೆದುಕೊಳ್ಳಬೇಕು. ಈಗ ಮಿಕ್ಸಿಜಾರಿಗೆ ಈರುಳ್ಳಿಯ ಹೋಳುಗಳನ್ನು ಮಾಡಿ ಹಾಕಿ ಬೀಸಿ ಪೇಸ್ಟ್ ಮಾಡಬೇಕು. ನಂತರ ಜರಡಿ ಹಿಡಿದು ಈರುಳ್ಳಿಯ ರಸ ತೆಗದುಕೊಳ್ಳಬೇಕು. ಕೈಯಿಂದ ಬೇಕಾದರೂ ಹಿಂಡಬಹುದು. ಈರುಳ್ಳಿಯನ್ನು ರುಬ್ಬುವಾಗ ಸ್ವಲ್ಪ ನೀರು ಬೇಕಾದರೂ ಹಾಕಬಹುದು. ನಂತರ ಲವಂಗ ಮತ್ತು ಮೆಣಸಿನಕಾಳನ್ನು ಕುಟ್ಟಾಣಿಯಲ್ಲಿ ಕುಟ್ಟಬೇಕು.

ನಂತರ ಆ ಪುಡಿಯನ್ನು ಈರುಳ್ಳಿ ರಸಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದಕ್ಕೆ 1 ಲೋಟದಷ್ಟು ನೀರನ್ನು ಹಾಕಬೇಕು. ಅದಕ್ಕೆ ಡೆಟಾಲ್ ಸೋಪ್ ನ್ನು ಚೂರು ಮಾಡಿ ಹಾಕಬೇಕು. ಡೆಟಾಲ್ ಸೋಪಿನ ಪರಿಮಳ ಹಲ್ಲಿಗಳಿಗೆ ಇಷ್ಟವಾಗುವುದಿಲ್ಲ. 5 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಸೋಪು ಚೆನ್ನಾಗಿ ಕರಗಬೇಕು. ಇಲ್ಲವಾದಲ್ಲಿ ಡೆಟಾಲ್ ಆಯಿಲ್ ಬೇಕಾದರೂ ಹಾಕಬಹುದು. ಎರಡರಿಂದ ಮೂರು ಚಮಚ ಹಾಕಬೇಕು. ಈಗ ಎಲ್ಲ ಮುಗಿದಿದೆ. ನಂತರ ಹಲ್ಲಿ ಎಲ್ಲಿ ಬರುತ್ತದೆಯೋ ಅಲ್ಲಿ ಒಂದು ಹತ್ತಿಯ ಚೂರು ತೆಗೆದುಕೊಂಡು ಮಾಡಿದ ದ್ರಾವಣಕ್ಕೆ ಅದ್ದಿ ಒಂದು ಸಣ್ಣ ಪ್ಲೇಟಿನಲ್ಲಿ ಇಡಬೇಕು.

ಇಲ್ಲವಾದಲ್ಲಿ ಸ್ಪ್ರೇ ಬಾಟಲ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಸೋಸಿಕೊಂಡು ಹಾಕಬೇಕು. ನಂತರ ಹಲ್ಲಿ ಬಂದಾಗ ಸ್ಪ್ರೇ ಮಾಡಬೇಕು. ಈತರಹ ಮಾಡಿದರೆ ವರ್ಷವಾದರೂ ಹಲ್ಲಿ ಮನೆಯ ಒಳಗೆ ಬರುವುದೇ ಇಲ್ಲ. ಹಲ್ಲಿ ಮನೆಯ ಕಡೆ ಮುಖ ಹಾಕಿಯೂ ಸಹ ಮಲಗುವುದಿಲ್ಲ. ಇದರಿಂದ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಬಹುದು.

Leave a Reply

Your email address will not be published. Required fields are marked *