ಇವತ್ತಿನ ದಿನದಲ್ಲಿ ಎಲ್ಲ ಹೆಂಗೆಳೆಯರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತುಂಬಾ ನಿರತರಾಗಿ ಇರ್ತಾರೆ. ಸಿಕ್ಕಂತಹ ಸ್ವಲ್ಪ ಸಮಯದಲ್ಲೇ ಮನೆಯ ಒಳಗೂ ಹೊರಗೂ ಕೆಲಸ ಮಾಡಬೇಕು. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಆಗಲಿ ಅಥವಾ ಮನೆಯಲ್ಲಿ ಇರುವ ಮಹಿಳೆಯರಿಗೆ ಆಗಲಿ ಪ್ರತಿ ದಿನವೂ ಏನಾದರೂ ಬೇರೆ ಬೇರೆ ರೀತಿಯ ಅಡುಗೆ ತಿನಿಸುಗಳನ್ನು ಮಾಡಬೇಕು ಅಂದ್ರೆ ಸ್ವಲ್ಪ ತಲೆ ಗಿರ್ರ್ ಅನ್ನೋ ವಿಚಾರವೇ. ಎಲ್ಲರಿಗೂ ಮಾಡಿರುವಂತಹ ಅಡುಗೆ ರುಚಿಯಾಗಿಯೂ ಇರಬೇಕು ಹಾಗೂ ಕಡಿಮೆ ಸಮಯದಲ್ಲಿಯೂ ಆಗಬೇಕು. ಅದಕ್ಕಾಗಿಯೇ ಬೇಗ ಅಂದ್ರೆ, ಐದು ನಿಮಿಷದಲ್ಲಿ ಮಾಡಬಹುದಾದ ರುಚಿಯಾಗಿ ಟೊಮೆಟೊ ಸಾರನ್ನ ಹೇಗೆ ಮಾಡೋದು ಅಂತ ನೋಡೋಣ.
ಒಂದು ಪಾತ್ರೆಯಲ್ಲಿ ನೀರನ್ನ ಬಿಸಿ ಮಾಡಲು ಇಟ್ಟು ನೀರು ಬಿಸಿ ಆದಮೇಲೆ ತೊಳೆದು ಕಟ್ ಮಾಡಿದ ಐದು ಟೊಮೆಟೊ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು. ನಂತರ ಅದರ ನೀರನ್ನು ತೆಗೆದು ಟೊಮೆಟೊ ಬೇರೆ ಮಾಡಿಟ್ಟುಕೊಂಡು ತಣ್ಣಗಾಗಲು ಬಿಡಬೇಕು. ಟೊಮೆಟೊ ತಣ್ಣಗಾದ ಮೇಲೆ ಅದನ್ನ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದ್ ಕಾಡಾಯಿಗೆ ಎರಡು ಸ್ಪೂನ್ ತುಪ್ಪ ಹಾಕಿ( ತುಪ್ಪ ಹಾಕಿದರಿಂದ ರುಚಿ ಚೆನ್ನಾಗಿ ಬರತ್ತೆ) ಬಿಸಿ ಆದಮೇಲೆ ಅರ್ಧ ಸ್ಪೂನ್ ಅಷ್ಟು ಸಾಸಿವೆ, ಸ್ವಲ್ಪ ಇಂಗು, ಎರಡು ಕೆಂಪು ಮೆಣಸಿನ ಕಾಯಿ ಚೂರು , ಕರಿಬೇವಿನ ಎಲೆ ಹಾಗೂ ಪೇಸ್ಟ್ ಮಾಡಿಟ್ಟುಕೊಂಡಿರುವ ಟೊಮೆಟೊ ಪೇಸ್ಟ್ ಹಾಕಿ ಮುಚ್ಚಳ ಮುಚ್ಚಿ. ನಂತರ ಅದಕ್ಕೆ ಬೇಕಾದಷ್ಟು ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಶಿನ ಪುಡಿ, ಖಾರಕ್ಕೆ ಬೇಕಾದಷ್ಟು ಸಾಂಬಾರ್ ಪೌಡರ್ ಹಾಗೂ ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಎರಡು ಸ್ಪೂನ್ ಅಷ್ಟು ತೆಂಗಿನ ತುರಿ ಸೇರಿಸಿ (ಬೇಕಿದ್ದರೆ ಮಾತ್ರ) ಒಂದು ಕುದಿ ಕುದಿಸಿ ಗ್ಯಾಸ್ ಆಫ್ ಮಾಡಿ. ರುಚಿಯಾದ ಕಡಿಮೆ ಸಮಯದಲ್ಲಿ ಟೊಮೆಟೊ ಸಾರು ರೆಡಿ