Ultimate magazine theme for WordPress.

ಶೀತ ಕೆಮ್ಮು ಜ್ವರದಿಂದ ತಕ್ಷಣವೇ ರಿಲೀಫ್ ನೀಡುವ ಜೊತೆಗೆ ಶರೀರಕ್ಕೆ ಟಾನಿಕ್ ನಂತೆ ಕೆಲಸ ಮಾಡುವ ಮನೆಮದ್ದು

0 15

ಮಳೆಗಾಲ ಆರಂಭ ಆಗಿರುವುದರಿಂದ ಈ ಸೀಸನ್ ನಲ್ಲಿ ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ನೆಗಡಿ ಕೆಮ್ಮು ಶೀತ ಅಂತಹ ರೋಗ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಯಾವತ್ತಿಗೂ ಕೂಡ ಊಟ ತಿಂಡಿ ನಿದ್ರೆ ಸರಿಯಾಗಿ ಆಗುವುದಿಲ್ಲ. ಗಂಟಲು ನೋವು ಬಂದಾಗ ಅಂತ ಏನಾದ್ರೂ ತಿನ್ನುವಾಗ ಅಥವಾ ಕುಡಿಯುವಾಗ ತುಂಬಾನೇ ನೋವಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಿಗೆ ಶೀತ ಕೆಮ್ಮು ದಡಾರ ಅಂತಹ ಕಾಯಿಲೆಗಳು ಬಂದುಬಿಟ್ಟರೆ ಅಂತ ಶಾಲೆಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದೇ ಹೆಚ್ಚಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ನಾವು ಇಂಗ್ಲೀಷ್ ಔಷಧಿಗಳ ಮೊರೆಹೋಗುತ್ತೇವೆ. ಹೆಚ್ಚಾಗಿ ಇಂಗ್ಲಿಷ್ ಔಷಧಿಗಳನ್ನು ಬಳೆಸುವ ಬದಲು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದನ್ನು ಮಾಡಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಒಂದು ರೀತಿಯ ಟಾನಿಕ್ ಮಾಡಿಕೊಂಡು ಹೇಗೆ ಸಣ್ಣ ಪುಟ್ಟ ಜ್ವರ ತಂಡಿ ಕೆಮ್ಮು ಶೀತ ಇವುಗಳನ್ನು ಕಡಿಮೆ ಮಾಡಿಕೊಳ್ಳೋದು ಅನ್ನೋದನ್ನ ನೋಡೋಣ.

ಈ ಟಾನಿಕ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಹ ಬಳಸಬಹುದು ಕುಡಿಯುವುದರಿಂದ ಒಂದೇ ದಿನದಲ್ಲಿ ಶೀತ ಜ್ವರ ಕಡಿಮೆ ಆಗಿ ಆರಾಮ್ ಎನಿಸಿಕೊಳ್ಳುತ್ತದೆ. ಈ ಟಾನಿಕ್ ಒಂದಾಗಿ ಮಕ್ಕಳಿಗೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಅದನ್ನು ಹೇಗೆ ಮಾಡುವುದು ಅಂತ ನೋಡುವುದಾದರೆ,, ಮೊದಲು ಒಂದು ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಏಳರಿಂದ ಎಂಟು ಕಾಳು ಮೆಣಸು, ಎರಡು ಏಲಕ್ಕಿ, ಮೂರರಿಂದ ನಾಲ್ಕು ಲವಂಗ, ಅರ್ಧ ಟೀ ಸ್ಪೂನ್ ನಷ್ಟು ಓಂಕಾಳು, ನಾಲ್ಕರಿಂದ ಐದು ತೊಳೆದು ಸ್ವಚ್ಛಗೊಳಿಸಿದ ತುಳಸಿ ಎಲೆ, ಅರ್ಧ ಟೀ ಸ್ಪೂನ್ ನಷ್ಟು ಅರಿಶಿನ ಪುಡಿ, ಅರ್ಧ ಟೀ ಸ್ಪೂನ್ ಶುಂಠಿ ಪುಡಿ ಹಾಗೂ ಒಂದು ಸಣ್ಣ ಚೂರು ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಸಾಮಾನ್ಯವಾಗಿ ಐದರಿಂದ ಹತ್ತು ನಿಮಿಷ ಕುದಿಸಿ ಸ್ವಲ್ಪ ಹೊತ್ತು ತಣಿಯಲು ಬಿಟ್ಟು ತಣ್ಣಗಾದ ನಂತರ ಇದನ್ನು ಸೋಸಿ ಕೊಳ್ಳಬೇಕು.

