ಆಯುರ್ವೇದವು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ವೇದಗಳ ಕಾಲದಿಂದಲೂ ಅದರ ಅಗತ್ಯತೆ ಮತ್ತು ಪ್ರಗತಿಯ ದೃಷ್ಟಿಯಿಂದ ಅಭಿವೃದ್ದಿಯ ಪಥದಲ್ಲಿ ಸಾಗುತ್ತಾ ಬಂದಿದೆ. ಇಂದಿನ ಮುಂದುವರೆಯುತ್ತಿರುವಂತಹ ಜಗತ್ತಿನಲ್ಲಿ ಮನುಷ್ಯನ ಜೀವನದಲ್ಲಿ ಉಂಟಾಗುವ ಏರುಪೇರುಗಳಿಂದ ಪಾರಾಗಲು ನೈಸರ್ಗಿಕ ಚಿಕಿತ್ಸೆಯು ಪರಿಣಾಮಕಾರಿಯಾಗಿದ್ದು ತಮ್ಮನ್ನು ತಾವು ಪುನಶ್ಚೇತನಗೊಳಿಸಿಕೊಳ್ಳಲು ಒಂದು ಉತ್ತಮವಾದ ಮಾರ್ಗವಾಗಿದೆ. ಇತಿಹಾಸಪೂರ್ವ ಯುಗದಿಂದಲೂ ಭಾರತದಲ್ಲಿ ತನ್ನ ಪ್ರಭಾವವನ್ನು ಎಲ್ಲೆಡೆ ಹರಡಿಸಿರುವ ಆಯುರ್ವೇದವು ಇಂದು ಪರ್ಯಾಯ ಔಷಧದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಆದ್ದರಿಂದ ನಾವು ಒಂದು ಆಯುರ್ವೇದದ ಆಸ್ಪತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಉತ್ತರ ಕನ್ನಡ ಜಿಲ್ಲೆಯ ಅದ್ಭುತವಾದಂತಹ ಸಿರಸಿಯಲ್ಲಿ ಆಯುರ್ವೇದದ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಈ ಆಸ್ಪತ್ರೆಯ ಹೆಸರು ನಿಸರ್ಗಮನೆ. ಈ ಆಸ್ಪತ್ರೆಯ ನಿರ್ಮಾತೃ ಡಾಕ್ಟರ್ ವೆಂಕಟರಮಣ ಹೆಗಡೆ. ವೆಂಕಟರಮಣ ಹೆಗಡೆಯವರು ಮೂಲತಹ ಕೃಷಿ ಕುಟುಂಬದಲ್ಲಿ ಜನಿಸುತ್ತಾರೆ. ಇವರು ಪ್ರಕೃತಿ ಚಿಕಿತ್ಸೆ ಎಲ್ಲಿ ಆಸಕ್ತಿ ಹೊಂದಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರಿನಲ್ಲಿ ಬಿ ವೈ ಏನ್ ಎಸ್ ಗ್ರಾಜುಯೇಷನ್ ಅನ್ನು ಮುಗಿಸುತ್ತಾರೆ. ನಂತರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪದವಿಯನ್ನು ಮುಗಿಸುತ್ತಾರೆ.ನಂತರ ಅವರ ಕನಸಾಗಿರುವ ಪ್ರಕೃತಿ ಚಿಕಿತ್ಸೆಯ 60 ಬೆಡ್ ಗಳುಳ್ಳ ಆಸ್ಪತ್ರೆಯನ್ನು ಶಿರಸಿಯಲ್ಲಿ ಆರಂಭಿಸುತ್ತಾರೆ.
ನಿಸರ್ಗ ಹಾಸ್ಪಿಟಲ್ ಎಂದು ಆಸ್ಪತ್ರೆಗೆ ಹೆಸರನ್ನು ಇಡುತ್ತಾರೆ. ಈ ಆಸ್ಪತ್ರೆಗೆ ಒಂದು ಟ್ರಸ್ಟನ್ನು ನಿರ್ಮಾಣ ಮಾಡಿ ಆ ಟ್ರಸ್ಟ್ ಅಧ್ಯಕ್ಷತೆಯನ್ನು ಅವರೇ ವಹಿಸಿಕೊಳ್ಳುತ್ತಾರೆ.ಮತ್ತು ಈ ಆಸ್ಪತ್ರೆಯನ್ನು ಅದ್ಭುತವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ವೆಂಕಟ್ರಮಣ ಹೆಗಡೆ ಯವರು ಹೆಲ್ತ್ ಟಿಪ್ಸ್ ಗಳನ್ನು ಯುಟ್ಯೂಬ್ ಚಾನೆಲ್ ಗಳ ಮೂಲಕವೂ ಜನರಿಗೆ ನೀಡುತ್ತಿದ್ದಾರೆ. ಎಲ್ಲಾ ಬಗೆಯ ಕಾಯಿಲೆಗಳಿಗೂ ಕೂಡ ನಿಸರ್ಗ ಮನೆಯಲ್ಲಿ ಉತ್ತಮಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದನ್ನು ಸ್ವತಹ ಅಲ್ಲಿ ಚಿಕಿತ್ಸೆಯನ್ನು ಪಡೆದವರು ಉತ್ತಮ ಅಭಿಪ್ರಾಯವನ್ನು ನೀಡುತ್ತಾರೆ.
ಶಿರಸಿಯ ಅನಂತರಾವ್ ಬಿಳಗಿ ನಿಸರ್ಗ ಆಸ್ಪತ್ರೆಯಲ್ಲಿ ಹದಿನೈದು ವರ್ಷ ಯಶಸ್ವಿಯಾಗಿ ಅಧ್ಯಕ್ಷರಾಗಿ ಮತ್ತು ವೈದ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಡಾಕ್ಟರ್ ವೆಂಕಟರಮಣ ಹೆಗಡೆಯವರಿಗೆ ನಿಸರ್ಗ ಮನೆ ಕನಸಿನ ಕೂಸಾಗಿತ್ತು. ಇದನ್ನು ಅವರು ನಿರ್ಮಿಸಿ ಅಲ್ಲಿ ಪ್ರಕೃತಿ ಚಿಕಿತ್ಸೆ, ಯೋಗ, ಮಾನಸಿಕ ಆರೋಗ್ಯ, ಮನೆ ಮತ್ತು ಆಹಾರದಿಂದ ಆರೋಗ್ಯ ಹೀಗೆ ಅನೇಕ ವಿಚಾರಗಳನ್ನು ಮತ್ತು ಔಷಧವನ್ನು ನೀಡುವ ಸಲುವಾಗಿ ಇದನ್ನು ಸ್ಥಾಪಿಸಿದ್ದಾರೆ. ಡಾಕ್ಟರ್ ವೆಂಕಟ್ರಮಣ ಹೆಗಡೆಯವರು ಈ ಕುರಿತಾಗಿ ಜನರಿಗೆ ಉಪಯುಕ್ತವಾಗುವಂತಹ ಅನೇಕ ಮಾಹಿತಿಗಳನ್ನು ಅನೇಕ ವಾಹಿನಿಗಳ ಮೂಲಕ ನೀಡುತ್ತಿದ್ದಾರೆ. ಇಂತಹ ಇವರ ಅವರ ನಿಸ್ವಾರ್ಥ ಸೇವೆಯನ್ನು ಅವರ ಬಳಿ ಚಿಕಿತ್ಸೆಯನ್ನು ಪಡೆದವರು ಹೊಗಳಿ ಗೌರವಿಸುತ್ತಾರೆ.