ಸಾಮಾನ್ಯವಾಗಿ ಒಳ ಗದ್ದೆಗಳಲ್ಲಿ ಹಾಗೂ ಮನೆಯಿಂದ ಹೊರಗಡೆ ಕೆಲಸ ಮಾಡುವಂತ ಜನರಲ್ಲಿ ಈ ಪದಗಳು ಬಿರುಕು ಬಿಟ್ಟಿರುವಂತ ಸಮಸ್ಯೆ ಕಂಡುಬರುತ್ತದೆ ಇಂತಹ ಸಮಸ್ಯೆ ಹೆಚ್ಚಾಗಿ ಚಳಿಗಾಲದಲ್ಲಿ ಕಂಡು ಬರುತ್ತದೆ. ಈ ಸಮಸ್ಯೆ ಇದ್ರೆ ನಡೆದಾಡಲು ಕೂಡ ಕಷ್ಟವಾಗುತ್ತದೆ ಅಷ್ಟರ ಮಟ್ಟಿಗೆ ನೋವು ನೀಡುತ್ತದೆ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾರುಕಟ್ಟೆಯಲ್ಲಿ ಹಲವು ಬಗೆ ಬಗೆಯ ಔಷಧಿಗಳಿವೆ ಆದ್ರೆ ಅವುಗಳಿಗಿಂತ ಮನೆಯಲ್ಲಿ ಅತಿ ಸುಲಭವಾಗಿ ನೀವೇ ಸ್ವತಃ ತಯಾರಿಸುವಂತ ಈ ಮನೆಮದ್ದು ನಿಮ್ಮ ಬಿರುಕು ಬಿಟ್ಟ ಪಾದಗಳಿಗೆ ಪರಿಹಾರವನ್ನು ನೀಡುವಂತ ಕೆಲಸ ಮಾಡುವುದು.

ಅಷ್ಟಕ್ಕೂ ಆ ಮನೆಮದ್ದು ಯಾವುದು ಅದನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ತಿಳಿಯುವುದಾದರೆ, ನಿಂಬೆ ಅಡುಗೆಗೆ ಬಳಸುವಂತ ನಿಂಬೆ ಬಿರುಕು ಬಿಟ್ಟ ಪಾದಗಳಿಗೆ ಪರಿಹಾರ ನೀಡುವಂತ ಕೆಲಸವನ್ನು ಮಾಡುತ್ತದೆ, ಹೌದು ನಿಂಬೆಹಣ್ಣಿನ ಸಿಪ್ಪೆಯಿಂದ ಬಿರುಕು ಬಿಟ್ಟ ಪಾದಗಳಿಗೆ ಚನ್ನಾಗಿ ತಿಕ್ಕಿ 5ರಿಂದ 10 ನಿಮಿಷಗಳವರೆಗೆ ತಿಕ್ಕಿದ ನಂತರ ಬೆಚ್ಚಗಿನ ನೀರಿನಲ್ಲಿ ಎರಡು ಪಾದಗಳನ್ನು ನೀರಿನಲ್ಲಿ ಇಡಿ. ಸ್ವಲ್ಪ ಹೊತ್ತಿನ ನಂತರ ಪಾದಗಳನ್ನು ನೀರಿನಿಂದ ಹೊರ ತಗೆದು ಅಡುಗೆಗೆ ಬಳಸುವಂತ ಅರಿಶಿನವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಆ ಮಿಶ್ರಣವನ್ನು ಪಾದಗಳಿಗೆ ಹಚ್ಚಿ, ಹೀಗೆ ಮಾಡುವುದರಿಂದ ಬಿರುಕು ಬಿಟ್ಟ ಪಾದಗಳು ಸರಿಹೋಗುತ್ತದೆ ಅಷ್ಟೇ ಅಲ್ದೆ ಒರಟಾಗಿರುವಂತ ಪಾದದ ಚಮರ್ಗಳು ಮೃದುವಾಗುತ್ತದೆ.

ಇನ್ನು ನಿಂಬೆಹಣ್ಣಿನ ಮತ್ತೊಂದು ಉಪಯೋಗ ಹೇಳುವುದಾದರೆ ಮುಖದಲ್ಲಿ ಮೊಡವೆ ಆಗಿರುವಂತ ಜಾಗಕ್ಕೆ ನಿಂಬೆ ರಸದೊಂದಿಗೆ ಕರಿಮೆಣಸು ಕಾಳನ್ನು ಅರೆದು ಮೊಡವೆ ಎದ್ದಿರುವಂತ ಜಾಗಕ್ಕೆ ಹಚ್ಚಿದರೆ ಮೊಡವೆ ಇಲ್ಲದಂತಾಗುವುದು. ಈ ಉಪಯುಕ್ತ ವಿಚಾರ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಬಹಳಷ್ಟು ಜನಕ್ಕೆ ಮನೆಯಲ್ಲಿಯೇ ಇರುವಂತ ಪದಾರ್ಥಗಳನ್ನು ಬಳಸಿ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನ ತಿಳಿದಿರುವುದಿಲ್ಲ ಹಾಗಾಗಿ ಇವುಗಳನ್ನು ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

By

Leave a Reply

Your email address will not be published. Required fields are marked *