ಈ ರೀತಿ ಟಾನಿಕ್ ಅನ್ನು ಮಾಡಿಟ್ಟುಕೊಂಡು ಫ್ರಿಜ್ಜಿನಲ್ಲಿ ಇಡದೇ ಹೊರಗಡೆ ಆದರೂ ನಾಲ್ಕರಿಂದ ಐದು ದಿನದವರೆಗೂ ಇಟ್ಟುಕೊಳ್ಳಬಹುದು. ಈ ಮನೆಮದ್ದನ್ನು ದೊಡ್ಡವರಿಗೆ ಆದರೆ ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆ ಮಧ್ಯಾನ ರಾತ್ರಿ ಹೀಗೆ ಒಂದೊಂದು ಚಮಚದಂತೆ ತೆಗೆದುಕೊಳ್ಳಬೇಕು. ಇದು ಚಿಕ್ಕ ಮಕ್ಕಳಿಗೆ ಆದರೆ ಬೆಳಗ್ಗೆ ಹಾಗೂ ಸಂಜೆ 2 ಹೊತ್ತು ಒಂದೊಂದು ಚಮಚದಂತೆ ಕೊಡಬೇಕು. ಇದನ್ನು ಒಂದು ದಿನ ತೆಗೆದುಕೊಳ್ಳುವುದರಿಂದ ನೆಗಡಿ ಕೆಮ್ಮು ಜ್ವರ ಬಂದರೆ ನೀವು ಗುಣಮುಖವಾಗುವ ವ್ಯತ್ಯಾಸವನ್ನು ಕಾಣಬಹುದು.

ಈ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸಮಯಗಳಲ್ಲಿ ಕಾಳುಮೆಣಸನ್ನು ಉಪಯೋಗಿಸುವುದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಕಾಳುಮೆಣಸಿನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಕ್ರಿಯವಾಗಿ ಜೀರ್ಣಕ್ರಿಯೆ ಹೆಚ್ಚುವಂತೆ ನೋಡಿಕೊಳ್ಳುತ್ತದೆ. ಏಲಕ್ಕಿ ಹಾಕುವುದರಿಂದ ಇದು ಟಾನಿಕ್ ಇಗೆ ಒಂದು ರೀತಿಯ ಪರಿಮಳವನ್ನು ನೀಡುತ್ತದೆ ಹಾಗೂ ವಾಂತಿ ಬರದಂತೆ ತಡೆಯುತ್ತದೆ. ಲವಂಗ ದಲ್ಲಿ ಆಂಟಿ-ಬ್ಯಾಕ್ಟಿರಿಯಲ್ ಗುಣಗಳು ಹೆಚ್ಚಾಗಿರುವುದರಿಂದ ಲವಂಗ ನಮ್ಮ ದೇಹವನ್ನು ಹಲವಾರು ಇನ್ಫೆಕ್ಷನ್ ಗಳಿಂದ ರಕ್ಷಿಸುತ್ತದೆ. ಲವಂಗ ಮುಖ್ಯವಾಗಿ ರೋಗನಿರೋಧಕ ಶಕ್ತಿ ನಡೆಸುವುದರ ಜೊತೆಗೆ ನೆಗಡಿ ಕೆಮ್ಮು ಜ್ವರ ಗಂಟಲು ನೋವು ಬರದಂತೆ ತಡೆಯುತ್ತದೆ. ಪ್ರತಿದಿನ ಎರಡು ಲವಂಗವನ್ನು ಸೇವಿಸುವುದರಿಂದ ಇದು ನಮ್ಮ ಲಿವರನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಓಂಕಾಳು ನಮ್ಮ ಜೀರ್ಣಕ್ರಿಯೆಗೆ ಸಹಾಯ ಕಾರ್ಯ ಮಾಡುವುದರ ಜೊತೆಗೆ ಶೀತ ಕೆಮ್ಮು ನೆಗಡಿ ಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನೆಗಡಿ ಹೆಚ್ಚಾದಾಗ ಒಂದು ಬಟ್ಟೆಯಲ್ಲಿ ಕಾಳನ್ನು ಪುಡಿಮಾಡಿಟ್ಟುಕೊಂಡು ಅದರ ವಾಸನೆಯನ್ನು ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ. ತುಳಸಿಯಲ್ಲಿ ಆಂಟಿ ಬಯೋಟಿಕ್ , ಆಂಟಿ ಫಂಗಲ್ ಗುಣಗಳು ಇರುತ್ತದೆ. ಅರಿಶಿನದಲ್ಲಿ ಆಂಟಿ ಇನ್ಫ್ಲಾಮೇಟರಿ ಗುಣಗಳು ಹೆಚ್ಚಾಗಿರುತ್ತವೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಅಂಶ ಶರೀರದಲ್ಲಿರುವಂತಹ ಕೆಟ್ಟ ವಿಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Leave A Reply

Your email address will not be published.