ಈಗಿನ ಕಾಲದಲ್ಲಿ ಏನೇ ತಿಂದರೂ ಕುಡಿದರೂ ಬಹಳ ಬೇಗನೆ ಅದರ ಪರಿಣಾಮವನ್ನು ಕಾಣುತ್ತೇವೆ. ಕೆಲವರಿಗೆ ತಂಪಾದ ಪಾನೀಯ ಆಹಾರ ಇವುಗಳನ್ನು ಸೇವಿಸಿದರೆ ಬೇಗನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ತಂಪು ಪಾನೀಯಗಳಿಂದ ಅಥವಾ ಮಳೆಗಾಲದಲ್ಲಿ ಶೀತ ಕೆಮ್ಮು ಆದಾಗ ಗಂಟಲು ನೋವು ಆಗತ್ತೆ ಗಂಟಲಲ್ಲಿ ಕೆರೆತ ಉಂಟಾಗತ್ತೆ ಇಂದು ಗಂಟಲು ನೋವು, ಗಂಟಲ ಕೆರೆತ ಹಾಗೂ ಯಾವುದೇ ರೀತಿಯ ಗಂಟಲು ಇನ್ಫೆಕ್ಷನ್ ಗೆ ಸಂಬಂಧಿಸಿದ ಸಮಸ್ಯೆ ಇದ್ದರೂ ಸಹ ಮನೆಯಲ್ಲಿಯೇ ದೊರೆಯುವ ಈ ವಸ್ತುಗಳನ್ನ ಬಳಸಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನ ತಿಳಿಸಿ ಕೊಡ್ತೀವಿ ನೋಡಿ.

ಗಂಟಲ ಕೆರೆತ, ಗಂಟಲು ಊರಿಗೆ ಒಂದು ಸುಲಭವಾದ ಮನೆ ಮದ್ದು ಇದು. ಒಂದು ಪಾತ್ರೆಯನ್ನು ಬಿಸಿ ಮಾಡಲು ಇಟ್ಟು ಪಾತ್ರೆ ಸ್ವಲ್ಪ ಬಿಸಿ ಆಗುತ್ತಾ ಇದ್ದಂತೆ ಅದಕ್ಕೆ ಒಂದು ಟಿ ಸ್ಪೂನ್ ಅರಿಶಿಣದ ಪುಡಿ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೂ ಬಿಸಿ ಮಾಡಿ ಅದಕ್ಕೆ ಒಂದು ವರೆ ಸ್ಪೂನ್ ಅಷ್ಟು ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ ಬೆಲ್ಲ ಚೆನ್ನಾಗಿ ಕರಗುವವರೆಗು ಬಿಸಿ ಮಾಡಿ ಮಿಕ್ಸ್ ಮಾಡಿ ಬೆಲ್ಲ ಕರಗಿದ ನಂತರ ಗ್ಯಾಸ್ ಆಫ್ ಮಾಡಿ ಬೆಲ್ಲ ಅರಿಶಿಣದ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿಕೊಂಡು ಸ್ವಲ್ಪ ಬಿಸಿ ಇರುವಾಗಲೇ ಅದನ್ನ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಬೇಕು.

ಈ ಬೆಲ್ಲ ಮತ್ತು ಅರಿಶಿಣದ ಉಂಡೆಗಳನ್ನು ದಿನಕ್ಕೆ ಮೂರು ಅಥವಾ ನಾಲ್ಕು ಉಂಡೆಗಳನ್ನು ಸೇವಿಸಬಹುದು. ಈ ಉಂಡೆಯನ್ನ ಬಾಯಲ್ಲಿ ಇಟ್ಟುಕೊಂಡು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬಿಸಿ ನೀರನ್ನ ಕುಡಿಯಬೇಕು. ಅಥವಾ ಈ ಉಂಡೆಯನ್ನು ಬಾಯಲ್ಲಿ ಇಟ್ಟುಕೊಂಡು ಚಾಕಲೇಟ್ ತರ ಕೂಡ ತಿನ್ನಬಹುದು. ನಂತರ ಬಿಸಿ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಇದರ ರಸ ಗಂಟಲಿಗೆ ಹೋಗಿ ಗಂಟಲಲ್ಲಿ ಆಗುವಂತಹ ಕಿರಿ ಕಿರಿ , ಗಂಟಲು ಕೆರೆತ ಏನೇ ಇದ್ದರೂ ಸಹ ಕಡಿಮೆ ಆಗತ್ತೆ. ಇದನ್ನ ಚಿಕ್ಕ ಮಕ್ಕಳಿಗೂ ಸಹ ಕೊಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!